ಧನುಷ್-ಐಶ್ವರ್ಯ ಡಿವೋರ್ಸ್! ರಜನಿಕಾಂತ್ ಪರಿಸ್ಥಿತಿಗೆ ಕಂಡು ಮರುಗಿದ ಫ್ಯಾನ್ಸ್
ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯ ಅವರನ್ನು ವಿವಾಹವಾಗಿದ್ದ ತಮಿಳು ನಟ ಧನುಷ್ ಸೋಮವಾರ ವಿವಾಹ ವಿಚ್ಛೇದನ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್‌ನಲ್ಲಿ ಧನುಷ್ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ.
Recommended Video
ಈ ಸುದ್ದಿ ಇದೀಗ ಎಲ್ಲರನ್ನು ಆಘಾತಕ್ಕೆ ಒಳಗಾಗಿಸಿದೆ. ಚಿತ್ರರಂಗದ ಹಲವರು ಸೇರಿದಂತೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 18 ವರ್ಷಗಳಿಂದಲೂ ಸಾಕಷ್ಟು ಅನ್ಯೋನ್ಯವಾಗಿದ್ದ ಧನುಷ್ ಮತ್ತು ಐಶ್ವರ್ಯ ನಡುವಲ್ಲಿ ಅಂತದ್ದೇನಾಯ್ತು ಎಂಬ ಬಗ್ಗೆ ಇದೀಗ ಚರ್ಚೆಗಳು ಆರಂಭವಾಗಿದೆ.
ಇದೆಲ್ಲದರ ಬೆನ್ನಲ್ಲೆ ಅದೆಷ್ಟೋ ಚಿತ್ರರಂಗದ ಕಲಾವಿದರು ಹಾಗೇ ಅಭಿಮಾನಿಗಳು ತಲೈವಾ ರಜನಿ ಅವರನ್ನು ನೆನೆದು ಬೇಸರಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಜನಿಕಾಂತ್ ಅವರಿಗೆ ಸಾಕಷ್ಟು ಮಂದಿ ಧೈರ್ಯ ತುಂಬುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.

