For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ಚಿತ್ರಕ್ಕೆ ಧನುಶ್ ಸಂಭಾವನೆ 30 ಕೋಟಿ ಅಲ್ಲಾ, ಅದಕ್ಕೂ ಜಾಸ್ತಿ?

  |

  ಹಿಟ್ ಮೇಲೆ ಹಿಟ್ ಬಾರಿಸುತ್ತಿರುವ ತಮಿಳು ನಟ ಧನುಶ್ ತಮ್ಮ ಮುಂದಿನ ಚಿತ್ರವನ್ನು ಶೇಖರ್ ಕಮ್ಮುಲ ಜೊತೆ ಮಾಡುತ್ತಿದ್ದಾರೆ ಎನ್ನುವುದು ಖಚಿತವಾಗಿದೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಪ್ಯಾನ್ ಇಂಡಿಯಾ ಬಿಡುಗಡೆ ಎಂದು ಹೇಳಲಾಗಿದೆ.

  Dhanush ಅವರ ಸಂಭಾವನೆ ಈಗ ಎಷ್ಟು ಗೋತ್ತಾ | Filmibeat Kannada

  ಈ ಚಿತ್ರಕ್ಕಾಗಿ ಧನುಶ್ 30 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನುವ ಸುದ್ದಿ ಕಾಲಿವುಡ್‌ನಲ್ಲಿ ಸಖತ್ ಸದ್ದು ಮಾಡಿದೆ. ಆದರೆ ಈ ದೊಡ್ಡ ಪ್ರಾಜೆಕ್ಟ್‌ಗೆ ಧನುಶ್ ಪಡೆಯುತ್ತಿರುವುದು 30 ಕೋಟಿಯಲ್ಲ, ಅದಕ್ಕೂ ಜಾಸ್ತಿ ಎಂಬ ವಿಷಯ ಬಹಿರಂಗವಾಗಿದೆ. ಮುಂದೆ ಓದಿ...

  ಹಿಟ್ ಮೇಲೆ ಹಿಟ್ ಕೊಟ್ಟ ಧನುಶ್ ಸಂಭಾವನೆ ಭಾರಿ ಏರಿಕೆಹಿಟ್ ಮೇಲೆ ಹಿಟ್ ಕೊಟ್ಟ ಧನುಶ್ ಸಂಭಾವನೆ ಭಾರಿ ಏರಿಕೆ

  50 ಕೋಟಿ ಸಂಭಾವನೆ?

  50 ಕೋಟಿ ಸಂಭಾವನೆ?

  ಶೇಖರ್ ಕಮ್ಮುಲ ಜೊತೆಗಿನ ಪ್ಯಾನ್ ಇಂಡಿಯಾ ಚಿತ್ರಕ್ಕಾಗಿ ಧನುಶ್ ಬರೋಬ್ಬರಿ 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಈವರೆಗಿನ ವೃತ್ತಿ ಜೀವನದಲ್ಲಿ ಧನುಶ್ ಪಡೆದಿರುವ ಅತಿ ದೊಡ್ಡ ಸಂಭಾವನೆ ಇದಾಗಿದೆ. ಸಾಮಾನ್ಯವಾಗಿ ಧನುಶ್ ಚಿತ್ರವೊಂದಕ್ಕೆ 10-15 ಕೋಟಿ ಸಂಭಾವನೆ ಚಾರ್ಜ್ ಮಾಡುತ್ತಾರೆ. ಆದರೆ, ಮೂರು ಭಾಷೆ ಹಾಗೂ ಪ್ಯಾನ್ ಇಂಡಿಯಾ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಸಂಭಾವನೆಗೆ ಡೀಲ್ ಆಗಿದೆ ಎಂಬ ವಿಷಯ ಸುದ್ದಿಯಲ್ಲಿದೆ.

  ಹಾಲಿವುಡ್ ಚಿತ್ರ ಮುಗಿಸಿದ ಧನುಶ್

  ಹಾಲಿವುಡ್ ಚಿತ್ರ ಮುಗಿಸಿದ ಧನುಶ್

  ಮೊದಲ ಸಲ ಹಾಲಿವುಡ್‌ ಚಿತ್ರದಲ್ಲಿ ಧನುಶ್ ನಟಿಸಿದ್ದಾರೆ. 'ದಿ ಗ್ರೇ ಮ್ಯಾನ್' ಸಿನಿಮಾದ ಶೂಟಿಂಗ್‌ಗಾಗಿ ಯುಎಸ್ ತೆರಳಿದ್ದ ಧನುಶ್, ಸಂಪೂರ್ಣ ಚಿತ್ರೀಕರಣ ಮುಗಿಸಿದ್ದಾರೆ. 2022ರ ಸಮ್ಮರ್‌ಗೆ ಈ ಚಿತ್ರ ರಿಲೀಸ್ ಆಗಲಿದೆ.

  ಹೈದರಾಬಾದ್‌ನಲ್ಲಿ ಡಿ43 ಆರಂಭ

  ಹೈದರಾಬಾದ್‌ನಲ್ಲಿ ಡಿ43 ಆರಂಭ

  ಯುಎಸ್‌ನಿಂದ ಬಂದ ನಂತರ ಇನ್ನು ಹೆಸರಿಡದ ಧನುಶ್ 43 ಚಿತ್ರದ ಶೂಟಿಂಗ್ ಮುಂದುವರಿಸಲಿದ್ದಾರೆ. ಲಾಕ್‌ಡೌನ್‌ಗೂ ಮುಂಚೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿ ಅರ್ಧಕ್ಕೆ ನಿಂತಿದೆ. ಬಾಕಿ ಉಳಿದಿರುವ ಶೂಟಿಂಗ್ ಹೈದರಾಬಾದ್‌ನಲ್ಲಿ ಮುಂದುವರಿಸಲಿದ್ದಾರೆ. ಮಾಳವಿಕಾ ಮೋಹನ್ ಈ ಚಿತ್ರದಲ್ಲಿ ನಾಯಕಿ.

  ಆಗಸ್ಟ್‌ನಲ್ಲಿ 'ನಾನೇ ವರುವೆನ್'

  ಆಗಸ್ಟ್‌ನಲ್ಲಿ 'ನಾನೇ ವರುವೆನ್'

  ಸೆಲ್ವ ರಾಘವನ್ ಜೊತೆ ಮಾಡುತ್ತಿರುವ ನಾನೇ ವರುವೆನ್ ಸಿನಿಮಾದ ಚಿತ್ರೀಕರಣ ಆಗಸ್ಟ್ 20 ರಿಂದ ಆರಂಭವಾಗಲಿದೆ. ಸೆಲ್ವರಾಘವನ್ ಮತ್ತು ಧನುಶ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ಪುದುಪೇಟೆ, ಯಾರಡಿ ನೀ ಮೋಹನಿ, ಮಾಯಾಕಣ್ಣನ್ ಎನ್ನ ಅಂತಹ ಸಿನಿಮಾಗಳು ಬಂದವು. ಬಹಳ ವರ್ಷದ ನಂತರ ಮತ್ತೆ ಈ ಜೋಡಿ ಒಟ್ಟಿಗೆ ಬರ್ತಿದೆ.

  English summary
  Dhanush will reportedly be paid a whopping remuneration of 50 CR for his upcoming Tamil Telugu Hindi trilingual to be directed by Sekhar Kammula.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X