'ರೌಡಿ ಬೇಬಿ' ಹೊಸ ದಾಖಲೆ: ದೇಶದ ಟಾಪ್ ಟ್ರೆಂಡಿಂಗ್ ಹಾಡುಗಳಲ್ಲಿ ನಂ.1 ಸ್ಥಾನ

ತಮಿಳು ಸ್ಟಾರ್ ನಟ ಧನುಷ್ ಮತ್ತು ನಟಿ ಸಾಯಿ ಪಲ್ಲವಿ ಜಬರ್ದಸ್ತ್ ಸ್ಟೆಪ್ ಹಾಕಿರುವ ರೌಡಿ ಬೇಬಿ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಸಾಕಷ್ಟು ದಾಖಲೆ ಬರೆದಿರುವ ರೌಡಿ ಬೇಬಿ ಈಗ ಮತ್ತೆ ಸದ್ದು ಮಾಡುತ್ತಿದೆ. ರೌಡಿ ಬೇಬಿ ದಾಖಲೆಗೆ ಮತ್ತೊಂದು ಗರಿ ಸಿಕ್ಕಿದೆ. ಹಾಡು ಕೇಳಿದರೆ ಕುಣಿದು ಕುಪ್ಪಳಿಸುವಂತೆ ಮಾಡುವ ರೌಡಿ ಬೇಬಿ ದೇಶದ ನಂ.1 ಟ್ರೆಂಡಿಂಗ್ ನಲ್ಲಿದೆ.

ಇತ್ತೀಚಿಗೆ ಯೂಟ್ಯೂಬ್ ನಲ್ಲಿ 500 ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದು ಅತೀ ಹೆಚ್ಚು ವೀಕ್ಷಣೆ ಕಂಡ ಹಾಡು ಎನ್ನುವ ದಾಖಲೆ ಬರೆದಿದಿತ್ತು. ಈಗ ರೌಡಿ ಬೇಬಿ ದೇಶದಲ್ಲೆ ಈ ವರ್ಷದ ಟಾಪ್ ಒನ್ ಟ್ರಿಂಡಿಂಗ್ ಹಾಡು ಎನ್ನುವ ಖ್ಯಾತಿ ಗಳಿಸಿದೆ. ಧನುಷ್ ಮತ್ತು ನಟಿ ಸಾಯಿ ಪಲ್ಲವಿ ಅಭಿನಯದ ಮಾರಿ-2 ಚಿತ್ರದ ಹಾಡು ಇದಾಗಿದೆ.

Dhanush And Sai Pallavi Stepped Rowdy Baby Song Top One Trending In India

ಇತ್ತೀಚಿಗೆ ಯೂಟ್ಯೂಬ್ 2019ರ ಟಾಪ್ 10 ಟ್ರೆಂಡಿಂಗ್ ಹಾಡುಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ರೌಡಿ ಬೇಬಿ ಹಾಡು ಮೊದಲ ಸ್ಥಾನ ಪಡೆದುಕೊಂಡಿದೆ. ಇನ್ನು ಎರಡನೆ ಸ್ಥಾನದಲ್ಲಿ ತನೀಶ್ ಬಾಗ್ಚಿ ಸಂಗೀತ ಸಂಯೋಜನೆ ಮಾಡಿರುವ ಧ್ವಾನಿ ಭಾನುಶಾಲಿ ಮತ್ತು ನಿಖಿಲ್ ಡಿ ಅಭಿನಯದ 'ವಾಸ್ತೆ' ಹಾಡು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸಿನಿಮಾ ಹಾಡು ಇದೆ.

ಈ ಹಾಡು ಈ ಮಟ್ಟಿಗಿನ ಜನಪ್ರಿಯತೆ ಪಡೆಯಲು ಹಾಡಿನ ಮ್ಯೂಸಿಕ್ ಹಾಗೂ ಡ್ಯಾನ್ಸ್ ಬಹಳ ಮುಖ್ಯವಾಗಿದೆ. ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ. ವಿಶೇಷ ಅಂದರೆ ಈ ಹಾಡನ್ನು ಧನುಷ್ ಅವರೇ ಬರೆದು ಹಾಡಿದ್ದಾರೆ. ಕೊಲವೆರಿ ಹಾಡಿನ ಬಳಿಕ ಮತ್ತೊಮ್ಮೆ ಧನುಷ್ ಹಾಡು ಈ ಮಟ್ಟಿಗಿನ ಹಿಟ್ ಆಗಿದೆ.

More from Filmibeat

English summary
Tamil actor Dhanush and Sai Pallavi stepped Rowdy Baby song top trending in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X