Captain Miller: ವಿವಾದದ ಸುಳಿಯಲ್ಲಿ ಶಿವಣ್ಣನ 'ಕ್ಯಾಪ್ಟನ್ ಮಿಲ್ಲರ್', ಅಷ್ಟಕ್ಕೂ ಏನಾಯ್ತು?

ನಟ ಧನುಷ್ ಮತ್ತು ಶಿವರಾಜ್‌ಕುಮಾರ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಈ ವರ್ಷ ಸಂಕ್ರಾಂತಿಗೆ ಭರ್ಜರಿ ಓಪನಿಂಗ್ ಪಡೆದಿತ್ತು. ನಿರ್ದೇಶಕ ಅರುಣ್ ಮಾಥೇಶ್ವರನ್ ಅವರ ಈ ಆಕ್ಷನ್ ಮತ್ತು ಸಾಮಾಜಿಕ ಕಳಕಳಿಯ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಮಾಲ್ ಮಾಡುವ ಜೊತೆಗೆ ಜನರ ಮನಗೆದ್ದಿತ್ತು. ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ.

ಜನವರಿ 12 ರಂದು ತೆರೆಕಂಡ ಈ ಸಿನಿಮಾಗೆ ನಟ ಧನುಷ್ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಕೈಜೋಡಿಸಿದ್ದರು. ಈಗ ಸಿನಿಮಾ ಮೇಲೆ ಖ್ಯಾತ ಲೇಖಕರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. 'ಕ್ಯಾಪ್ಟನ್ ಮಿಲ್ಲರ್' ಕಥೆಯನ್ನು ನಕಲು ಮಾಡಲಾಗಿದೆ ಎಂದು ಆರೋಪಿಸಿದ್ದು, ಸದ್ಯಕ್ಕೆ ಇದೇ ಕಾಲಿವುಡ್‌ನಲ್ಲಿ ಸಕತ್ ಚರ್ಚೆಯಲ್ಲಿದೆ.

Dhanush, Shiva Rajkumar starrer Captain Miller in plagiarism row

ಕಾದಂಬರಿಯಿಂದ ಕಾಪಿ ಮಾಡಲಾಗಿದೆಯೇ 'ಕ್ಯಾಪ್ಟನ್ ಮಿಲ್ಲರ್'!?

ಸದ್ಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾವನ್ನು ಕಾಪಿ ಮಾಡಲಾಗಿದೆ ಎಂದು ಬರಹಗಾರ ಮತ್ತು ನಟ ವೇಲಾ ರಾಮಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಕಾದಂಬರಿ ಪಟ್ಟತ್ತು ಯಾನೈ (ನೂರು ಆನೆಗಳು) ಅನ್ನು ಸಲೀಸಾಗಿ ನಕಲಿ ಮಾಡಿದ್ದಾರೆ ಎಂದು 'ಪುತ್ತಿಯ ತಲೈಮುರೈ' ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

'ಕ್ಯಾಪ್ಟನ್ ಮಿಲ್ಲರ್' ಚಿತ್ರದ ತಂಡದ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶಕರ ಸಂಘವನ್ನು ಸಂಪರ್ಕಿಸಲು ಸಿದ್ಧರಾಗಿರುವುದಾಗಿಯೂ ನಟ, ಬರಹಗಾರ ವೇಲಾ ರಾಮಮೂರ್ತಿ ಮಾಹಿತಿ ನೀಡಿದ್ದಾರೆ. ಕ್ಯಾಪ್ಟನ್ ಮಿಲ್ಲರ್ ಸಿನಿಮಾ ತಂಡ ಚಲನಚಿತ್ರವನ್ನು ನಿರ್ಮಿಸುವ ಮೊದಲು ಅವರಿಂದ ಯಾವುದೇ ಅನುಮತಿಯನ್ನು ಪಡೆಯಲಿಲ್ಲ ಎಂದು ಬರಹಗಾರ ಬೇಸರ ಹೊರಹಾಕಿದ್ದಾರೆ.

