ಜೂನ್‌ನಲ್ಲಿ ನಟ ಧನುಷ್- ನಟಿ ಮೀನಾ ಮದುವೆ? ಬಾಂಬ್ ಸಿಡಿಸಿದ ತಮಿಳು ನಟ
ನಟ ಧನುಷ್ ಹಾಗೂ ಐಶ್ವರ್ಯ ರಜನಿಕಾಂತ್ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗುತ್ತಿರುವುದಾಗಿ ಕಳೆದ ವರ್ಷ ಘೋಷಿಸಿದ್ದರು. ಈ ಸುದ್ದಿ ಕೇಳಿ ಒಂದು ಕ್ಷಣ ಅಭಿಮಾನಿಗಳು ಶಾಕ್ ಆಗಿದ್ದರು. ಆದರೆ ಈಗ ಧನುಷ್ ಮತ್ತೊಂದು ಮದುವೆ ಆಗ್ತಿದ್ದಾರೆ ಎಂದು ತಮಿಳು ಪೋಷಕ ನಟ ಬೈಲ್ವಾನ್ ಬಾಂಬ್ ಸಿಡಿಸಿದ್ದಾರೆ. ಯೂಟ್ಯೂಬ್ ಸಂದರ್ಶನದಲ್ಲಿ ಈ ಬಗ್ಗೆ ಆತ ಮಾತನಾಡಿದ್ದಾರೆ.
ಸೆನ್ಸೇಷನಲ್ ಕಾಮೆಂಟ್‌ಗಳ ಮೂಲಕ ನಟ ಬೈಲ್ವಾನ್ ಸದಾ ಸುದ್ದಿಯಲ್ಲಿ ಇರ್ತಾರೆ. ಈ ಹಿಂದೆ ಕೂಡ ನಟ ನಟಿಯರ ಕುರಿತು ಇಂತದ್ದೇ ಹೇಳಿಕೆ ನೀಡಿ ಆತ ಸದ್ದು ಮಾಡಿದ್ದರು. ಇದೀಗ ನಟ ಧನುಷ್ ಹಾಗೂ ನಟಿ ಮೀನಾ ಮದುವೆ ಆಗುತ್ತಾರೆ ಎಂದು ಹೇಳಿ ಶಾಕ್ ಕೊಟ್ಟಿದ್ದಾರೆ. ಧನುಷ್ ಪತ್ನಿ ಐಶ್ವರ್ಯಗೆ ವಿಚ್ಛೇದನ ಕೊಟ್ಟಿದ್ದಾರೆ. ಮೀನಾ ಇತ್ತೀಚೆಗೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿದ್ದಾರೆ. ಹಾಗಾಗಿ ಇಬ್ಬರು ಮದುವೆಗೂ ಸಿದ್ಧತೆ ನಡೆಸಿದ್ದಾರೆ. ಜುಲೈನಲ್ಲೇ ಮದುವೆ ಎಂದು ಬೈಲ್ವಾನ್ ಹೇಳಿಕೆ ನೀಡಿದ್ದಾರೆ.

ಕೆಲ ಸಿನಿಮಾಗಳಲ್ಲಿ ಬೈಲ್ವಾನ್ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದಲ್ಲಿ ಇಂತಾದೊಂದು ಗುಸುಗುಸು ಕೇಳಿಬರ್ತಿದೆ. ಧನುಷ್ ಹಾಗೂ ಮೀನಾ ಮದುವೆ ಆಗ್ತಾರೆ ಎನ್ನಲಾಗ್ತಿದೆ. ಇದರಲ್ಲಿ ಎಷ್ಟು ನಿಜ ಇದೆ ಎಷ್ಟು ಸುಳ್ಳು ಇದೆ ಗೊತ್ತಿಲ್ಲ. ಆದರೆ ಇಂತಹ ಸುದ್ದಿಗಳು ಹರಿದಾಡ್ತಿದೆ ಎಂದಷ್ಟೇ ಬೈಲ್ವಾನ್ ಹೇಳಿದ್ದಾರೆ. 40 ವರ್ಷ ಆಸುಪಾಸು ವಯಸ್ಸು. ಇಬ್ಬರು ಒಂಟಿಯಾಗಿ ಬದುಕುತ್ತಿದ್ಧಾರೆ. ಹಾಗಾಗಿ ಇಬ್ಬರು ಜಂಟಿಯಾಗಲು ನಿರ್ಧರಿಸದ್ಧಾರೆ. ಇಬ್ಬರು ಮದುವೆ ಆಗಬಹುದು ಅಥವಾ ಮದುವೆ ಆಗದೇ ಒಟ್ಟಿಗೆ ಜೀವನ ಸಾಗಿಸುವ ಸಾಧ್ಯತೆ ಇದೆ ಎಂದು ಬೈಲ್ವಾನ್ ಹೇಳಿದ್ಧಾರೆ.
2004ರಲ್ಲಿ ಧನುಷ್ ಹಾಗೂ ಐಶ್ವರ್ಯ ಮದುವೆ ನಡೆದಿತ್ತು. ಸ್ವತಃ ರಜನಿಕಾಂತ್ ಪುತ್ರಿ ಧನುಷ್‌ನ ಮೆಚ್ಚಿ ಮದುವೆ ಆಗಿದ್ದರು. 18 ವರ್ಷಗಳ ದಾಂಪತ್ಯ ಜೀವನಕ್ಕೆ ಕಳೆದ ವರ್ಷ ಇಬ್ಬರು ಇತಿಶ್ರೀ ಹಾಡಲು ತೀರ್ಮಾನಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಘೋಷಿಸಿದ್ದರು. ದಶಕಗಳ ಕಾಲ ಕೂಡಿ ಬಾಳಿದ ಜೋಡಿ ಹೀಗೆ ಏಕಾಏಕಿ ನಾನೊಂದು ತೀರ ನೀನೊಂದು ತೀರ ಎಂದಿದ್ದೂ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇಬ್ಬರು ದೂರಾಗಲು ಕಾರಣ ಏನು ಅನ್ನುವುದು ಮಾತ್ರ ಗೊತ್ತಿಲ್ಲ.

