ಸೂಪರ್ ಹಿಟ್ 'ಪ್ರೇಮಂ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಸ್ಟಾರ್ ನಟ

'ಪ್ರೇಮಂ' ಮಲಯಾಳಂನ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾದ ಬಗ್ಗೆ ಕೇಳದವರಿಲ್ಲ. ನಟಿ ಸಾಯಿ ಪಲ್ಲವಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ಸಿನಿಮಾವಿದು. ಕೇವಲ ಮಲಯಾಳಂ ಮಾತ್ರವಲ್ಲದೆ ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ.

ನಾಯಕನಾಗಿ ನಿವೀನ್ ಪೌಲಿ ಚಿತ್ರಪ್ರೇಕ್ಷಕರ ಮನಗೆದ್ದಿದ್ದರು. ಅನುಪಮಾ ಪರಮೇಶ್ವರನ್ ಮತ್ತು ಮಡೊನ್ನಾ ಸೆಬಾಸ್ಟಿಯನ್ ಸಹ ಚಿತ್ರದಲ್ಲಿದ್ದರು. ಅಲ್ಪೋನ್ಸ್ ಪುಥಾರೆನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ದೊಡ್ಡ ಮಟ್ಟದಲ್ಲಿ ಸಕ್ಸಸ್ ಆದ ಈ ಸಿನಿಮಾ ತಮಿಳಿಗೆ ರಿಮೇಕ್ ಆಗಲಿದೆ ಎಂದು ಹೇಳುತ್ತ ವರ್ಷವೆ ಆಗಿದೆ. ಒಂದು ವೇಳೆ ತಮಿಳಿಗೆ ರಿಮೇಕ್ ಆದರೆ ಈ ಸ್ಟಾರ್ ಕಾಣಿಸಿಕೊಳ್ಳಬೇಕು ಎಂದು ಪ್ರೇಮಂ ನಿರ್ದೇಶಕ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ತಮಿಳಿನಲ್ಲೂ ಉತ್ತಮ ಪ್ರದರ್ಶನ ಕಂಡ ಸಿನಿಮಾ

ತಮಿಳಿನಲ್ಲೂ ಉತ್ತಮ ಪ್ರದರ್ಶನ ಕಂಡ ಸಿನಿಮಾ

ಪ್ರೇಮ್ ಸಿನಿಮಾ ಕೇವಲ ಮಲಯಾಳಂ ಮಾತ್ರವಲ್ಲ ತಮಿಳಿನಲ್ಲೂ 250 ದಿನಗಳ ಪ್ರದರ್ಶನಕಂಡಿತ್ತು. ಆದರೂ ತಮಿಳಿಗೆ ರಿಮೇಕ್ ಆಗುತ್ತಿದೆ ಎಂದು ಹೇಳುತ್ತ ವರ್ಷವೆ ಆಗಿದೆ. ಆದರೂ ಇನ್ನೂ ರೇಮಿಕ್ ಆಗಿಲ್ಲ. ಈ ಬಗ್ಗೆ ಪ್ರೇಮಂ ನಿರ್ದೇಶಕ ಅಲ್ಪೋನ್ಸ್ ಪುಥಾರೆನ್ ಇತ್ತೀಚಿಗೆ ಮಾತನಾಡಿದ್ದಾರೆ.

ತಮಿಳಿನಲ್ಲಿ ಧನುಷ್ ಉತ್ತಮ ಆಯ್ಕೆ

ತಮಿಳಿನಲ್ಲಿ ಧನುಷ್ ಉತ್ತಮ ಆಯ್ಕೆ

ಒಂದು ವೇಳೆ ಪ್ರೇಮಂ ಸಿನಿಮಾ ತಮಿಳಿಗೆ ರಿಮೇಕ್ ಮಾಡುವುದಾದರೆ ನಟ ಧನುಷ್ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ. ಧನುಷ್ ಎಲ್ಲಾ ರೀತಿಯ ಪಾತ್ರಗಳಿಗೆ ಸೂಟ್ ಆಗುತ್ತಾರೆ. ಚಿಕ್ಕ ವಯಸ್ಸಿನ ಪಾತ್ರದಿಂದ ಹಿಡಿದು ವೃದ್ಧನ ಪಾತ್ರದ ವರೆಗೂ ಧನುಷ್ ಸರಿಹೊಂದುತ್ತಾರೆ ಎಂದು ಹೇಳಿದ್ದಾರೆ.

2015ರಲ್ಲಿ ರಿಲೀಸ್ ಆದ ಸಿನಿಮಾ

2015ರಲ್ಲಿ ರಿಲೀಸ್ ಆದ ಸಿನಿಮಾ

2015ರಲ್ಲಿ ರಿಲೀಸ್ ಆದ ಪ್ರೇಮಂ ಸಿನಿಮಾ ಇಂದಿಗೂ ಪ್ರೇಕ್ಷಕರ ಫೇವರಿಟ್ ಸಿನಿಮಾ ಲಿಸ್ಟ್ ಗಳಲ್ಲಿ ಒಂದಾಗಿದೆ. ಚಿತ್ರದ ಕಥೆ, ಸಂಗೀತಾ, ಕಲಾವಿದರ ಆಯ್ಕೆ ಹೀಗೆ ಚಿತ್ರದ ಪ್ರತಿಯೊಂದು ಅಂಶವು ಪ್ರೇಕ್ಷಕರ ಮನೆಗೆದ್ದಿತ್ತು. ಮಲಯಾಳಂ ಸಿನಿಮಾ ಇಷ್ಟು ದೊಡ್ಡ ಮಟ್ಟಕ್ಕೆ ಸಕ್ಸಸ್ ಕಾಣುವುದು ಕಡಿಮೆ. ಕೆಲವೇ ಸಿನಿಮಾಗಳ ಲಿಸ್ಟ್ ನಲ್ಲಿ ಪ್ರೇಮಂ ಸಿನಿಮಾ ಕೂಡ ಒಂದು.

ನಿವೀಲ್ ಪೌಲಿ ಮತ್ತು ಸಾಯಿ ಪಲ್ಲವಿ

ನಿವೀಲ್ ಪೌಲಿ ಮತ್ತು ಸಾಯಿ ಪಲ್ಲವಿ

ನಿವೀನ್ ಪೌಲಿ ಆಗಲಿ ಸ್ಟಾರ್ ನಟನಾಗಿ ಗುತಿಸಿಕೊಂಡಿದ್ದರು. ಆದರೆ ಪ್ರೇಮಂ ಸಿನಿಮಾ ಮತ್ತಷ್ಟು ಖ್ಯಾತಿ ತಂದುಕೊಟ್ಟಿತ್ತು. ಇತ್ತ ನಟಿ ಸಾಯಿ ಪಲ್ಲವಿ ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದರು. ದಕ್ಷಿಣ ಭಾರತೀಯ ಯುವಕರ ಕನಸಿನ ರಾಣಿಯಾಗಿರುವ ಸಾಯಿ ಪಲ್ಲವಿ, ಪ್ರೇಮಂ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿರುವ ಸಾಯಿ ಪಲ್ಲವಿ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Actor Dhanush is right choice for Tamil remake of Premam said Director Alphonse Puthren.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X