"ಕ್ಯಾಪ್ಟನ್ ಮಿಲ್ಲರ್ ನನ್ನ ಕಾದಂಬರಿ ಪಟ್ಟತ್ತು ಯಾನೈ ಅನ್ನು ಆಧರಿಸಿದೆ. ಕೃತಿಚೌರ್ಯ ಮಾಡಿ ಸಿನಿಮಾ ಮಾಡಲಾಗಿದೆ. ಹೀಗಾಗಿ ನನಗೆ ನ್ಯಾಯ ಬೇಕು. ಚಿತ್ರರಂಗದಲ್ಲಿ ಪ್ರಾಮಾಣಿಕತೆ ಇಲ್ಲ. ನಾನಯ ಹೆಸರು ಗಳಿಸಲು ಇದೆಲ್ಲ ಮಾಡುತ್ತಿಲ್ಲ. ಹಾಗಾಗಿ ಭಾರತಿರಾಜ ಅವರು ನನಗೆ ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ನ್ಯಾಯಕ್ಕಾಗಿ ಸಿನಿಮಾ ನಿರ್ದೇಶಕರ ಸಂಘದ ಮೊರೆ ಹೋಗುತ್ತಿದ್ದೇನೆ" ಎಂದಿದ್ದಾರೆ.

Dhanush, Shiva Rajkumar starrer Captain Miller in plagiarism row

ಕೃತಿಚೌರ್ಯದ ಆರೋಪದ ಕುರಿತು ಚಿತ್ರ ತಂಡದ ವಿರುದ್ಧದ ತನ್ನ ಆರೋಪಗಳನ್ನು ಸ್ಪಷ್ಟಪಡಿಸಿದ ವೇಲಾ ರಾಮಮೂರ್ತಿ, ತಾನು ಖ್ಯಾತಿ ಅಥವಾ ಹಣವನ್ನು ಗಳಿಸುವ ಯೋಚನೆಯಿಂದ ತಂಡದ ಮೇಲೆ ಈ ಆರೋಪಗಳನ್ನು ಮಾಡಿಲ್ಲ. ಆದರೆ ಬೌದ್ಧಿಕ ಆಸ್ತಿ ಹಕ್ಕುಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಲು ಮತ್ತು ಅವರ ಶ್ರಮಕ್ಕೆ ನ್ಯಾಯ ಪಡೆಯಲು ಇದನ್ನು ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಲೇಖಕ ವೇಲಾ ರಾಮಮೂರ್ತಿ ಬರವಣಿಗೆಯ ಜೊತೆ ಜೊತೆಗೆ. ತಮಿಳು ಚಿತ್ರರಂಗದಲ್ಲಿ ಕಿದಾರಿ, ಸೇತುಪತಿ, ಎನ್‌ಜಿಕೆ, ನಮ್ಮ ವೀಟು ಪಿಳ್ಳೈ, ಅನ್ನತ್ತೆ ಮತ್ತು ಇನ್ನೂ ಅನೇಕ ಸಿನಿಮಾಗಳು ಮತ್ತು ಅನೇಕ ತಮಿಳು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಇನ್ನು, ಈ ಬಗ್ಗೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕ್ಯಾಪ್ಟನ್ ಮಿಲ್ಲರ್ ಬಗ್ಗೆ ಇನ್ನಷ್ಟು ಮಾಹಿತಿ

'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಅದೇ ಹೆಸರಿನ ಪಾತ್ರದ ಸುತ್ತ ಸುತ್ತುತ್ತದೆ. ಮಾಧ ಕರ್ಕಿ ಜೊತೆಗೆ ಅರುಣ್ ಮಾಥೇಶ್ವರನ್ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಧನುಷ್, ಪ್ರಿಯಾಂಕಾ ಅರುಲ್ ಮೋಹನ್, ಶಿವ ರಾಜ್‌ಕುಮಾರ್, ಸಂದೀಪ್ ಕಿಶನ್, ಜಾನ್ ಕೊಕ್ಕೆನ್, ಎಡ್ವರ್ಡ್ ಸೊನ್ನೆನ್‌ಬ್ಲಿಕ್ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿದಿದ್ದಾರೆ. ಸಿದ್ಧಾರ್ಥ ನುನಿ ಛಾಯಾಗ್ರಹಣ ಮತ್ತು ನಾಗೂರನ್ ರಾಮಚಂದ್ರನ್ ಸಂಕಲನ ಮಾಡಿದ್ದಾರೆ. ಸ್ವಾತಂತ್ರ್ಯ ಮತ್ತು ಸಮಾನತೆ ಎರಡು ಅಂಶಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ ಎಂಬ ಗೊಂದಲಗಳು ಮತ್ತು ಆಕ್ಷನ್ ಸಿಕ್ವೆನ್ಸ್‌ ಜೊತೆಗೆ ಸಿನಿಮಾ ಸಕತ್ ಸದ್ದು ಮಾಡುತ್ತಿದೆ.

More from Filmibeat

English summary
Writer Vela Ramamoorthy claims Dhanush's Captain Miller is copied.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X