1 ಕೋಟಿ ಬೇಡಿಕೆಯಿಟ್ಟ ನಟಿ ವಿರುದ್ಧ 5 ಕೋಟಿ ಮಾನನಷ್ಟ ಕೇಸ್ ದಾಖಲಿಸಿದ ವೈದ್ಯೆ
ತಮಿಳು ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ರೈಜಾ ವಿಲ್ಸನ್ ಫೇಶಿಯಲ್ ಮಾಡಿಸಲು ಹೋಗಿ ಯಡವಟ್ಟು ಮಾಡಿಕೊಂಡಿದ್ದ ಘಟನೆ ವಾರದ ಹಿಂದೆ ವರದಿಯಾಗಿತ್ತು. ಮುಖದ ಕಾಂತಿ ಹಾಗೂ ಅಂದ ಹೆಚ್ಚಿಸಿಕೊಳ್ಳಬೇಕಿದ್ದ ನಟಿ ಮುಖ ಕೆಡಿಸಿಕೊಂಡು ಅದಕ್ಕೆ ತಜ್ಞೆಯೇ ಕಾರಣ ಎಂದು ಆರೋಪಿಸಿದ್ದರು.
'ಬೇಡ ಎಂದರೂ ಒತ್ತಾಯ ಮಾಡಿ ಹೊಸ ಟ್ರೀಟ್‌ಮೆಂಟ್ ಪ್ರಯೋಗ ಮಾಡಿದರು. ಅದರ ಅಡ್ಡ ಪರಿಣಾಮದಿಂದ ನನ್ನ ಸೌಂದರ್ಯ, ಮುಖ ಕೆಟ್ಟು ಹೋಗಿದೆ. ಅದಕ್ಕಾಗಿ ಆ ವೈದ್ಯೆ ಹಾಗೂ ಕ್ಲಿನಿಕ್ ಮ್ಯಾನೇಜ್‌ಮೆಂಟ್ ಒಂದು ಕೋಟಿ ಪರಿಹಾರ ನೀಡಬೇಕು' ಎಂದು ರೈಜಾ ವಿಲ್ಸನ್ ಬೇಡಿಕೆಯಿಟ್ಟಿದ್ದರು. ಇದೀಗ, ನಟಿಗೆ ವಿರುದ್ಧವಾಗಿ ಚರ್ಮರೋಗ ತಜ್ಞೆ ಭರವಿ 5 ಕೋಟಿ ಮಾನನಷ್ಟ ಕೇಸ್ ಹೂಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಮುಂದೆ ಓದಿ...

