ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಗಾಗಿ ಮತ್ತೆ ಮೈಕ್ ಹಿಡಿದ ನಟ ಧನುಷ್
ತಮಿಳು ಸಿನಿಮಾರಂಗದ ಖ್ಯಾತ ನಟ ಧನುಷ್ ಅಭಿನಯ ಮಾತ್ರವಲ್ಲದೆ ಸಿನಿಮಾದ ಬೇರೆ ಬೇರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ನಿರ್ದೇಶನ, ನಿರ್ಮಾಣ, ಗಾಯನ ಮತ್ತು ಹಾಡುಗಳನ್ನು ಬರೆಯುವ ಜೊತೆಗೆ ವಿವಿಧ ವಿಭಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಧನುಷ್ ನಟನೆಯ ಜೊತೆಗೆ ಉತ್ತಮ ಹಾಡುಗಾರ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ.
ಧನುಷ್ ಹಾಡಿರುವ 'ಕೊಲವೆರಿ ಡಿ..' ಸಾಂಗ್ ತಮಿಳು ಮಾತ್ರವಲ್ಲದೆ ದೇಶ ವಿದೇಶದಲ್ಲೂ ಸದ್ದು ಮಾಡಿದೆ. ಇಂದು ಈ ಹಾಡು ಗಾನಪ್ರಿಯರ ಫೇವರಿಟ್ ಲಿಸ್ಟ್ ನಲ್ಲಿದೆ. ಈ ಹಾಡು ಸೂಪರ್ ಹಿಟ್ ಆದ ಬಳಿಕ ಧನುಷ್ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಇದೀಗ ಮತ್ತೆ ಹಾಡಲು ಸಜ್ಜಾಗಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ ಹಾಡಿಗೆ ಧನುಷ್ ಧ್ವನಿಯಾಗುತ್ತಿದ್ದಾರೆ. ಸಂಗೀತ ದಿಗ್ಗಜ ರೆಹಮಾನ್ ಸಂಗೀತದಲ್ಲಿ ಧನುಷ್ ಹಾಡುತ್ತಿರುವ ವಿಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಈ ಬಗ್ಗೆ ಸ್ವತಃ ನಟ ಧನುಷ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿರುವ ಧನುಷ್ ಅದೇ ಸಿನಿಮಾಗೆ ಹಾಡುತ್ತಿದ್ದಾರೆ. ಹೌದು, ಹಿಂದಿಯ ಅತರಂಗಿ ರೇ ಸಿನಿಮಾದಲ್ಲಿ ಧನುಷ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಸಹ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ರೆಹಮಾನ್ ಸಂಗೀತ ಸಂಯೋಜನೆಯಲ್ಲಿ ಮೊದಲ ಬಾರಿಗೆ ಧನುಷ್ ಹಾಡುತ್ತಿದ್ದಾರೆ. ಈಗಾಗಲೇ ಈ ಹಾಡಿನ ರೆಕಾರ್ಡಿಂಗ್ ಮಾಡಿ ಮುಗಿಸಿದೆ ತಂಡ. ರೆಕಾರ್ಡಿಂಗ್ ಬಳಿಕ ರೆಹಮಾನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದ್ಹಾಗೆ ಅತರಂಗಿ ರೇ ಸಿನಿಮಾ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.


Click it and Unblock the Notifications