ಬಹುಭಾಷಾ ನಟಿ ಮೀನಾ ಬೆಂಗಳೂರು ಮೂಲಕ ವಿದ್ಯಾಸಾಗರ್ ಎಂಬುವವರ ಕೈ ಹಿಡಿದಿದ್ದರು. ದಂಪತಿ ನೈನಿಕಾ ಹೆಸರಿನ ಮಗಳು ಇದ್ದಾಳೆ. ಆದರೆ ಕೆಲ ತಿಂಗಳ ಹಿಂದೆಯಷ್ಟೆ ವಿದ್ಯಾಸಾಗರ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ನಂತರ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂತಹ ಹೊತ್ತಲ್ಲೇ ನಟ ಬೈಲ್ವಾನ್ ಹೇಳಿಕೆ ಸಂಚಲನ ಸೃಷ್ಟಿಸಿದೆ. ಆದರೆ ಈ ಬಗ್ಗೆ ಧನುಷ್, ಮೀನಾ ಇಬ್ಬರು ಪ್ರತಿಕ್ರಿಯೆ ನೀಡಿಲ್ಲ. ಅಭಿಮಾನಿಗಳು ಮಾತ್ರ ನಟ ಬೈಲ್ವಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಭಿಮಾನಿಗಳು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೇಳುವವರು ಕೇಳುವವರು ಇಲ್ಲ ಎಂದು ಬಾಯಿಗೆ ಬಂದಂತೆ ಮಾತನಾಡಬೇಡ ಎಂದು ಗರಂ ಆಗಿದ್ದಾರೆ.
ಇನ್ನು ಬೈಲ್ವಾನ್ ಬರೀ ಧನುಷ್- ಮೀನಾ ಮದುವೆ ಬಗ್ಗೆ ಮಾತ್ರವಲ್ಲ, ರಜನಿಕಾಂತ್ ಕುಟುಂಬದ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಇದರಲ್ಲಿ ಎಷ್ಟು ನಿಜ ಇದೆ ಎಷ್ಟು ಸುಳ್ಳು ಇದೆ ಎನ್ನುವುದು ಗೊತ್ತಿಲ್ಲ ಎನ್ನುತ್ತಲೇ ಏನೇನೋ ಹೇಳಿದ್ದಾರ. ಐಶ್ವರ್ಯ ಗಂಡನಿಂದ ದೂರಾಗಿ ಜಿಮ್‌ನಲ್ಲಿ ಅರ್ಧಂಬರ್ಧ ಬಟ್ಟೆ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರು ಮಕ್ಕಳನ್ನು ಇಟ್ಟುಕೊಂಡು ಹೀಗೆ ಮಾಡೋದು ಸರಿಯಲ್ಲ. ಇನ್ನು ರಜನಿಕಾಂತ್ ಮಗಳ ಸಂಸಾರ ಹೀಗೆ ಆಯ್ತಲ್ಲ ಎನ್ನುವ ಬೇಸರದಲ್ಲಿದ್ದಾರೆ. ಅದನ್ನು ಯಾರ ಬಳಿಯೂ ಹೇಳಿಕೊಳ್ಳಲು ಆಗದೇ ಸಿನಿಮಾಗಳಲ್ಲಿ ನಟಿಸುತ್ತಾ ಎಲ್ಲುವನ್ನು ಮರೆಯುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಬೈಲ್ವಾನ್ ಮಾತನಾಡಿದ್ದಾರೆ.


Click it and Unblock the Notifications











