ಸಿಕ್ಕಿಬಿದ್ರಾ ಧನುಷ್- ಮೃಣಾಲ್ ಠಾಕೂರ್? ಇಬ್ಬರ ಡೇಟಿಂಗ್ ವದಂತಿ ನಿಜಾನಾ?
ಧನುಷ್ - ಮೃಣಾಲ್ ಲವ್ ಗುಸುಗುಸು:'ರಾಯನ್' ಸ್ಟಾರ್ ಹಾಗೂ 'ಸೀತಾ ರಾಮಂ' ಚೆಲುವೆ ನಡುವೆ ನಡೆದಿದ್ದೇನು? ತಮಿಳು ಚಿತ್ರರಂಗದ ಸ್ಟಾರ್ ನಟ ಧನುಷ್ ಅವರು ವೈಯಕ್ತಿಕ ವಿಚಾರಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಸಿನಿಮಾ ಕರಿಯರ್ ಯಶಸ್ಸಿನ ನಡುವೆಯೂ ಅವರ ಲವ್ ಲೈಫ್ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ ಬಾಲಿವುಡ್ ಬ್ಯೂಟಿ ಮೃಣಾಲ್ ಠಾಕೂರ್ ಜೊತೆ ಧನುಷ್ ಹೆಸರು ತಳುಕು ಹಾಕಿಕೊಂಡಿದೆ.
ಇತ್ತೀಚೆಗೆ ಮೃಣಾಲ್ ಠಾಕೂರ್ ತಮ್ಮ ಹೊಸ ಸಿನಿಮಾ ಘೋಷಣೆ ಕುರಿತು ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ನಟ ಧನುಷ್ ಕೂಡಲೇ ರಿಯಾಕ್ಟ್ ಮಾಡಿ ಕಾಮೆಂಟ್ ಮಾಡಿದ್ದಾರೆ. ಧನುಷ್ ನೀಡಿದ ಈ ಪ್ರತಿಕ್ರಿಯೆ ಈಗ ಇಬ್ಬರ ನಡುವಿನ ಡೇಟಿಂಗ್ ಗಾಸಿಪ್‌ಗೆ ಮತ್ತಷ್ಟು ತುಪ್ಪ ಸುರಿದಿದೆ.

ಸಾಮಾನ್ಯವಾಗಿ ಧನುಷ್ ಬೇರೆ ನಟಿಯರ ಪೋಸ್ಟ್‌ಗಳಿಕೆ ಪ್ರತಿಕ್ರಿಯಿಸುವುದು ತೀರಾ ಅಪರೂಪ. ಈ ಹಿನ್ನೆಲೆಯಲ್ಲಿ ಮೃಣಾಲ್ ಪೋಸ್ಟ್‌ಗೆ ಅವರು ನೀಡಿದ ರಿಯಾಕ್ಷನ್ ಈಗ ವೈರಲ್ ಆಗಿದೆ. ಕೇವಲ ಒಂದು ಕಾಮೆಂಟ್‌ನಿಂದಲೇ ಇವರಿಬ್ಬರ ನಡುವೆ ಏನೋ ನಡೀತಿದೆ ಎಂಬ ಅನುಮಾನ ಅಭಿಮಾನಿಗಳಿಗೆ ಮತ್ತು ನೆಟ್ಟಿಗರಿಗೆ ಬಂದಿದೆ.
ನಟಿ ಮೃಣಾಲ್ ಠಾಕೂರ್ ಸದ್ಯ ಸಿದ್ಧಾಂತ್ ಚತುರ್ವೇದಿ ಜೊತೆಗಿನ ತಮ್ಮ ಮುಂಬರುವ ಸಿನಿಮಾ 'ದೋ ದೀವಾನೆ ಶಹರ್ ಮೇ' ಟೀಸರ್ ಅನ್ನು ಇತ್ತೀಚೆಗೆ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಸಿನಿಮಾದ ಥೀಮ್ ಮ್ಯೂಸಿಕ್ ಇತ್ತು. ಈ ಪೋಸ್ಟ್‌ಗೆ ನಟ ಧನುಷ್ "ಕೇಳಲು ಮತ್ತು ನೋಡಲು ಚೆನ್ನಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮೃಣಾಲ್ ಠಾಕೂರ್ ಕೂಡ ರಿಯಾಕ್ಟ್ ಮಾಡಿದ್ದಾರೆ.

