'ನಾನೇ ವರುವೇನ್' ಟೀಸರ್: ಧನುಷ್‌ಗೆ ಧನುಷ್ ವಿಲನ್ ಆಗಿದ್ಯಾಕೆ?

'ಅಸುರನ್' ಹಾಗೂ 'ಕರ್ಣನ್' ರೀತಿಯ ವಿಭಿನ್ನ ಸಿನಿಮಾಗಳ ಮೂಲಕ ಇತ್ತೀಚೆಗೆ ಸೆನ್ಸೇಷನ್‌ ಕ್ರಿಯೇಟ್ ಮಾಡಿದ ನಟ ಧನುಷ್. ಕಾಲಿವುಡ್ ಮಾತ್ರವಲ್ಲ ಬಾಲಿವುಡ್, ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲೂ ಧನುಷ್ ನಟಿಸಿ ಗೆದ್ದಿದ್ದಾರೆ. ಇವರ ಹೊಸ ಸಿನಿಮಾ 'ನಾನೇ ವರುವೇನ್'. ಸ್ವತಃ ಧನುಷ್ ಸಹೋದರ ಸೆಲ್ವ ರಾಘವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಟೀಸರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

'ನಾನೇ ವರುವೇನ್' ಚಿತ್ರದಲ್ಲಿ ಧನುಷ್ ದ್ವಿಪಾತ್ರದಲ್ಲಿ ನಟಿಸಿರುವುದು ವಿಶೇಷ. ಚಿತ್ರದಲ್ಲಿ ಹೀರೊ ಆಗಿ ಮಾತ್ರವಲ್ಲ ವಿಲನ್ ಆಗಿಯೂ ಧನುಷ್ ಅಬ್ಬರಿಸಿದ್ದಾರೆ. ಟೀಸರ್‌ಗೆ ಸಖತ್ ರೆಸ್ಪಾನ್ಸ್ ಸಿಕ್ತಿದೆ. ಹೀರೋ ಹಾಗೂ ವಿಲನ್ ಆಗಿ ಧನುಷ್ ವೇರಿಯೇಷನ್ ಸಖತ್ತಾಗಿದೆ. ಮಕ್ಕಳಿಗಾಗಿ ಹೀರೊ ಧನುಷ್, ಅರಣ್ಯದಲ್ಲಿ ಬೇಟೆಯಾಡುವ ವಿಲನ್ ಧನುಷ್ ಸನ್ನಿವೇಶಗಳಲ್ಲಿ ಮೈನವಿರೇಳಿಸುವಂತಿದೆ. ಕಥೆ ಬಗ್ಗೆ ಸುಳಿವು ಬಿಟ್ಟುಕೊಡದೇ ಬಹಳ ಸೊಗಸಾಗಿ ಟೀಸರ್ ಕಟ್ ಮಾಡಿದ್ದಾರೆ. ಇನ್ನು ವಿಲನ್ ಆಗಿ ಧನುಷ್ ರಕ್ಕಸ ನಗುತ್ತಾ ಡ್ಯಾನ್ಸ್ ಮಾಡುವ ಸೀನ್ ಹೈಲೆಟ್ ಆಗಿದೆ.

dhanush-starrer-naane-varuvean-movie-teaser-released

ಸಿಕ್ಕಾಪಟ್ಟೆ ಇಂಟ್ರೆಸ್ಟಿಂಗ್ ಆಗಿ ಸಾಗುವ ಟೀಸರ್‌ ಕ್ಲೈಮ್ಯಾಕ್ಸ್‌ನಲ್ಲಿ ಹೀರೊ ವಿಲನ್ ಇಬ್ಬರು ಕಾದಾಡುವ ದೃಶ್ಯವೂ ಇದೆ. ಥಿಯೇಟರ್‌ನಲ್ಲಿ ಈ ದೃಶ್ಯಕ್ಕೆ ಸಿನಿರಸಿಕರು ಫಿದಾ ಆಗೋದಯ ಗ್ಯಾರೆಂಟಿ. ವಿ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಕಲೈಪುಲಿ ಎಸ್ ತನು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರ 'ನೇನೇ ವಸ್ತುನ್ನಾ' ಹೆಸರಿನಲ್ಲಿ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಲಿದೆ. ತೆಲುಗಿನಲ್ಲೂ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ.

ಧನುಷ್ ಹಾಗೂ ಸೆಲ್ವ ರಾಘವನ್ ಸಹೋದರರ ಕಾಂಬಿನೇಷನ್‌ನಲ್ಲಿ ಬಂದಿರುವ ಹಿಂದಿನ 3 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಕಾಲಿವುಡ್‌ನಲ್ಲಿ ಸೆಲ್ವ ಸಿನಿಮಾಗಳಿಗೆ ಭಾರೀ ಕ್ರೇಜ್ ಇದೆ. ಇನ್ನು ಈ ಬಾರಿ ರಾಷ್ಟ್ರಪ್ರಶಸ್ತಿ ವಿಜೇತ ನಟ ಧನುಷ್ ಕೈ ಜೋಡಿಸಿದ್ದಾರೆ ಅಂದಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. 'ನಾನೇ ವರುವೇನ್' ಚಿತ್ರದಲ್ಲಿ ಎಲ್ಲಿ ಅವ್ರಮ್ ನಾಯಕಿಯಾಗಿ ಮಿಂಚಿದ್ದಾರೆ. ಪ್ರಭು, ಯೋಗಿಬಾಬು, ಇಂದುಜಾ ರವಿಚಂದ್ರನ್ ಚಿತ್ರದ ತಾರಾಗಣದಲ್ಲಿದ್ದಾರೆ.

dhanush-starrer-naane-varuvean-movie-teaser-released

'ನಾನೇ ವರುವೇನ್' ಚಿತ್ರಕ್ಕೆ ಯುವನ್ ಶಂಕರ್ ರಾಜಾ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೀಸರ್ ಬಿಜಿಎಂ ಸಖತ್ ಕಿಕ್ ಕೊಡ್ತಿದೆ. ಸೆಪ್ಟೆಂಬರ್ 29ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಅಂದಹಾಗೆ ಚಿತ್ರದಲ್ಲಿ ಕೌಬಾಯ್ ಲುಕ್‌ನಲ್ಲಿ ಧನುಷ್ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರುವ ನಿರ್ದೇಶಕ ಸೆಲ್ವ ರಾಘವನ್ ಈ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಅಬ್ಬರಿಸಲು ಬರ್ತಿದ್ದಾರೆ.

More from Filmibeat

English summary
Dhanush Starrer Naane Varuvean Movie Teaser Released. Dhanush will be seen as a cowboy and will be playing dual roles, one, as a protagonist and other, as an antagonist in this film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X