ಕೊನೆಗೂ ನಟ ಧನುಷ್ ಹಾಗೂ ನಟಿ ಮೃಣಾಲ್ ಠಾಕೂರ್ ಮದುವೆ ಮಾಡಿಸಿಬಿಟ್ರು!

ಚಿತ್ರರಂಗದಲ್ಲಿ ಲವ್, ಮ್ಯಾರೇಜ್, ಬ್ರೇಕಪ್ ಹೊಸದೇನು ಅಲ್ಲ. ತಾರಾ ಜೋಡಿ ಆತ್ಮೀಯವಾಗಿ ಕಾಣಿಸಿಕೊಂಡರೆ ಇಬ್ಬರೂ ಪ್ರೀತಿಸುತ್ತಿದ್ದಾರೆ ಎನ್ನುವ ಊಹಾಪೋಹ ಶುರುವಾಗುತ್ತದೆ. ಪ್ರತಿ ವದಂತಿಗೂ ಸ್ಪಷ್ಟನೆ ಕೊಡುತ್ತಾ ಕೂರಲು ಸಾಧ್ಯವಿಲ್ಲ ಎನ್ನುವುದು ಅವರ ವಾದ. ಮೌನವಾಗಿದ್ದಾರೆ ಅಂದ್ರೆ ಅದೇ ನಿಜ ಎಂದು ಕೆಲವರು ಭಾವಿಸುತ್ತಾರೆ. ತಮಿಳು ನಟ ಧನುಷ್, ಮರಾಠಿ ನಟಿ ಮೃಣಾಲ್ ಠಾಕೂರ್ ಮದುವೆ ಆಗ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.

ಈಗಾಗಲೇ ಮದುವೆಯಾಗಿ ಧನುಷ್ ಡಿವೋರ್ಸ್ ಪಡೆದಿರುವುದು ಗೊತ್ತೇಯಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯ ಕೈ ಹಿಡಿದಿದ್ದ ಧನುಷ್ 18 ವರ್ಷಗಳ ಬಳಿಕ ಕೆಲ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಇದೀಗ ಧನುಷ್ 2ನೇ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ವದಂತಿ ಜೋರಾಗಿ ಸದ್ದು ಮಾಡ್ತಿದೆ. ಫೆಬ್ರವರಿ 14ರಂದು ಜೋಡಿ ಮದುವೆ ಆಗುತ್ತಾರೆ ಅಂತೆಲ್ಲಾ ಸುದ್ದಿ ಹರಿದಾಡ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಸದ್ಯಕ್ಕೆ ಇದೆಲ್ಲಾ ಫೇಕ್ ಫೇಕ್.

Dhanush Mrunal Thakur Wedding Rumors Go Viral Truth Behind the AI-Generated Marriage Video

ಸೋಶಿಯಲ್ ಮೀಡಿಯಾದಲ್ಲಿ ಅಂತೂ ಧನುಷ್, ಮೃಣಾಲ್ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಇಬ್ಬರೂ ಆತ್ಮೀಯವಾಗಿ ಕಾಣಿಸಿಕೊಂಡಿರುವ ಫೋಟೊ, ವೀಡಿಯೋ ತೇಲಿಬಿಟ್ಟು ಮದುವೆ ವದಂತಿ ಹಬ್ಬಿಸುತ್ತಿದ್ದಾರೆ. ಇದೀಗ ನೆಟ್ಟಿಗರು ಎಐ ವಿಡಿಯೋ ಮೂಲಕ ಇಬ್ಬರ ಮದುವೆಯನ್ನು ಮಾಡಿಸಿಬಿಟ್ಟಿದ್ದಾರೆ. ಧನುಷ್ ಹಾಗೂ ಮೃಣಾಲ್ ಅದ್ಧೂರಿಯಾಗಿ ಮದುವೆ ಆಗಿರುವಂತೆ, ಆಪ್ತರು ಜೋಡಿಗೆ ಶುಭ ಕೋರಿರುವಂತೆ ವೀಡಿಯೋ ಹರಿದಾಡ್ತಿದೆ.