ಧನುಷ್-ಐಶ್ವರ್ಯರ ಈ ನಿರ್ಧಾರಕ್ಕೆ ಕಾರಣ ಏನು
ಜನವರಿ 17ರಂದು ಸೋಶಿಯಲ್ ಮೀಡಿಯಾ ಮೂಲಕ ಧನುಷ್ ಶಾಕಿಂಗ್ ನ್ಯೂಸ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದರಲ್ಲಿ "18 ವರ್ಷಗಳು ಒಟ್ಟಿಗೆ ಸ್ನೇಹಿತರಂತೆ, ದಂಪತಿಗಳಾಗಿ, ಪೋಷಕರಾಗಿ ಮತ್ತು ಹಿತೈಷಿಗಳಾಗಿ ಪರಸ್ಪರರ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಾಗಿದೆ. ಇಂದು ನಾವು ನಮ್ಮ ಹಾದಿಗಳನ್ನು ಬೇರೆ ಮಾಡಿಕೊಳ್ಳುವ ಸ್ಥಳದಲ್ಲಿ ನಿಂತಿದ್ದೇವೆ. ಐಶ್ವರ್ಯಾ ಮತ್ತು ನಾನು ದಂಪತಿಗಳಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ ಮತ್ತು ಉತ್ತಮ ವ್ಯಕ್ತಿಗಳಾಗಿ ನಮ್ಮನ್ನು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳಿ" ಎಂದು ಬರೆದುಕೊಳ್ಳುವ ಮೂಲಕ ಬೇರೆ ಬೇರೆ ಆಗುತ್ತಿರುವ ವಿಚಾರವನ್ನು ಅಭಿಮಾನಿಗಳಿಗೆ ಮುಟ್ಟಿಸಿದ್ದರು.
ರಜನಿಕಾಂತ್‌ಗೆ ಧೈರ್ಯ ತುಂಬಿದ ನಟಿ
ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಚಿತ್ರರಂಗದ ಹಲವರು ಟ್ವೀಟ್ ಮಾಡುತ್ತಿದ್ದಾರೆ. ಜೊತೆಗೆ ರಜಿನಿಕಾಂತ್ ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ನಟಿ ನಯನತಾರ ಕೂಡ ಟ್ವಿಟ್ಟರ್‌ನಲ್ಲಿ ರಿಯಾಕ್ಟ್ ಮಾಡಿದ್ದು, "ಶಾಕಿಂಗ್ ನ್ಯೂಸ್.ಬಹುತೇಕ ಚಲನಚಿತ್ರ ನಟರು ಮತ್ತು ತಂತ್ರಜ್ಞರು ಸಮಾಜಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ" ಟ್ವೀಟ್ ಮಾಡಿದ್ದಾರೆ. ಜೊತೆಗೆ ಮತ್ತೊಮ್ಮೆ ಈ ಬಗ್ಗೆ ಟ್ವೀಟ್ ಮಾಡಿರುವ ನಯನತಾರ "ಧೈರ್ಯದಿಂದ ಇರಿ ರಜನಿಕಾಂತ್ ಸರ್.ಇದು ಎರಡನೇ ಬಾರಿಗೆ ನಿಮಗೆ ಇಂತ ಸುದ್ದಿ" ಎಂದು ಬರೆದುಕೊಂಡಿದ್ದಾರೆ.
ರಜನಿಕಾಂತ್‌ಗೆ ಧೈರ್ಯದಿಂದ ಇರಿ ಎನ್ನುತ್ತಿರುವ ಅಭಿಮಾನಿಗಳು
ಹೌದು ರಜನಿಕಾಂತ್ ಅವರ ಮತ್ತೋರ್ವ ಪುತ್ರಿ ಸೌಂದರ್ಯ ರಜನಿಕಾಂತ್ ಕೂಡ ಈ ಹಿಂದೆ ಡಿವೋರ್ಸ್ ಅನೌನ್ಸ್ ಮಾಡಿದ್ದರು. ಈಗ ಐಶ್ವರ್ಯ ಕೂಡ 18 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳುತ್ತಿರುವುದು ಸಹಜವಾಗೆ ತಂದೆ ರಜನಿಕಾಂತ್ ಅವರಿಗೆ ನೋವಾಗಿರುತ್ತದೆ. ಹೀಗಾಗಿ ಹಲವರು ರಜನಿಕಾಂತ್ ಅವರಿಗೆ ಸಮಾಧಾನ ಮಾಡುತ್ತಿದ್ದು, ಧೈರ್ಯದಿಂದಿರಿ ಎನ್ನುತ್ತಿದ್ದಾರೆ. ಮತ್ತೊಂದು ಕಡೆ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಕೂಡ ಸಾಲು ಸಾಲು ಟ್ವೀಟ್‌ಗಳನ್ನು ಮಾಡಿ ರಜನಿಕಾಂತ್ಅವರಿಗೆ ಧೈರ್ಯ ತುಂಬುತ್ತಿದ್ದಾರೆ. ಅದೆಷ್ಟೋ ರಜನಿಕಾಂತ್ ಫ್ಯಾನ್ಸ್‌ಗೂ ಈ ಸುದ್ದಿಯನ್ನು ಕೇಳಿ ಬೇಸರವಾಗಿದೆ ಹೀಗಾಗಿ ಆದಷ್ಟು ಧೈರ್ಯದಿಂದ ಇರಿ ಎಂದು ತಲೈವನಿಗೆ ಹೇಳುತ್ತಿದ್ದಾರೆ. ಇದೇ ವಿಚಾರ ಟ್ವಿಟ್ಟರ್‌ನಲ್ಲಿ ಸಾಕಷ್ಟು ಟ್ವೀಟ್ ಕೂಡ ಮಾಡುತ್ತಿದ್ದಾರೆ.
ಆತಂಕ ವ್ಯಕ್ತಪಡಿಸುತ್ತಿರುವ ಅಭಿಮಾನಿಗಳು
ಮೊದಲೇ ರಜನಿಕಾಂತ್ ಅವರ ಆರೋಗ್ಯ ಸರಿ ಇಲ್ಲ. ಈ ವಯಸ್ಸಿನಲ್ಲಿ ರಜಿನಿಕಾಂತ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆಗಾಗ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳುವ ರಜನಿಕಾಂತ್, ಈ ಸಂರ್ಭದಲ್ಲಿ ಜಾಗರೂಕರಾಗಿರಬೇಕು. ಈ ವಯಸ್ಸಿನಲ್ಲಿ ಸಾಕಷ್ಟು ನೋವು, ಹಿಂಸೆ ಅನುಭವಿಸಿದರೇ ಅಪಾಯ ಎಂದು ಅಭಿಮಾನಿಗಳು, ರಜನಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಾಲು ಸಾಲು ಟ್ವೀಟ್‌ಗಳನ್ನು ಮಾಡುತ್ತಿರುವ ಫ್ಯಾನ್ಸ್ ರಜನಿಕಾಂತ್ ಪರಿಸ್ಥಿತಿ ಕಂಡು ಮರುಗುತ್ತಿದ್ದಾರೆ.
ಕುಟುಂಬ ಸದಸ್ಯರು ಏನು ಹೇಳುತ್ತಾರೆ?
ಖ್ಯಾತ ನಿರ್ದೇಶಕ ಕಸ್ತೂರಿ ರಾಜಾ ಅವರ ಪುತ್ರರಾಗಿರುವ ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು 2004 ರಲ್ಲಿ ವಿವಾಹವಾದರು. ಸಧ್ಯ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇದೀಗ ಧನುಷ್ ಮತ್ತು ಐಶ್ವರ್ಯ ದೂರವಾಗುತ್ತಿರುವುದು ಕುಟುಂಬ ಸದಸ್ಯರಿಗೆ ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿರೋದಂತು ಸುಳ್ಳಲ್ಲಾ.

ರಜನಿಕಾಂತ್ ಈ ಬಗ್ಗೆ ಮಾತನಾಡುತ್ತಾರಾ ?
ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು 2004 ರಲ್ಲಿ ವಿವಾಹವಾದರು. ಸಧ್ಯ ಈ ಜೋಡಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ಈ ನಿರ್ಧಾರದ ಬಗ್ಗೆ ಇನ್ನು ಕುಟುಂಬ ಸದಸ್ಯರು ಯಾರು ಪ್ರತಿಕ್ರೀಯೆ ನೀಡಿಲ್ಲ. ಆದರೇ ಅನ್ಯೋನ್ಯವಾಗಿದ್ದ ಧನುಷ್ ಮತ್ತು ಐಶ್ವರ್ಯ ಹೀಗೆ ನಿರ್ಧಾರ ತೆಗೆದಿಕೊಂಡಿರುವುದು ಕುಟುಂಬ ಸದಸ್ಯರು ಮತ್ತು ಸಾಕಷ್ಟು ಅಭಿಮಾನಿ ವರ್ಗಕ್ಕೆ ನೋವು ತಂದಿರೋದಂತು ಸತ್ಯ.


Click it and Unblock the Notifications











