Oscars 2025 ; ಬಾಕ್ಸಾಫೀಸ್‌ನಲ್ಲಿ ಕಂಗಾಲಾದ 'ಕಂಗುವ' ಆಸ್ಕರ್ ಅಂಗಳವನ್ನು ತಲುಪಿದ್ದು ಹೇಗೆ ?

ಆಸ್ಕರ್ ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ. ಆಸ್ಕರ್ ಪಡೆಯುವುದು ವಿಶ್ವದ ಹಲವು ನಿರ್ದೇಶಕರ ಜೀವಮಾನದ ಆಸೆ. ಆದರೆ ಆಸ್ಕರ್ ಪ್ರಶಸ್ತಿ ದೊರೆಯುವುದು ಇರಲಿ, ಪ್ರಶಸ್ತಿಗೆ ನಾಮ ನಿರ್ದೇಶನವಾದರೆ ಸಾಕು ಸಿನಿಮಾ ಹಾಗೂ ಸಾಕ್ಷ್ಯ ಚಿತ್ರತಂಡಕ್ಕೆ ಅದು ದೊಡ್ಡ ವಿಚಾರ. ಹೀಗಿರುವಾಗ ಬಾಕ್ಸಾಫೀಸ್‌ನಲ್ಲಿ ತೆರೆಗೆ ಬಂದ ಮೊದಲ ದಿನವೇ ಕೊನೆಯುಸಿರೆಳದ ಸೂರ್ಯ ಅಭಿನಯದ 'ಕಂಗುವ' ಆಸ್ಕರ್‌ ಅಂಗಳವನ್ನು ತಲುಪಿದೆ. ಅಚ್ಚರಿ ಎನಿಸಿದರೂ ಇದು ಸತ್ಯ.

ಹೌದು, ವಿಶ್ವದೆಲ್ಲೆಡೆಯಿಂದ 300ಕ್ಕೂ ಅಧಿಕ ಚಿತ್ರಗಳನ್ನು ಪ್ರಾಥಮಿಕ ಪಟ್ಟಿಯಲ್ಲಿ ಆಸ್ಕರ್‌ಗೆ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಚಿತ್ರಗಳಲ್ಲಿ ಭಾರತದ 07 ಚಿತ್ರಗಳಿವೆ. ಆ ಪೈಕಿ ಕಂಗುವ ಕೂಡ ಒಂದು ಅನ್ನುವುದೇ ವಿಶೇಷ. ಆಯ್ಕೆ ಸಮಿತಿ ಮುಂದಿನ ಹಂತಕ್ಕೆ ಕಂಗುವ ಚಿತ್ರವನ್ನು ಆಯ್ಕೆ ಮಾಡಿದರೆ ಅದಕ್ಕಿಂತ ದೊಡ್ಡ ಪವಾಡ ಇನ್ನೊಂದಿಲ್ಲ. ಯಾಕೆಂದರೆ, ಕಂಗುವ ಭಾರತದಲ್ಲಿ ಹೀನಾಯವಾಗಿ ಸೋಲನ್ನು ಕಂಡಿತ್ತು. ಲಾಭ ಇರಲಿ ಹಾಕಿದ ಬಂಡವಾಳ ಕೂಡ ನಿರ್ಮಾಪಕರಿಗೆ ಮರಳಿ ಬರಲಿಲ್ಲ.

Despite Mixed Box Office Reception Suriya s Kanguva Surprises as an Oscar 2025 Contender

ಆದರೂ ಕೂಡ ಸೋಲನ್ನೊಪ್ಪದ ನಿರ್ಮಾಪಕರು ಮತ್ತು ಸೂರ್ಯ ಈ ಚಿತ್ರವನ್ನು ಈಗ ಆಸ್ಕರ್‌ಗೆ ಕೊಂಡೊಯ್ದಿದ್ದಾರೆ. ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರ ಈ ನಡೆ ಈಗ ಕುತೂಹಲ ಕೆರಳಿಸಿದೆ.ಇನ್ನು ಆಯ್ಕೆಯಾದ ಮಾತ್ರಕ್ಕೆ ಕಂಗುವ ಆಸ್ಕರ್ ಕಣದ ಕೊನೆಯ ಹಂತಕ್ಕೆ ತಲುಪಿದೆ ಎಂದರ್ಥವಲ್ಲ. ಯಾಕೆಂದರೆ ಕಂಗುವ ಪ್ರಾಥಮಿಕ ಹಂತದಲ್ಲಿ ಅಷ್ಟೇ ಸ್ಥಾನ ಪಡೆದಿದೆ. ಹೀಗೆ ಸ್ಥಾನ ಪಡೆದ 323 ಚಿತ್ರಗಳಲ್ಲಿ ವೋಟಿಂಗ್ ಮೂಲಕ ಆಯ್ಕೆ ಮಾಡಲಾದ ಚಿತ್ರಗಳನ್ನು ಮುಂದಿನ ಹಂತಕ್ಕೆ ಕರೆದೊಯ್ಯಲಾಗುತ್ತೆ. ಜನವರಿ 8ರಿಂದ 12ರವರೆಗೆ ಅಕಾಡೆಮಿಯ ಸದಸ್ಯರಿಗೆ ವೋಟ್ ಮಾಡುವ ಅವಕಾಶ ಇದ್ದು, ಜನವರಿ 17ಕ್ಕೆ ಫೈನಲ್ ಲಿಸ್ಟ್ ಹೊರ ಬೀಳಲಿದೆ.ಆಗ ಮಾತ್ರ ಕಂಗುವ ನಿಜಕ್ಕೂ ಆಸ್ಕರ್‌ ಅಂಗಳವನ್ನು ತಲುಪಿದೆಯಾ ಇಲ್ಲವಾ ಎನ್ನುವ ಪ್ರಶ್ನೆಗೆ ಉತ್ತರ ಸ್ಪಷ್ಟವಾಗಿ ಸಿಗಲಿದೆ.