ನಟಿ ವಿರುದ್ಧ 5 ಕೋಟಿ ಮಾನನಷ್ಟ
ಚರ್ಮರೋಗ ತಜ್ಞೆ ಭೈರವಿ ನೀಡಿದ ಒತ್ತಾಯಪೂರ್ವಕ ಚಿಕಿತ್ಸೆಯಿಂದ ಅಡ್ಡ ಪರಿಣಾಮ ಬೀರಿದೆ ಎಂದು ಆರೋಪಿಸಿ ನಟಿ ರೈಜಾ ವಿಲ್ಸನ್ ಮದ್ರಾಸ್ ಕೋರ್ಟ್‌ನಲ್ಲಿ 1 ಕೋಟಿ ಮಾನನಷ್ಟು ಮೊಕದ್ದಮೆ ಹೂಡಿದ್ದಾರೆ ಎಂದು ವರದಿಯಾಗಿತ್ತು. ಇದೀಗ, ನಟಿಗೆ ತಿರುಗೇಟು ನೀಡಿರುವ ವೈದ್ಯೆ ಭೈರವಿ ನಟಿ ರೈಜಾ ವಿಲ್ಸನ್ ವಿರುದ್ಧ 5 ಕೋಟಿ ಮಾನನಷ್ಟು ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪ್ರೆಸ್‌ಮೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಮೂರು ಬಾರಿ ಚಿಕಿತ್ಸೆ ಪಡೆದಿದ್ದಾರೆ
ಪ್ರೆಸ್‌ಮೀಟ್‌ನಲ್ಲಿ ನಟಿ ರೈಜಾ ಕುರಿತು ಮಾಹಿತಿ ನೀಡಿರುವ ಭೈರವಿ ''ರೈಜಾ ಮೂರು ಬಾರಿ ವಿಭಿನ್ನ ಟ್ರೀಟ್‌ಮೆಂಟ್‌ಗಾಗಿ ನಮ್ಮ ಚಿಕಿತ್ಸಾಲಯಕ್ಕೆ ಭೇಟಿ ನೀಡಿದ್ದರು. ಮೊದಲ ಬಾರಿಗೆ ಚಿಕಿತ್ಸೆ ಪಡೆದದ್ದು ಜುಲೈ 18, 2020 ರಂದು, ನಂತರ ಮಾರ್ಚ್ 25, 2021 ರಂದು ಎರಡನೇ ಸಲ ಹಾಗೂ ಮೂರನೇ ಬಾರಿಗೆ ಏಪ್ರಿಲ್ 16 ರಂದು ಚಿಕಿತ್ಸೆ ತೆಗೆದುಕೊಂಡರು. ಆಮೇಲೆ ಇನ್ಸ್ಟಾಗ್ರಾಮ್ ಚಿಕಿತ್ಸೆ ತಪ್ಪಾಗಿದೆ ಎಂದು ಆರೋಪಿಸಿದ್ದಾರೆ. ಅದು ನಮ್ಮಿಂದ ಆಗಿಲ್ಲ'' ಎಂದು ವಿವರಣೆ ನೀಡಿದ್ದಾರೆ.

ಸಲಹೆ ಉಲ್ಲಂಘನೆ ಮಾಡಿದ್ದಾರೆ
''ರೈಜಾ ವಿಲ್ಸನ್ ಮುಖಕ್ಕೆ ಚಿಕಿತ್ಸೆ ಪಡೆದುಕೊಂಡಿಲ್ಲ. ಚರ್ಮಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆ ನಂತರ ಕೆನ್ನೆಯ ಮೇಲೆ, ಕಣ್ಣಿನ ಕೆಳಗೆ ಕೆಂಪು ಬಣ್ಣವು ಕೆಲ ಆಗಿವೆ. ಕೆಲವು ಅಭ್ಯಾಸಗಳನ್ನು ಅನುಸರಿಸಬೇಡಿ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುವ ಕಠಿಣ ವ್ಯಾಯಾಮಗಳಲ್ಲಿ ಪಾಲ್ಗೊಳ್ಳಬೇಡಿ ಎಂದು ನಾವು ಅವಳಿಗೆ ಸಲಹೆ ನೀಡಿದ್ದೇವೆ. ಸಲಹೆ ಉಲ್ಲಂಘನೆ ಮಾಡಿದ್ದಾರೆ'' ಎಂದು ಪ್ರತ್ಯಾರೋಪ ಮಾಡಿದ್ದಾರೆ.
Recommended Video

10 ವರ್ಷದಿಂದ ಈ ಚಿಕಿತ್ಸೆಯಲ್ಲಿದ್ದಾರೆ
ರೈಜಾ ವಿಲ್ಸನ್ ಅವರು ಖುದ್ದು ತಜ್ಞೆ ಭೈರವಿ ಸೆಂಥಿಲ್ ಬಳಿ ಹೇಳಿಕೊಂಡಿರುವಂತೆ ಸುಮಾರು 10 ವರ್ಷದಿಂದ ಈ ಚಿಕಿತ್ಸೆಯನ್ನು ವಿವಿಧ ವೈದ್ಯರಿಂದ ಮಾಡಿಸಿಕೊಂಡಿದ್ದಾರೆ. ಈಗ ನನ್ನ ಮೇಲೆ ಗೂಬೆ ಕೂರಿಸಲಾಗಿದೆ ಅಷ್ಟೇ ಎಂದು ಭೈರವಿ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ.


Click it and Unblock the Notifications











