ಅಮಲಾ ಪೌಲ್ ವಿಚ್ಛೇದನಕ್ಕೆ ಧನುಶ್ ಕಾರಣ: ವಿಜಯ್ ತಂದೆ ಆರೋಪ
ಸೌತ್ ಸ್ಟಾರ್ ನಟಿ ಅಮಲಾ ಪೌಲ್ ನಿರ್ದೇಶಕ ಎ ಎಲ್ ವಿಜಯ್ ಜೊತೆ 2014ರ ಜೂನ್ ತಿಂಗಳಲ್ಲಿ ಮದುವೆಯಾಗಿತ್ತು. ಎರಡು ವರ್ಷದ ದಾಂಪತ್ಯ ಜೀವನದ ಬಳಿಕ ಇಬ್ಬರು ವಿಚ್ಛೇದನ ಪಡೆದುಕೊಂಡು ಅಚ್ಚರಿ ನೀಡಿದರು.
2016ರಲ್ಲಿ ಡಿವೋರ್ಸ್ ಪಡೆಯುತ್ತಿರುವುದಾಗಿ ಅಧಿಕೃತವಾಗಿ ಅಮಲಾ ಮತ್ತು ವಿಜಯ್ ಘೋಷಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರ ಫೆಬ್ರವರಿ ತಿಂಗಳಲ್ಲಿ ಕೋರ್ಟ್ ಆದೇಶ ನೀಡಿತು. ಕಳೆದ ವರ್ಷ ಅಮಲಾ ಪೌಲ್ ಮಾಜಿ ಪತಿ ವಿಜಯ್ ವೈದ್ಯೆ ಜೊತೆ ಇನ್ನೊಂದು ಮದುವೆ ಆದರು.
ಪ್ರೀತಿಸಿ ಮದುವೆಯಾದ ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಹೇಗೆ? ಡಿವೋರ್ಸ್ ಪಡೆಯುವಂತಹ ಸಮಸ್ಯೆ ಏನಾಗಿತ್ತು ಎಂಬುದಕ್ಕೆ ಉತ್ತರ ಇರಲಿಲ್ಲ. ಆದರೂ, ತಮಿಳು ನಟ ಧನುಶ್ ಹೆಸರು ಇವರಿಬ್ಬರ ದಾಂಪತ್ಯದಲ್ಲಿ ಕೇಳಿಬಂದಿತ್ತು. ಈಗ ಮತ್ತೆ ಅದೇ ವಿಚಾರದ ಬಗ್ಗೆ ವಿಜಯ್ ತಂದೆ ಮಾತನಾಡಿದ್ದಾರೆ. ಮುಂದೆ ಓದಿ....

ಅಮಲಾ ವಿಚ್ಛೇದನಕ್ಕೆ ಧನುಶ್ ಕಾರಣ!
ಅಮಲಾ ಪೌಲ್ ಮತ್ತು ವಿಜಯ್ ಪ್ರೀತಿಸಿ ಮದುವೆಯಾದವರು. ಕೇವಲ ಎರಡು ವರ್ಷದಲ್ಲಿ ವಿಚ್ಛೇದನ ಪಡೆಯುತ್ತಾರಾ ಅಂದ್ರೆ ಇದರ ಹಿಂದೆ ಗಂಭೀರವಾದ ಸಮಸ್ಯೆ ಇರುತ್ತೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ. ಇದೀಗ, ಎ ಎಲ್ ವಿಜಯ್ ಅವರ ತಂದೆ ಅಮಲಾ ವಿಚ್ಛೇದನಕ್ಕೆ ಧನುಶ್ ಕಾರಣ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಚಿತ್ರರಂಗ ತೊರೆಯಲು ಅಮಲಾ ನಿರ್ಧರಿಸಿದ್ದರು
'ವಿಜಯ್ ಜೊತೆ ಮದುವೆ ಆದ್ಮೇಲೆ ಚಿತ್ರರಂಗ ತೊರೆಯಲು ಅಮಲಾ ಪೌಲ್ ನಿರ್ಧರಿಸಿದ್ದರು. ಆದರೆ ಧನುಶ್ ತಮ್ಮದೇ ಬ್ಯಾನರ್ ಚಿತ್ರದಲ್ಲಿ ನಟಿಸುವಂತೆ ಅಮಲಾಗೆ ಬೇಡಿಕೆ ಇಟ್ಟರು. ಅಮಲಾ ಕೂಡ ಆ ಚಿತ್ರ ಒಪ್ಪಿಕೊಂಡರು. ಅಲ್ಲಿಂದಲೇ ಅಮಲಾ ಮತ್ತು ವಿಜಯ್ ಜೀವನದಲ್ಲಿ ಸಮಸ್ಯೆ ಶುರುವಾಯ್ತು' ಎಂದು ಎ ಎಲ್ ವಿಜಯ್ ತಂದೆ ಅಳಗಪ್ಪನ್ ಹೇಳಿದ್ದಾರೆ.

ಇಂಡಸ್ಟ್ರಿ ಶಾಕ್
ಎ ಎಲ್ ವಿಜಯ್ ಅವರ ತಂದೆ ಅಳಗಪ್ಪನ್ ಆರೋಪ ಈಗ ಇಂಡಸ್ಟ್ರಿಯನ್ನ ಚಿಂತಿಸುವಂತೆ ಮಾಡಿದೆ. ಧನುಶ್ ಚಿತ್ರ ಒಪ್ಪಿಕೊಂಡಿದ್ದಕ್ಕೆ ಅಮಲಾ ಪೌಲ್ ಬಾಳಲ್ಲಿ ಬಿರುಗಾಳಿ ಎದ್ದಿತು ಎನ್ನುವುದಾರೇ, ಅದನ್ನು ಮೀರಿ ಏನು ನಡೆದಿದೆ ಎಂಬ ಪ್ರಶ್ನೆ ಈಗ ಕಾಡುತ್ತಿದೆ.

ಸಿನಿಮಾ ಮಾತ್ರ ನನ್ನ ಗಮನ
ಒಂದು ಕಡೆ ಅಮಲಾ ಪೌಲ್ ಮಾಜಿ ಪತಿ ವಿಜಯ್ ಇನ್ನೊಂದು ಮದುವೆ ಆದರು. ಮತ್ತೊಂದು ಕಡೆ ಅಮಲಾ ಪೌಲ್ ಸತತವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ಅಮಲಾ ಕೂಡ ಒಬ್ಬರನ್ನು ಪ್ರೀತಿಸುತ್ತಿದ್ದು, ಮದುವೆ ಬಗ್ಗೆ ಸದ್ಯಕ್ಕೆ ಯೋಚಿಸಲ್ಲ ಎನ್ನಲಾಗಿದೆ. 2019ರಲ್ಲಿ ತೆರೆಕಂಡಿದ್ದ ಅಡೈ ಚಿತ್ರದಲ್ಲಿ ಕೊನೆಯದಾಗಿ ಅಮಲಾ ನಟಿಸಿದ್ದರು.


Click it and Unblock the Notifications