ಇದೇ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಧನುಷ್ ಅಷ್ಟೇನು ಆಕ್ಟೀವ್ ಆಗಿ ಇರಲ್ಲ. ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಾರೆ. ಅಂತಾದ್ರಲ್ಲಿ ಮೃಣಾಲ್ ಪೋಸ್ಟ್‌ಗೆ ಧನುಷ್ ನೀಡಿದ ಈ ಕಾಮೆಂಟ್ ಮತ್ತು ಮೃಣಾಲ್ ನೀಡಿದ ಪ್ರೀತಿಯ ಪ್ರತಿಕ್ರಿಯೆ ಈಗ ಇಡೀ ಗಾಸಿಪ್ ಲೋಕದಲ್ಲಿ ಸಂಚಲನ ಮೂಡಿಸಿದೆ. ಕೆಲವರು ಮೃಣಾಲ್ ಅವರನ್ನು ಧನುಷ್ ಅವರ "ಗೆಳತಿ" ಎಂದು ಕರೆಯಲು ಪ್ರಾರಂಭಿಸಿದ್ದಾರೆ.
ಧನುಷ್ ಮತ್ತು ಮೃಣಾಲ್ ಠಾಕೂರ್ ನಡುವಿನ ಡೇಟಿಂಗ್ ವದಂತಿ ಈಗ ಹೊಸತೇನಲ್ಲ. ಈ ಹಿಂದೆ ಅಜಯ್ ದೇವಗನ್ ಅವರ 'ಸನ್ ಆಫ್ ಸರ್ದಾರ್- 2' ಸಿನಿಮಾದ ಪ್ರೀಮಿಯರ್ ಪ್ರದರ್ಶನದಲ್ಲಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಲ್ಲದೆ ಇಬ್ಬರೂ ಆತ್ಮೀಯವಾಗಿ ತಬ್ಬಿಕೊಂಡು ಮಾತನಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಅಂದಿನಿಂದಲೇ ಈ ಜೋಡಿಯ ನಡುವೆ ಪ್ರೀತಿ ಚಿಗುರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಮಿಳು ನಟ ಧನುಷ್ ಈಗಾಗಲೇ ಮದುವೆಯಾಗಿ ಡಿವೋರ್ಸ್ ಪಡೆದಿದ್ದಾರೆ. ಇಬ್ಬರೂ ಮಕ್ಕಳು ಇದ್ದಾರೆ. ರಜನಿಕಾಂತ್ ಪುತ್ರಿ ಐಶ್ವರ್ಯ ಅವರನ್ನು ಧನುಷ್ ಪ್ರೀತಿಸಿ ಮದುವೆ ಆಗಿದ್ದರು. ಆದರೆ 18 ವರ್ಷಗಳ ಬಳಿ ಕೆಲ ಭಿನ್ನಾಭಿಪ್ರಾಯಗಳಿಂಧ ಇಬ್ಬರೂ ದೂರಾಗಿದ್ದರು. ಪೋಷಕರು ಇಬ್ಬರ ಜೊತೆ ಮಾತನಾಡಿ ಒಪ್ಪಿಸುವ ಪ್ರಯತ್ನ ಮಾಡಿದ್ರು ಪ್ರಯೋಜನವಾಗಲಿಲ್ಲ.
ನಟ ಧನುಷ್ ಅವರು ಇತ್ತೀಚೆಗೆ 'ರಾಯನ್' ಅಂತಹ ಹಿಟ್ ಸಿನಿಮಾ ನೀಡಿದ್ದಾರೆ. ಸದ್ಯ ಅವರು ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಸಿನಿಮಾದಲ್ಲಿ ನಟಿಸಿದ್ದಾರೆ. 'ಇಡ್ಲಿ ಕಡೇ' ಸಿನಿಮಾ ನಿರ್ದೇಶಿಸಿ ನಟಿಸಿ ಗಮನ ಸೆಳೆದಿದ್ದರು. ಇನ್ನು ಮೃಣಾಲ್ ಠಾಕೂರ್ 'ಸೀತಾ ರಾಮಂ' ಮೂಲಕ ಸೌತ್ ಕಣ್ಮಣಿಯಾಗಿದ್ದು, ನಾನಿ ಜೊತೆ 'ಹಾಯ್ ನಾನ್ನ' ಸಿನಿಮಾದಲ್ಲೂ ಮಿಂಚಿದ್ದಾರೆ. ವೃತ್ತಿಜೀವನದಲ್ಲಿ ಇಬ್ಬರೂ ಉತ್ತುಂಗದಲ್ಲಿರುವಾಗ ಈ ಪ್ರೇಮ ವದಂತಿ ಹಬ್ಬಿದೆ.


Click it and Unblock the Notifications