ಇನ್ನು ಕಂಗುವ ಹೊರತು ಪಡಿಸಿದರೆ ಪೃಥ್ವಿರಾಜ್ ಸುಕುಮಾರನ್ ಅಭಿನಯಿಸಿದ್ದ 'ಆಡು ಜೀವಿತಂ' ಚಿತ್ರ ಕೂಡ 97ನೇ ಆಸ್ಕರ್‌ನ ಪ್ರಾಥಮಿಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಎರಡು ಚಿತ್ರಗಳನ್ನು ಹೊರತು ಪಡಿಸಿದರೆ ಹಿಂದಿಯ 'ಸಂತೋಷ್' ಮತ್ತು 'ಸ್ವತಂತ್ರ್ಯ ವೀರ್ ಸಾವರ್ಕರ್', ಮಲಯಾಳಂ ಮತ್ತು ಹಿಂದಿಯಲ್ಲಿ ಮೂಡಿ ಬಂದಿರುವ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್', ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಸಿದ್ಧವಾದ 'ಗರ್ಲ್ಸ್‌ ವಿಲ್ ಬಿ ಗರ್ಲ್ಸ್' ಮತ್ತು ಬೆಂಗಾಳಿಯ 'ಪೆಟುಲು' ಚಿತ್ರಗಳಿವೆ.

ಅಂದ್ಹಾಗೇ ಅಮೆರಿಕದ ಮೆಟ್ರೋ ನಗರಗಳ ಯಾವುದೋ ಒಂದು ಚಿತ್ರಮಂದಿರದಲ್ಲಿ ಸತತ 07 ದಿನ ಪ್ರದರ್ಶನವಾದ ಚಿತ್ರ ಮಾತ್ರ, ಆಸ್ಕರ್ ಗೆ ಪರಿಗಣಿಸಲಾಗುತ್ತೆ ಎಂಬ ಸುದ್ದಿ ಇದೆ. ಆದರೆ ವಾಸ್ತವದಲ್ಲಿ ಇದು ಸುಳ್ಳು ಯಾಕೆಂದರೆ ಎಲ್ಲರಿಗೂ ಇದು ಅನ್ವಯವಾಗಲ್ಲ. ಕೇವಲ ಅಮೆರಿಕಾದಲ್ಲಿ ನಿರ್ಮಾಣವಾಗುವ ಚಿತ್ರಗಳಿಗೆ ಮಾತ್ರ ಈ ಷರತ್ತು ಅನ್ವಯವಾಗುತ್ತೆ. ಬೇರೆ ದೇಶದಲ್ಲಿ ನಿರ್ಮಾಣವಾದ ಸಿನಿಮಾಗಳನ್ನ ವಿದೇಶಿ ವಿಭಾಗ ಅಥವಾ ಅಂತರಾಷ್ಟ್ರೀಯ ಸಿನಿಮಾ ವಿಭಾಗಕ್ಕೆ ಪರಿಗಣಿಸಲಾಗುತ್ತೆ. ಅಕಾಡೆಮಿ ಅವಾರ್ಡ್ಸ್ ನ ಷರತ್ತು ಮತ್ತು ನಿಯಮಗಳ ಪುಸ್ತಕದಲ್ಲಿ ರೂಲ್ ನಂಬರ್ ಥರ್ಟಿನ್ ನಲ್ಲಿ ಇದನ್ನ ನಮೂದಿಸಲಾಗಿದೆ. ನಿಜಾ ಕಂಗುವ ಅಮೆರಿಕಾದಲ್ಲಿ ತೆರೆಗೆ ಬಂದಿತ್ತಾದರೂ ಆಸ್ಕರ್‌ನ ಬಾಗಿಲಿನವರೆಗೆ ಸದ್ಯ ಕಂಗುವ ಹೋಗಿದ್ದು ಈ ನಿಯಮದಡಿಯಲ್ಲಿಯೇ. ಇನ್ನುಳಿದಂತೆ ಈ ಜನವರಿ 17ರಂದು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಚಿತ್ರಗಳ ಫೈನಲ್ ಲಿಸ್ಟ್ ಹೊರ ಬೀಳಲಿದೆ. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 2ರಂದು ಅಮೆರಿಕಾದ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.

More from Filmibeat

Read more about: suriya oscar oscars 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X