Dhanush: ವಿಚ್ಛೇಧನದ ಬಳಿಕ ತನ್ನಿಬ್ಬರು ಮಕ್ಕಳೊಂದಿಗೆ ಕಾಣಿಸಿಕೊಂಡ ನಟ ಧನುಷ್!
ಕಳೆದ ವರ್ಷ ಸಾಕಷ್ಟು ಸುದ್ದಿಯಾದ ವಿಚಾರಗಳಲ್ಲಿ ನಟ ಧನುಷ್ ಮತ್ತು ರಜಿನಿಕಾಂತ್ ಪುತ್ರಿ ಐಶ್ವರ್ಯ ಅವರ ವಿಚ್ಚೇದನದ ಸುದ್ದಿ ಕೂಡ ಒಂದು. ಸಾಕಷ್ಟು ಅನ್ಯೋನ್ಯವಾಗಿದ್ದ ಈ ಜೋಡಿ ಸಡನ್ ಆಗಿ ವಿಚ್ಚೇದನ ಅನೌನ್ಸ್ ಮಾಡಿಕೊಂಡಿದ್ದಾರೆ.
ವಿಚ್ಚೇದನ ತೀರ್ಮಾನದ ನಂತರ ಸಾಕಷ್ಟು ಬೆಳವಣಿಗೆಗಳು ಆದವು. ಕುಟುಂಬ ಸದಸ್ಯರು, ಆಪ್ತರು ಇವರಿಬ್ಬರು ಮತ್ತೆ ಒಂದಾಗುತ್ತಾರೆ. ಇದು ಆತುರದ ನಿರ್ಧಾರವಷ್ಟೆ ಎಂದು ಹೇಳಿಕೆ ನೀಡಿದ್ದರು. ಇವರುಗಳು ಹೇಳುವಂತೆ ಸುದ್ದಿ ನಿಜವಾಗಲಿ ಎಂದು ಅಭಿಮಾನಿಗಳು ಕೂಡ ಅಂದುಕೊಳ್ಳುತ್ತಿದ್ದರು.
ಆದರೆ ಡಿವೋರ್ಸ್ ಅನೌನ್ಸ್ ಆದ ಬಳಿಕ ಧನುಷ್ ಆಗಲಿ ಐಶ್ವರ್ಯ ಆಗಲಿ ಈ ಬಗ್ಗೆ ಮೌನ ಮುರಿದಿಲ್ಲ. ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ನಟ ಧನುಷ್ ಐಶ್ವರ್ಯ ಜೊತೆ ಡಿವೋರ್ಸ್ ಬಳಿಕ ತನ್ನಿಬ್ಬರು ಮಕ್ಕಳ ಜೊತೆ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ.

ಧನುಷ್ ಮತ್ತು ಇಬ್ಬರು ಮಕ್ಕಳ ಪೋಟೊಗಳು ಇದೀಗ ವೈರಲ್
ನಾವು ಸಾಕಷ್ಟು ರೀತಿಯ ಜೋಡಿಗಳನ್ನು ನೋಡಿರುತ್ತೆವೆ. ಡಿವೋರ್ಸ್ ಬಳಿಕ ಒಬ್ಬರ ಬಗ್ಗೆ ಇನ್ನೊಬ್ಬರು ತಲೆಕೂಡ ಕೆಡಿಸಿಕೊಳ್ಳೊದಿಲ್ಲ. ಆದರೆ ಐಶ್ವರ್ಯ ಮತ್ತು ಧನುಷ್ ವಿಚಾರದಲ್ಲಿ ಹಾಗೆ ಆಗಿಲ್ಲ. ಡಿವೋರ್ಸ್ ಅನೌನ್ಸ್ ಮಾಡಿದ ನಂತ್ರದಲ್ಲೂ ಇವರಿಬ್ಬರು ಆಪ್ತ ಸ್ನೇಹಿತರಂತೆ ಇದ್ದಾರೆ. ಅಲ್ಲದೆ ಧನುಷ್ ಐಶ್ವರ್ಯ ಅವರ ಮಕ್ಕಳಾದ ಯಾತ್ರಾ ಮತ್ತು ಲಿಂಗ ರಾಜ ಅವರೊಂದಿಗೆ ಮೊದಲ ಬಾರಿಗೆ ಪ್ರತ್ಯಕ್ಷರಾಗಿದ್ದಾರೆ. ಧನುಷ್ ಮತ್ತು ಇಬ್ಬರು ಮಕ್ಕಳ ಪೋಟೊಗಳು ಇದೀಗ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕಮೆಂಟ್ ಕೂಡ ಮಾಡುತ್ತಿದ್ದಾರೆ.
ಮೊದಲ ಭಾರಿಗೆ ಧನುಷ್ ಮಕ್ಕಳೊಂದಿಗೆ ಪ್ರತ್ಯಕ್ಷ
ತಮ್ಮ ಪತ್ನಿ ಐಶ್ವರ್ಯಾ ರಜನಿಕಾಂತ್‌ರಿಂದ ಬೇರ್ಪಡುವುದಾಗಿ ಘೋಷಿಸಿದ ನಂತರ ಧನುಷ್ ಅಭಿಮಾನಿಗಳು ಸಾಕಷ್ಟು ನೊಂದಿದ್ದರು. ಇದೀಗ ಡಿವೋರ್ಸ್ ಬಳಿಕ ಮೊದಲ ಭಾರಿಗೆ ಧನುಷ್ ಮಕ್ಕಳಾದ ಯಾತ್ರಾ ಮತ್ತು ಲಿಂಗ ರಾಜ ಅವರೊಂದಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಚೆನ್ನೈನಲ್ಲಿ ಇಳಯರಾಜ ಅವರ ರಾಕ್ ವಿತ್ ರಾಜಾ ಸಂಗೀತ ಕಚೇರಿಯಲ್ಲಿ ಧನುಷ್ ಮತ್ತು ಮಕ್ಕಳು ಭಾಗವಹಿಸಿದ್ದಾರೆ. ಈವೆಂಟ್‌ನ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಧನುಷ್ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಧನುಷ್ ಲುಕ್ ಮತ್ತು ಮಕ್ಕಳ ಬಗ್ಗೆ ಮಚ್ಚುಗೆ
ಧನುಷ್ ಮತ್ತು ಮಕ್ಕಳ ಫೋಟೋ ಮತ್ತು ವೀಡಿಯೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ನಿಮ್ಮ ಕುಟುಂಬ ಬೇರ್ಪಡುವುದನ್ನು ನೋಡಲು ದುಃಖವಾಗುತ್ತಿದೆ. ದಯಮಾಡಿ ಹೀಗೆ ಖುಷಿ ಖುಷಿ ಆಗಿ ಮಕ್ಕಳೊಂದಿಗೆ ಇದ್ದು ಬಿಡಿ ಎಂದು ಹೇಳುತ್ತಿದ್ದಾರೆ. ಇನ್ನು ಹಲವರು ಡಿವೋರ್ಸ್ ಬಗ್ಗೆ ಏನನ್ನೂ ಮಾತನಾಡದೇ ಧನುಷ್ ಲುಕ್ ಮತ್ತು ಮಕ್ಕಳ ಬಗ್ಗೆ ಮಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಧನುಷ್ ಮತ್ತು ಮಕ್ಕಳ ಆಪ್ತತೆ ಈ ಫೋಟೊದಲ್ಲಿ ತುಂಬಾ ಘಾಡವಾಗಿ ಕಾಣುತ್ತಿದೆ.

