ಧನುಷ್-ಐಶ್ವರ್ಯಾ ನಡುವಿನ ಕಲಹ ಸರಿಯಾಗುತ್ತೆ ಎಂದ ಧನುಷ್ ತಂದೆ ಕಸ್ತೂರಿ ರಾಜ!

ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ವಿವಾಹವಾಗಿದ್ದ ತಮಿಳು ನಟ ಧನುಷ್ ಸೋಮವಾರ ವಿವಾಹ ವಿಚ್ಛೇಧನ ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್‌ನಲ್ಲಿ ಧನುಷ್ ಮಾಹಿತಿ ಶೇರ್ ಮಾಡಿಕೊಂಡಿದ್ದಾರೆ. ಈ ಸುದ್ದಿ ಇದೀಗ ಎಲ್ಲರನ್ನು ಆಘಾತಕ್ಕೆ ಒಳಗಾಗಿಸಿದೆ. ಚಿತ್ರರಂಗದ ಹಲವರು ಸೇರಿದಂತೆ ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 18 ವರ್ಷಗಳಿಂದಲೂ ಸಾಕಷ್ಟು ಅನ್ಯೋನ್ಯವಾಗಿದ್ದ ಧನುಷ್ ಮತ್ತು ಐಶ್ವರ್ಯಾ ನಡುವಲ್ಲಿ ಅಂತಹದ್ದೇನಾಯ್ತು ಎಂಬ ಬಗ್ಗೆ ಇದೀಗ ಚರ್ಚೆಗಳು ಆರಂಭವಾಗಿದೆ. ಇದೆಲ್ಲದರ ಬೆನ್ನಲ್ಲೇ ಈಗ ಇವರಿಬ್ಬರ ಈ ನಿರ್ಧಾರ ಬಗ್ಗೆ ಧನುಷ್ ತಂದೆ ತಮಿಳು ಚಲನಚಿತ್ರ ನಿರ್ಮಾಪಕ ಕಸ್ತೂರಿ ರಾಜಾ ಅವರು ಪ್ರತಿಕ್ರಿಯಿಸಿದ್ದಾರೆ.

2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನುಷ್ ಮತ್ತು ಐಶ್ವರ್ಯಾ ಡಿವೋರ್ಸ್ ಬಗ್ಗೆ ಇತ್ತೀಚೆಗೆ ಪ್ರಕಟಿಸಿದ್ದಾರೆ. ತಮ್ಮ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಜಂಟಿ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ, ಕುಟುಂಬ ಸದಸ್ಯರಿಗೆ ಆಶ್ಚರ್ಯ ಉಂಟು ಮಾಡಿದ್ದಾರೆ. ಇವರಿಬ್ಬರೂ 18 ವರ್ಷ ಅನ್ಯೋನ್ಯವಾಗಿ ದಾಂಪತ್ಯ ಜೀವನ ನಡೆಸಿ ಈಗ ಯಾಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವವಾಗುತ್ತಿದೆ. ಇದಕ್ಕೆ ಈಗ ನಟ ಧನುಷ್ ತಂದೆ ಕಸ್ತೂರಿ ರಾಜ ಪ್ರತಿಕ್ರಿಯಿಸಿ ಮತ್ತೆ ಧನುಷ್-ಐಶ್ವರ್ಯಾ ಒಂದಾಗಬಹುದು ಎಂಬ ಆಶ್ವಾಸನೆ ನೀಡಿದ್ದಾರೆ.

ಧನುಷ್-ಐಶ್ವರ್ಯಾ ಡಿವೋರ್ಸ್ ಪ್ರಕಟಿಸಿದ ಬಳಿಕ ಖಾಸಗಿ ಮ್ಯಾಗಝಿನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಧನುಷ್ ಮತ್ತು ಐಶ್ವರ್ಯಾರ ಈ ನಿರ್ಧಾರ ಕೇವಲ ಕೌಟುಂಬಿಕ ಕಲಹವಷ್ಟೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಪ್ರತಿ ಸಂಸಾರಗಳಲ್ಲಿ ಹೇಗೆ ಮನಸ್ತಾಪಗಳು ಉಂಟಾಗುತ್ತೊ, ಅಂತೆಯೇ ಧನುಷ್ ಮತ್ತು ಐಶ್ವರ್ಯ ನಡುವೆಯೂ ಕಲಹಗಳು ಉಂಟಾಗಿದೆ. ಹೀಗಾಗಿ ಇವರಿಬ್ಬರ ಈ ನಿರ್ಧಾರ ಸಾಮಾನ್ಯವಾಗಿ ದಂಪತಿಗಳ ನಡುವೆ ನಡೆಯುವ ಕಲಹ ಮಾತ್ರ. ಇದು ವಿಚ್ಛೇದನ ಅಲ್ಲಾ ಎಂದಿದ್ದಾರೆ.

