ಮತ್ತೆ ಒಂದಾಗ್ತಾರಂತೆ ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್..!

ತಮಿಳು ನಟ ಧನುಷ್ ಹಾಗೂ ನಿರ್ದೇಶಕಿ ಐಶ್ವರ್ಯ ರಜನಿಕಾಂತ್ ದಂಪತಿ ಪರಸ್ಪರ ಭಿನ್ನಾಭಿಪ್ರಾಯಗಳಿಂದ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಕೆಲ ದಿನಗಳ ಹಿಂದೆ ಇಬ್ಬರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಇನ್ನು ಮುಂದೆ ಇಬ್ಬರ ದಾರಿ ಬೇರೆ ಬೇರೆ ಎಂದುಬಿಟ್ಟಿದ್ದರು.

ಡಿವೋರ್ಸ್ ಘೋಷಣೆ ಬಳಿಕ ಇಬ್ಬರೂ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ್ಗೆ ಮಕ್ಕಳಿಗಾಗಿ ಒಟ್ಟಿಗೆ ಸೇರುತ್ತಿದ್ದಾರೆ. ಅತ್ತ ಧನುಷ್ ಹೀರೊ ಆಗಿ ನಿರ್ದೇಶಕರಾಗಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ 'ರಾಯನ್' ಎನ್ನುವ ಸಿನಿಮಾ ನಿರ್ದೇಶಿಸಿ ನಟಿಸಿ ಗೆದ್ದರು. ಸದ್ಯ ಮತ್ತೆರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಐಶ್ವರ್ಯ ನಿರ್ದೇಶನದ 'ಲಾಲ್ ಸಲಾಂ' ಸಿನಿಮಾ ಕೆಲ ದಿನಗಳ ಹಿಂದೆ ತೆರೆಗೆ ಬಂದಿತ್ತು.

dhanush and aishwarya Rajinikanth planning to get back together Here s the truth

ರಜನಿಕಾಂತ್ ನಟನೆಯ 'ಲಾಲ್ ಸಲಾಂ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಸದ್ಯ ಚಿತ್ರವನ್ನು ಓಟಿಟಿಗೆ ತರುವ ಪ್ರಯತ್ನದಲ್ಲಿ ಆಕೆ ಕಾರ್ಯನಿರತರಾಗಿದ್ದಾರೆ. ಇದೆಲ್ಲದರ ನಡುವೆ ಕಳೆದ ವಾರ ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಸಿನಿಮಾ ಬಿಡುಗಡೆಯಾಗಿದೆ. ಜ್ಞಾನವೇಲ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವೆಟ್ಟೆಯಾನ್' ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇತ್ತೀಚೆಗೆ ಧನುಷ್ ಹಾಗೂ ಐಶ್ವರ್ಯ ಒಂದೇ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು.

ಧನುಷ್ ಹಾಗೂ ಐಶ್ವರ್ಯ ಪ್ರೀತಿಸಿ ಮದುವೆ ಆಗಿದ್ದರು. ಸ್ವತಃ ರಜನಿಕಾಂತ್ ಪುತ್ರಿಯೇ ಧನುಷ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಖ್ಯಾತ ತಮಿಳು ಸಿನಿಮಾ ನಿರ್ದೇಶಕ ಕಸ್ತೂರಿ ರಾಜ ಪುತ್ರ ಧನುಷ್ ತನ್ನದೇ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಬೆಳೆದವರು. ಒಂದ್ಕಾಲದಲ್ಲಿ ತಮ್ಮ ಲುಕ್ಸ್ ಕಾರಣಕ್ಕೆ ಟ್ರೋಲ್ ಆಗಿದ್ದವರು ಬಳಿಕ ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಮಟ್ಟಿಗೆ ಸಾಧಿಸಿದರು.

dhanush and aishwarya Rajinikanth planning to get back together Here s the truth

ತಮ್ಮ ಪುತ್ರಿ ಪ್ರೀತಿಯ ವಿಚಾರ ತಿಳಿದು ರಜನಿಕಾಂತ್ 2004ರಲ್ಲಿ ಇಬ್ಬರ ಮದುವೆ ಮಾಡಿಸಿದ್ದರು. ಆದರೆ ಮದುವೆಯಾಗಿ 18 ವರ್ಷಗಳ ಬಳಿಕ ಧನುಷ್- ಐಶ್ವರ್ಯ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಭಿನ್ನಾಭಿಪ್ರಾಯಗಳಿಂದ ಇಂತಾದೊಂದು ನಿರ್ಧಾರಕ್ಕೆ ಬಂದಿದ್ದರು.