ಐಶ್ವರ್ಯಾ ಮ್ಯೂಸಿಕ್ ವೀಡಿಯೋಗೆ ಶುಭ ಹಾರೈಸಿದ್ದ ಧನುಷ್
ಇನ್ನು ಮಕ್ಕಳೊಂದಿಗೆ ಮಾತ್ರವಲ್ಲ ಐಶ್ವರ್ಯ ರಜಿನಿಕಾಂತ್ ಜೊತೆಗೆ ಸ್ನೇಹಿತನಂತೆ ಇರುವ ಧನುಷ್ ಕಳೆದ ವಾರವಷ್ಟೆ ಟ್ವೀಟ್ ಮಾಡಿ ಐಶ್ವರ್ಯಾ ರಜನಿಕಾಂತ್ ಮ್ಯೂಸಿಕ್ ವೀಡಿಯೋಗೆ ಶುಭ ಹಾರೈಸಿದ್ದರು. "ನನ್ನ ಸ್ನೇಹಿತೆ ಐಶ್ವರ್ಯಾ ನಿಮ್ಮ ಮ್ಯೂಸಿಕ್ ವೀಡಿಯೊಗೆ ಅಭಿನಂದನೆಗಳು #payani ದೇವರು ಆಶೀರ್ವದಿಸಲಿ" ಎಂದು ಬರೆದುಕೊಂಡಿದ್ದರು. ಡಿವೋರ್ಸ್ ಬಳಿಕ ಉತ್ತಮ ಸ್ನೇಹಿತರಂತೆ ಇವರಿಬ್ಬರು ಇದ್ದಾರೆ ಅನ್ನೋದು ಈ ಮೂಲಕ ತಿಳಿದು ಬಂದಿತ್ತು. ಇನ್ನು ಧನುಷ್ ಅವರ ಟ್ವೀಟ್‌ಗೆ ಐಶ್ವರ್ಯ ರಜಿನಿಕಾಂತ್ "ಧನ್ಯವಾದಗಳು ಧನುಷ್.... ಗಾಡ್ ಸ್ಪೀಡ್" ಎಂದು ರೀ ಟ್ವೀಟ್ ಮಾಡಿದ್ದರು. ಡಿವೋರ್ಸ್ ಅನೌನ್ಸ್ ಬಳಿಕವೂ ಇವರಿಬ್ಬರು ಇಷ್ಟು ಅನ್ಯೊನ್ಯವಾಗಿ ಇರೋದು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ರು. ಇದೀಗ ಮಕ್ಕಳೊಂದಿಗೂ ಅಷ್ಟೇ ಪ್ರೀತಿ ಪಾತ್ರರಾಗಿರೋದು ಸಾಕಷ್ಟು ಮೆಚ್ಚುಗೆಗೆ ಕಾರಣ ವಾಗಿದೆ.


Click it and Unblock the Notifications











