'ಕುಬೇರ' ಚಿತ್ರಕ್ಕೆ ಧನುಷ್, ನಾಗಾರ್ಜುನ, ರಶ್ಮಿಕಾ ಪಡೆದ ಸಂಭಾವನೆ ಎಷ್ಟು?

ಚಿತ್ರರಂಗ ಹಾಗೂ ರಾಜಕೀಯರಂಗದಲ್ಲಿ ಕೋಟಿಗಳಿಗೆ ಲೆಕ್ಕವೇ ಇಲ್ಲ. ಬಣ್ಣದಲೋಕದಲ್ಲಂತೂ ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತದೆ. ದೊಡ್ಡ ದೊಡ್ಡ ಸಿನಿಮಾಗಳ ಬಜೆಟ್, ಕಲಾವಿದರ ಸಂಭಾವನೆ ಎಲ್ಲವೂ ಕೋಟಿಗಳಲ್ಲೇ ಲೆಕ್ಕಹಾಕುವಂತೆ ಇರುತ್ತದೆ. ಸದ್ಯ ಬಿಡುಗಡೆಗೆ ಸಜ್ಜಾಗಿರುವ 'ಕುಬೇರ' ಚಿತ್ರದ ಕಲಾವಿದರಿಗೆ ಭಾರೀ ಸಂಭಾವನೆಯೇ ಸಿಕ್ಕಿದೆ.

ಶೇಕರ್ ಕಮ್ಮುಲ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಕ್ರೈಂ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದು. ಧನುಷ್, ನಾಗಾರ್ಜುನ ಹಾಗೂ ರಶ್ಮಿಕಾ ಮಂದಣ್ಣ ಚಿತ್ರದ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಹಾಡುಗಳು, ಟ್ರೈಲರ್ ಸೂಪರ್ ಹಿಟ್ ಆಗಿದೆ. ತೆಲುಗು ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ 'ಕುಬೇರ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ತೆರಗಪ್ಪಳಿಸಲಿದೆ.

Dhanush Nagarjuna and Rashmika Mandanna s Salary Details For Kuberaa film

ಈ ವರ್ಷ ದಕ್ಷಿಣದಲ್ಲಿ ದೊಡ್ಡ ಸಿನಿಮಾಗಳು ಅಷ್ಟಾಗಿ ತೆರೆಗೆ ಬರಲಿಲ್ಲ. ಸ್ಟಾರ್ ಕಲಾವಿದರು ನಟಿಸುವ ಕ್ರೇಜಿ ಕಾಂಬಿನೇಷನ್ ಸಿನಿಮಾ ಇದಾಗಿದೆ. ಈ ವಾರವೇ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಆದರೆ ನಿರೀಕ್ಷಿತ ಮಟ್ಟದಲ್ಲಿ ರೆಸ್ಪಾನ್ಸ್ ಸಿಕ್ತಿಲ್ಲ. ಅಂದಾಜು 120 ಕೋಟಿ ರೂ. ಬಜೆಟ್‌ನಲ್ಲಿ 'ಕುಬೇರ' ಸಿನಿಮಾ ನಿರ್ಮಾಣವಾಗಿದೆ ಎನ್ನುವ ಊಹಾಪೋಹವಿದೆ.

'ಕುಬೇರ' ಚಿತ್ರದಲ್ಲಿ ಧನುಷ್ ಭಿಕ್ಷುಕನ ಪಾತ್ರದಲ್ಲಿ ನಟಿಸಿದ್ದಾರೆ. ಮುಂದೆ ಆತನ ಜೀವನದಲ್ಲಿ ಬರುವ ದೀಪಕ್(ನಾಗಾರ್ಜುನ) ಯಾರು? ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ. ಟ್ರೈಲರ್ ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿದ್ದು ಸಿನಿಮಾ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಲಿದೆ.