ಎಕ್ಸ್ ಖಾತೆಯಲ್ಲಿ ಧನುಷ್ ತಮ್ಮ ಡಿವೋರ್ಸ್ ವಿಚಾರದ ಬಗ್ಗೆ ಬರೆದುಕೊಂಡಿದ್ದರು. "18 ವರ್ಷಗಳ ಒಟ್ಟಿಗೆ ಸ್ನೇಹಿತರು, ದಂಪತಿಗಳು, ಪೋಷಕರು ಹಾಗೂ ಪರಸ್ಪರ ಹಿತೈಷಿಗಳಾಗಿ ನಮ್ಮಿಬ್ಬರ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ದೂರಾಗುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಮ್ಮನ್ನು ನಾವು ಉತ್ತಮ ವ್ಯಕ್ತಿಗಳಾಗಿ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೇವೆ" ಎಂದು ಪೋಸ್ಟ್ ಮಾಡಿದ್ದರು.

ರಜನಿಕಾಂತ್ ಹಾಗೂ ಕಸ್ತೂರಿ ರಾಜಾ ಕುಟುಂಬ ಸದಸ್ಯರು ಧನುಷ್, ಐಶ್ವರ್ಯ ದೂರಾಗಬಾರದು ಎಂದು ಮನವಿ ಮಾಡಿದ್ದರು. ತಲೈವಾ ಈ ಬಗ್ಗೆ ಇಬ್ಬರ ಜೊತೆ ಸಾಕಷ್ಟು ಮಾತುಕತೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಡಿವೋರ್ಸ್ ಘೋಷಣೆ ಬಳಿಕ ಕೂಡ ರಜನಿಕಾಂತ್ ತಮ್ಮ ಮಗಳು ಹಾಗೂ ಅಳಿಯನನ್ನು ಒಪ್ಪಿಸಿ ಒಂದು ಮಾಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಸಾಧ್ಯವಾಗಿರಲಿಲ್ಲ.

ಸದ್ಯ ಧನುಷ್ ಹಾಗೂ ಐಶ್ವರ್ಯ ಮತ್ತೆ ಒಂದಾಗುತ್ತಾರೆ ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆ ನಡೆಯುತ್ತಿದೆ. ಮಗಳ ಜೀವನದ ಬಗ್ಗೆಯೇ ರಜನಿಕಾಂತ್ ಬಹಳ ಆಲೋಚಿಸುತ್ತಿದ್ದಾರೆ. ಅದೇ ಕಾರಣಕ್ಕೆ ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ತಂದೆಗಾಗಿ ಐಶ್ವರ್ಯ ಕೂಡ ಮತ್ತೆ ಧನುಷ್ ಜೊತೆ ಕೂಡಿ ಬಾಳಲು ನಿರ್ಧರಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಡಿವೋರ್ಸ್ ಅರ್ಜಿ ವಿಚಾರಣೆಗೆ ಇತ್ತೀಚೆಗೆ ಧನುಷ್ ಹಾಗೂ ಐಶ್ವರ್ಯ ಇಬ್ಬರೂ ಗೈರಾಗಿದ್ದರು. ಮತ್ತೆ ಒಟ್ಟಿಗೆ ಬದುಕುವ ಆಲೋಚನೆಯಲ್ಲಿರುವುದರಿಂದಲೇ ಅವರು ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ. ಹಾಗಾಗಿ ಅರ್ಜಿ ವಿಚಾರಣೆ ಮುಂದೂಡಲಾಗಿದೆ. ಇನ್ನು ಇತ್ತೀಚೆಗೆ ಮಾವನ 'ವೆಟ್ಟೆಯಾನ್' ಚಿತ್ರಕ್ಕೆ ಧನುಷ್ ಶುಭ ಕೋರಿದ್ದರು. ಅತ್ತೆ ಹಾಗೂ ಮಡದಿ ಬಂದು ಸಿನಿಮಾ ನೋಡಿದ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದ್ದಾರೆ. ಇದೆಲ್ಲವರ ಅವರ ಮನಸ್ಸು ಬದಲಾಗುತ್ತಿರುವುದಕ್ಕೆ ಸುಳಿವು ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ತಮಿಳು ಸಿನಿಮಾ ಪತ್ರಕರ್ತ ಸುಬೈರ್ ಕೂಡ ಧನುಷ್ ಹಾಗೂ ಐಶ್ವರ್ಯ ಒಂದಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅದಕ್ಕೆ ಇತ್ತೀಚೆಗೆ ಕೆಲ ಬೆಳವಣಿಗೆಗಳೇ ಸಾಕ್ಷಿ. ಇಬ್ಬರೂ ತಮ್ಮ ಕುಟುಂಬದವರ ಆಸೆಯಿಂದ ಒಟ್ಟಿಗೆ ಕೂಡ ಬಾಳಲು ಚಿಂತಿಸುತ್ತಿದ್ದಾರೆ. ಮುಖ್ಯವಾಗಿ ಮಕ್ಕಳ ಕಾರಣಕ್ಕೆ ಇಬ್ಬರು ಡಿವೋರ್ಸ್ ನಿರ್ಧಾರದಿಂದ ಸರಿಯಬಹುದು ಎನ್ನಲಾಗ್ತಿದೆ.

More from Filmibeat

English summary
Tamil Actor Dhanush to reconcile with ex-wife Aishwarya Rajinikanth?;
Read more about: dhanush rajinikanth kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X