For Quick Alerts
  ALLOW NOTIFICATIONS  
  For Daily Alerts

  ದುಬಾರಿ ಏರಿಯಾದಲ್ಲಿ ಧನುಶ್ ಐಶಾರಾಮಿ ಮನೆ: ಬೆಲೆ ಎಷ್ಟು ಗೊತ್ತೆ?

  |

  ತಮಿಳಿನ ಸೂಪರ್ ಸ್ಟಾರ್ ನಟ ಧನುಷ್ ಚೆನ್ನೈನ ದುಬಾರಿ ಏರಿಯಾದಲ್ಲಿ ಮನೆ ಕಟ್ಟಲು ಆರಂಭಿಸಿದ್ದಾರೆ. ಇಂದು ಗುದ್ದಲಿ ಪೂಜೆ ನೆರವೇರಿಸಿದ್ದ ಧನುಷ್ ಮಾವ ರಜನೀಕಾಂತ್ ಪೂಜೆಗೆ ಆಗಮಿಸಿ ಆಶೀರ್ವಾದ ಮಾಡಿದ್ದಾರೆ.

  ಚೆನ್ನೈನ ದುಬಾರಿ ಏರಿಯಾಗಳಲ್ಲಿ ಒಂದಾದ ಪೋಯೆಸ್ ಗಾರ್ಡನ್‌ನಲ್ಲಿ ಐಶಾರಾಮಿ ಮನೆ ನಿರ್ಮಾಣ ಮಾಡಲಿದ್ದಾರೆ ಧುನುಷ್. ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಬಂಗಲೆ ಬಳಿಯೇ ಧನುಷ್ ಅವರ ಹೊಸ ಮನೆ ನಿರ್ಮಾಣವಾಗಲಿದೆ.

  ಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತಮಿಳಿನ ಸ್ಟಾರ್ ನಟಕತ್ರಿನಾ ಕೈಫ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ತಮಿಳಿನ ಸ್ಟಾರ್ ನಟ

  ನಟ ರಜನೀಕಾಂತ್ ಸಹ ಪೋಯೆಸ್ ಗಾರ್ಡನ್‌ನಲ್ಲಿಯೇ ಮನೆ ನಿರ್ಮಿಸಿ ವಾಸವಿದ್ದಾರೆ. ಇದೀಗ ಅಳಿಯ ಧನುಷ್ ಮಗಳು ಐಶ್ವರ್ಯಾ ಸಹ ಅದೇ ಏರಿಯಾದಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಒಳಾಂಗಣ ವಿನ್ಯಾಸ, ಸೈಟ್ ವೆಚ್ಚ ಹೊರತುಪಡಿಸಿ, ಹೊಸ ಮನೆ ನಿರ್ಮಾಣ ಕಾರ್ಯಕ್ಕೆ ಸುಮಾರು 25 ಕೋಟಿ ಮೀಸಲಿಟ್ಟಿದ್ದಾರೆ ಧನುಷ್ ಎನ್ನಲಾಗುತ್ತಿದೆ.

  ಪೋಯೆಸ್ ಗಾರ್ಡನ್ ಚೆನ್ನೈನ ಅತ್ಯಂತ ದುಬಾರಿ ಏರಿಯಾ. ಇಲ್ಲಿ ಒಂದು ಚದರ ಅಡಿ ಭೂಮಿಗೆ 40,000 ರೂ ಗಿಂತಲೂ ಹೆಚ್ಚು ಬೆಲೆ ಇದೆ. ಒಂದು 30-40 ಸೈಟು ಖರೀದಿಸಲು ಸುಮಾರು 7 ರಿಂದ 8 ಕೋಟಿ ಹಣ ತೆರಬೇಕಾಗುತ್ತದೆ.

  ಇಂದು ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ಒಟ್ಟಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಭೂಮಿ ಪೂಜೆಗೆ ನಟ ರಜನೀಕಾಂತ್, ಪತ್ನಿ ಲತಾ ರಜನೀಕಾಂತ್ ಆಗಮಿಸಿದ್ದರು. ಅನಾರೋಗ್ಯದ ಬಳಿಕ ಇದೇ ಮೊದಲ ಬಾರಿಗೆ ನಟ ರಜನೀಕಾಂತ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಧನುಷ್ ಭೂಮಿ ಪೂಜೆ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  'ಆಯರತ್ತಿಲ್ ಒರುವನ್ 2' ಸಿನಿಮಾ ಘೋಷಣೆ: ಕಾರ್ತಿ ಬದಲು ಮತ್ತೊಬ್ಬ ಸೂಪರ್ ಸ್ಟಾರ್'ಆಯರತ್ತಿಲ್ ಒರುವನ್ 2' ಸಿನಿಮಾ ಘೋಷಣೆ: ಕಾರ್ತಿ ಬದಲು ಮತ್ತೊಬ್ಬ ಸೂಪರ್ ಸ್ಟಾರ್

  ಫೆಬ್ರವರಿ 12 ಕ್ಕೆ ಸರ್ಜಾ ಕುಟುಂಬದ ಅಭಿಮಾನಿಗಳಿಗೆ ಗುಡ್ ನ್ಯೂಸ್

  ಧನುಷ್ ಅಭಿನಯದ ಜಗಮೇ ತಾಂಡಿರನ್ ಬಿಡುಗಡೆಗೆ ತಯಾರಾಗಿದೆ. ಆ ಬಳಿಕ ಹಿಂದಿಯ 'ಅತರಂಗೀ ರೇ' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಸೋಹಾ ಅಲಿ ಖಾನ್ ಜೊತೆ ನಟಿಸಲಿದ್ದಾರೆ. ಆಯರತ್ತಿಲ್ ಒರುವನ್ ಸಿನಿಮಾದಲ್ಲಿಯೂ ಧನುಷ್ ನಟಿಸಲಿದ್ದಾರೆ. ಇದರ ಜೊತೆಗೆ ಹಾಲಿವುಡ್ ಸಿನಿಮಾ 'ದಿ ಗ್ರೇ ಮ್ಯಾನ್' ದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಕ್ಯಾಪ್ಟರ್ ಅಮೆರಿಕ ಖ್ಯಾತಿಯ ಕ್ರಿಸ್ ರೋಜರ್ಸ್ ಇರಲಿದ್ದಾರೆ.

  English summary
  Tamil actor Dhanush did Bhoomi Pooja for his new house which he is going to build in Chennai's Poes Garden.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X