ಕೊರೊನಾ ಭೀತಿಯಲ್ಲೂ ಮೊದಲ ದಿನ ದಾಖಲೆ ಗಳಿಕೆ ಕಂಡ ಧನುಶ್ ಸಿನಿಮಾ

ತಮಿಳು ನಟ ಧನುಶ್ ಅಭಿನಯದ 'ಕರ್ಣನ್' ಸಿನಿಮಾ ಬಿಡುಗಡೆಗೂ ಒಂದು ದಿನ ಮುಂಚೆ ತಮಿಳುನಾಡಿನಲ್ಲಿ 50 ಪರ್ಸೆಂಟ್ ಆಸನ ಭರ್ತಿಗೆ ಆದೇಶ ಜಾರಿ ಮಾಡಲಾಯಿತು. ಮೊದಲೇ ಕೊರೊನಾ ಭೀತಿಯಲ್ಲಿದ್ದ ಧನುಶ್ ಚಿತ್ರಕ್ಕೆ 50 ಪರ್ಸೆಂಟ್ ಆದೇಶ ಮತ್ತಷ್ಟು ಕಷ್ಟಕ್ಕೆ ದೂಡಿತ್ತು.

ಕೊರೊನಾ ಭೀತಿ, 50 ಪರ್ಸೆಂಟ್ ನೀತಿಯನ್ನು ಮೀರಿ ಧನುಶ್ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಕಂಡಿದೆ. ವರದಿಗಳ ಪ್ರಕಾರ ಕರ್ಣನ್ ಸಿನಿಮಾ ಮೊದಲ ದಿನ 10.50 ಕೋಟಿ ಗಳಿಸಿದೆ. ವೈಯಕ್ತಿಕವಾಗಿ ಧನುಶ್ ವೃತ್ತಿ ಜೀವನದಲ್ಲೂ ಇದು ದಾಖಲೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ 'ಕರ್ಣನ್' ಸಿನಿಮಾ 6.75 ಕೋಟಿ ಕಲೆಕ್ಷನ್ ಮಾಡಿದೆ. ಇದಕ್ಕೂ ಮುಂಚೆ ತೆರೆಕಂಡ 'ಮಾಸ್ಟರ್' ಚಿತ್ರ ಈ ವರ್ಷದಲ್ಲಿ ಮೊದಲ ದಿನ ಹೆಚ್ಚು ಗಳಿಕೆ ಕಂಡಿತ್ತು. ಕಳೆದ ವಾರ ಬಿಡುಗಡೆಯಾಗಿದ್ದ 'ಸುಲ್ತಾನ್' ಚಿತ್ರ ಮೊದಲ ದಿನ ತಮಿಳುನಾಡಿನಲ್ಲಿ 5 ಕೋಟಿ ಗಳಿಕೆ ಕಂಡಿದೆ.

Dhanush Starrer Karnan Movie Day 1 collection Report

ಇನ್ನು ಒಟ್ಟಾರೆ ಗಳಿಕೆಯಲ್ಲಿ ಕರ್ಣನ್ ಸಿನಿಮಾ 10.50 ಕೋಟಿ ಗಳಿಸಿದ್ರೆ, ಇದಕ್ಕೂ ಮುಂಚೆ ಧನುಶ್ ನಟನೆಯಲ್ಲಿ ಬಂದಿದ್ದ 'ವಡಾ ಚೆನ್ನೈ' ಸಿನಿಮಾ 6.75 ಕೋಟಿ ಹಾಗೂ 'ಪಟಾಸ್' ಸಿನಿಮಾ 6.50 ಕೋಟಿ ಬಾಚಿಕೊಂಡಿತ್ತು.

ಮರಿ ಸೆಲ್ವರಾಜ್ ನಿರ್ದೇಶನದ ಕರ್ಣನ್ ಸಿನಿಮಾದಲ್ಲಿ ಲಾಲ್ ಪೌಲ್, ಯೋಗಿ ಬಾಬು, ನಟರಾಜನ್ ಸುಬ್ರಮಣ್ಯಮ್, ರಜೀಶಾ ವಿಜಯನ್, ಗೌರಿ ಜಿ ಕೃಷ್ಣನ್ ಸೇರಿದಂತೆ ಹಲವು ನಟಿಸಿದ್ದಾರೆ. ಸಂತೋಷ್ ನಾರಾಯಣ್ ಸಂಗೀತ ನೀಡಿದ್ದಾರೆ.

Recommended Video

ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದ ತಾಪ್ಸಿ ಮತ್ತು ಕಂಗನಾ ಒಂದಾಗಿ ಬಿಟ್ರಾ? | Taapsee Pannu|Filmibeat Kannada

More from Filmibeat

English summary
Tamil Actor Dhanush Starrer Karnan Movie has released april 9th. here is the Day 1 gross collection of the Movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X