ಎಐ ಸೆಲೆಬ್ರೆಟಿಗಳಿಗೆ ಸಂಕಷ್ಟ ತಂದೊಡ್ಡಿದೆ. ಇಲ್ಲದನ್ನು ಇರುವಂತೆ ಕಲ್ಪಿಸಿ ಫೋಟೊ, ವೀಡಿಯೋ ಕ್ರಿಯೇಟ್ ಮಾಡಲಾಗ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅದು ವೈರಲ್ ಆಗಿ ಕೆಲವರು ನಿಜ ಎಂದೇ ನಂಬುವಂತಾಗಿದೆ. ಇದೀಗ ಧನುಷ್, ಮೃಣಾಲ್ ಎಐ ಮದುವೆ ವಿಡಿಯೋ ಅದೇ ರೀತಿ ಸದ್ದು ಮಾಡ್ತಿದೆ. ಅದ್ಧೂರಿಯಾಗಿ ಮಂಟಪದಲ್ಲಿ ಮೃಣಾಲ್ ಕೊರಳಿಗೆ ಧನುಷ್ ಮಾಂಗಲ್ಯಧಾರಣೆ ಮಾಡಿರುವಂತೆ, ನಟರಾದ ದಳಪತಿ ವಿಜಯ್, ದುಲ್ಕರ್ ಸಲ್ಮಾನ್, ನಟಿಯರಾದ ತ್ರಿಷಾ, ಶ್ರುತಿ ಹಾಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ಮದುವೆ ಸಂಭ್ರಮದಲ್ಲಿ ಭಾಗಿ ಆಗಿರುವಂತೆ ಎಐ ವೀಡಿಯೋ ಜನರೇಟ್ ಮಾಡಲಾಗಿದೆ.

'ಸನ್ ಆಫ್ ಸರ್ದಾರ್ -2' ಚಿತ್ರದ ಕಾರ್ಯಕ್ರಮವೊಂದಕ್ಕೆ ಧನುಷ್ ದಿಢೀರ್ ಆಗಮಿಸಿದ್ದೇ ಇಂತಾದೊಂದು ಊಹಾಪೋಹಕ್ಕೆ ಪುಷ್ಠಿ ನೀಡಿತ್ತು. ಆದರೆ ಈ ಬಗ್ಗೆ ಸಂದರ್ಶನವೊಂದರಲ್ಲಿ ಮೃಣಾಲ್ ಪ್ರತಿಕ್ರಿಯಿಸಿದ್ದಾರೆ. "ಧನುಷ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ. ನಮ್ಮಿಬ್ಬರ ನಡುವೆ ಸಂಬಂಧ ಇದೆ ಎನ್ನುವಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿರುವುದು ನನಗೆ ಗೊತ್ತು. ಅದನ್ನು ನೋಡಿದಾಗ ನನಗೆ ತಮಾಷೆ ಎನಿಸಿತು. ಧನುಷ್ 'ಸನ್ ಆಫ್ ಸರ್ದಾರ್ -2' ಅಂದು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಯಾರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಅವರನ್ನು ಆಹ್ವಾನಿಸಿದ್ದು ಅಜಯ್ ದೇವಗನ್" ಎಂದು ಸ್ಪಷ್ಟನೆ ಕೊಟ್ಟಿದ್ದರು. ಆದರೂ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ವದಂತಿ ಹರಿದಾಡುತ್ತಲೇ ಇದೆ.

ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ಇಬ್ಬರು ಮದುವೆ ಆಗ್ತಾರೆ ಎನ್ನುವುದು ಹೊಸದಾಗಿ ಕೇಳಿಬರುತ್ತಿರುವುದ ಸುದ್ದಿ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಇಬ್ಬರೂ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಹಾರಾಷ್ಟ್ರ ಮೂಲದ ಮೃಣಾಲ್ ಹಿಂದಿ ಹಾಗೂ ಮರಾಠಿ ಚಿತ್ರಗಳಲ್ಲಿ ನಟಿಸಿದ್ದರು. 'ಸೀತಾರಾಮಂ' ಚಿತ್ರದಿಂದ ದೊಡ್ಡ ಬ್ರೇಕ್ ಸಿಕ್ಕಿತ್ತು. ಬಳಿಕ ದಕ್ಷಿಣದಲ್ಲಿ ಅವಕಾಶಗಳು ಅರಸಿ ಬಂದವು. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುವ ಸುಳಿವು ಸಿಕ್ಕಿತ್ತು.

More from Filmibeat

Read more about: dhanush mrunal thakur kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X