Dhanush Father Kasturi Raja Talks About Dhanush and Aishwarya Divorce
ಮಾತು ಮುಂದುವರೆಸಿ ಮಾತನಾಡಿದ ಕಸ್ತೂರಿ ರಾಜಾ ಅವರು ಧನುಷ್ ಮತ್ತು ಐಶ್ವರ್ಯ ಸದ್ಯ ಚೆನೈನಲ್ಲಿ ಇಲ್ಲಾ. ಇಬ್ಬರೂ ಕೂಡ ಹೈದರಾಬಾದ್‌ನಲ್ಲಿ ಇದ್ದಾರೆ. ಹೀಗಾಗಿ ಇಬ್ಬರ ಬಳಿಯೂ ನಾನು ಮಾತನಾಡಿದ್ದು ಅವರಿಬ್ಬರಿಗೂ ಸಲಹೆಯನ್ನು ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗುವ ನಿರೀಕ್ಷೆ ಕೂಡ ಇದೆ ಎಂದು ಹೇಳಿದ್ದಾರೆ. ಕಸ್ತೂರಿ ರಾಜ ಅವರ ಈ ಹೇಳಿಕೆ ಅಭಿಮಾನಿಗಳಲ್ಲಿ ಒಂದು ಭರವಸೆ ಮೂಡಿಸುವಂತಿದೆ. ಮತ್ತೆ ಇವರಿಬ್ಬರು ಒಂದಾದರೇ ಸಾಕು ಅಂತ ಬೇಡಿಕೊಳ್ಳುತ್ತಿದ್ದಾರೆ.

Dhanush Father Kasturi Raja Talks About Dhanush and Aishwarya Divorce
ಐಶ್ವರ್ಯಾ ಹಾಗೂ ನಟ ಧನುಷ್ ಅವರ ದಾಂಪತ್ಯ ಜೀವನ ಅಂತ್ಯಗೊಂಡಿದೆ. ಸೋಮವಾರ(17-01-22) ರಾತ್ರಿ ತಮ್ಮ ಟ್ವಿಟ್ಟರ್‌ ಖಾತೆ ಮೂಲಕ ಈ ವಿಚಾರವನ್ನು ಸ್ವತಃ ಧನುಷ್ ತಿಳಿಸಿದ್ದರು. 18 ವರ್ಷಗಳ ಕಾಲ ಸ್ನೇಹಿತರಂತೆ, ದಂಪತಿಗಳಂತೆ, ಪೋಷಕರಂತೆ ಮತ್ತು ಪರಸ್ಪರ ಹಿತೈಷಿಗಳಾಗಿದ್ದೆವು. ನಮ್ಮ ಪ್ರಯಾಣವು ಬೆಳವಣಿಗೆ, ತಿಳುವಳಿಕೆ, ಹೊಂದಾಣಿಕೆ ಮತ್ತು ಹೊಂದಿಕೊಳ್ಳುವಿಕೆಯಿಂದ ಕೂಡಿದೆ. ಇಂದು ನಾವು ನಮ್ಮ ಮಾರ್ಗಗಳನ್ನು ಪ್ರತ್ಯೇಕಗೊಳಿಸುವಿಕೆಯ ಜಾಗದಲ್ಲಿ ಬಂದು ನಿಂತಿದ್ದೇವೆ. ಜೋಡಿಯಾಗಿದ್ದ ನಾವು ಬೇರೆಯಾಗಲು ಮತ್ತು ನಮ್ಮನ್ನು ನಾವು ಇನ್ನಷ್ಟು ಚೆನ್ನಾಗಿ ಅರ್ಥೈಸಿಕೊಳ್ಳಲು, ಸಮಯ ಕೊಡಲು ನಾನು ಮತ್ತು ಐಶ್ವರ್ಯ ನಿರ್ಧರಿಸಿದ್ದೇವೆ. ದಯವಿಟ್ಟು ನಮ್ಮ ನಿರ್ಧಾರವನ್ನು ಗೌರವಿಸಿ ಮತ್ತು ಇದನ್ನು ನಿಭಾಯಿಸಲು ನಮಗೆ ಬೇಕಿರುವ ಗೌಪ್ಯತೆಯನ್ನು ನೀಡಿ. 'ಓಂ ನಮಃ ಶಿವಾಯ' ಎಂದು ಬರೆದುಕೊಳ್ಳುವ ಮೂಲಕ ಧನುಷ್ ತಾವಿಬ್ಬರೂ ಬೇರೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದರು.

More from Filmibeat

English summary
Dhanush father Kasturi Raja comments on his son divorce with Aishwarya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X