Dhanush Nagarjuna and Rashmika Mandanna s Salary Details For Kuberaa film

ಚಿತ್ರದ ರನ್‌ಟೈಮ್ 3 ಗಂಟೆ ಎನ್ನಲಾಗ್ತಿದೆ. ಅಷ್ಟು ಹೊತ್ತು ಸಿನಿಮಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾ ಕಾದು ನೋಡಬೇಕಿದೆ. ಇತ್ತೀಚೆಗೆ 'ಕುಬೇರ' ಸಿನಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ 150 ರೂ. ಸಂಪಾದಿಸುವವರಿಗೆ 200 ರೂ. ಸಮಸ್ಯೆಗಳಿರುತ್ತದೆ. ಅದೇ ರೀತಿ ನೀವು 1 ಕೋಟಿ ರೂ. ಗಳಿಸಿದ್ರೆ 2 ಕೋಟಿ ರೂ. ಸಮಸ್ಯೆಗಳಿರುತ್ತದೆ ಎಂದು ಧನುಷ್ ಬೇಸರದಿಂದ ಹೇಳಿದ್ದರು.

ಧನುಷ್ ಸಂಭಾವನೆ

'ಕುಬೇರ' ಚಿತ್ರದ ಬಜೆಟ್‌ನಲ್ಲಿ ಶೇ.36ರಷ್ಟು ಭಾಗವನ್ನು ಧನುಷ್ ಸಂಭಾವನೆ ರೂಪದಲ್ಲಿ ಪಡೆದಿದ್ದಾರೆ ಎನ್ನಲಾಗ್ತಿದೆ. ಅಂದರೆ 30 ಕೋಟಿ ರೂ. ಸಂಭಾವನೆಯನ್ನು ದೇವ ಪಾತ್ರದಲ್ಲಿ ನಟಿಸಲು ಪಡೆದಿದ್ದಾರೆ. ತೆಲುಗು ರಾಜ್ಯಗಳಲ್ಲಿ ಕೂಡ ಧನುಷ್ ಬಗ್ಗೆ ಕ್ರೇಜ್ ಇದೆ. ಅತ್ತ ಬಾಲಿವುಡ್‌ನಲ್ಲಿ ಕೂಡ ಅವರು ಕಮಾಲ್ ಮಾಡಿ ಬಂದಿದ್ದಾರೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಇಷ್ಟು ದೊಡ್ಡ ಮೊತ್ತದ ಸಂಭಾವನೆ ನೀಡಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್ ವರದಿ ಮಾಡಿದೆ.

14 ಕೋಟಿ ರೂ. ಪಡೆದ ನಾಗ್

ಧನುಷ್ ಬಿಟ್ಟರೆ ಚಿತ್ರದಲ್ಲಿ ನಾಗಾರ್ಜುನ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ. ಅಂದಹಾಗೆ 'ಕುಬೇರ' ಚಿತ್ರದಲ್ಲಿ ನಟಿಸಲು ನಾಗ್ 14 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಾಗ್ ಸಿನಿಮಾಗಳು ತೆಲುಗಿನಲ್ಲಿ ಅಷ್ಟಾಗಿ ಸದ್ದು ಮಾಡ್ತಿಲ್ಲ. ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕುಬೇರ'ನ ದರ್ಬಾರ್ ಹೇಗಿರುತ್ತೋ ಕಾದು ನೋಡಬೇಕಿದೆ.

ರಶ್ಮಿಕಾ ಸಂಭಾವನೆ ಎಷ್ಟು?

'ಪುಷ್ಪ'-2 ಚಿತ್ರದಲ್ಲಿ ನಟಿಸಲು ರಶ್ಮಿಕಾ ಮಂದಣ್ಣ 10 ಕೋಟಿ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗಿತ್ತು. ಆದರೆ 'ಕುಬೇರ' ಚಿತ್ರಕ್ಕೆ ಕೇವಲ 4 ಕೋಟಿ ರೂ. ಮಾತ್ರ ಪಡೆದಿದ್ದಾರೆ ಎಂದು ವರದಿಯಾಗಿದೆ. ಬಾಲಿವುಡ್‌ನಲ್ಲಿ ಕೂಡ ಮಿಂಚುತ್ತಿರುವ ರಶ್ ಯಾಕೆ ಸಂಭಾವನೆ ಕಮ್ಮಿ ಮಾಡಿದ್ರು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Kuberaa Cast Fees: How Much Did Dhanush, Nagarjuna and Rashmika Mandanna Charged for this crime thriller;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X