ಧನುಷ್ ನಟನೆಯ ವಾತಿ ಚಿತ್ರ 5 ದಿನಗಳಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

ಈ ಹಿಂದೆ ವರುಣ್ ತೇಜ್ ನಟನೆಯ ತೊಲಿಪ್ರೇಮ ಎಂಬ ಸುಂದರ ಲವ್ ಸ್ಟೋರಿ ಸಿನಿಮಾ ನಿರ್ದೇಶಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ತೆಲುಗು ನಿರ್ದೇಶಕ ವೆಂಕಿ ಅಟ್ಲೂರಿ ಹಲವು ವರ್ಷಗಳ ಬಳಿಕ ಅಂತಹ ಗೆಲುವನ್ನು ಈಗ ಮತ್ತೆ ಪಡೆದುಕೊಂಡಿದ್ದಾರೆ. ಹೌದು, ವೆಂಕಿ ಅಟ್ಲೂರಿ ನಿರ್ದೇಶನದ ವಾತಿ ಸಿನಿಮಾ ಸದ್ಯ ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಇನ್ನು ತೆಲುಗಿನ ವೆಂಕಿ ಅಟ್ಲೂರಿ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಚಿತ್ರವನ್ನು ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಸಹ ನಿರ್ಮಿಸಲಾಗಿದೆ. ತಮಿಳಿನಲ್ಲಿ ವಾತಿ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ತೆಲುಗಿನಲ್ಲಿ ಸರ್ ಎಂಬ ಶೀರ್ಷಿಕೆ ಹೊಂದಿದೆ.

Dhanush starrer Vaathi 5 days worldwide box office collection report

ಕಳೆದ ಶುಕ್ರವಾರ ( ಫೆಬ್ರವರಿ 17 ) ಬಿಡುಗಡೆಗೊಂಡ ಈ ಚಿತ್ರದಲ್ಲಿ ಧನುಷ್ ಹಾಗೂ ಸಂಯುಕ್ತ ಮೆನನ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಬಿಡುಗಡೆ ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡ ಸರ್‌ನ ಕ್ಲಾಸ್ ಪ್ರೇಕ್ಷಕರೆಂಬ ಸ್ಟೂಡೆಂಟ್‌ಗಳಿಂದ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ.

ಇನ್ನು ಮೊದಲ ದಿನ ವಿಶ್ವದಾದ್ಯಂತ 14.81 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ ವಾತಿ ಹಾಗೂ ಸರ್ ಚಿತ್ರ ಈಗ ಐದು ದಿನಗಳಲ್ಲಿ 60.11 ಕೋಟಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿದೆ. ಈ ಮೂಲಕ ಧನುಷ್ ಸಿನಿ ಕೆರಿಯರ್‌ನಲ್ಲಿ ವೇಗವಾಗಿ ಐವತ್ತು ಕೋಟಿ ಕ್ಲಬ್ ಸೇರಿದ ಚಿತ್ರ ಎಂಬ ಖ್ಯಾತಿಗೆ ವಾತಿ ಪಾತ್ರವಾಗಿದೆ.

ವಾತಿ ಐದು ದಿನಗಳ ಕಲೆಕ್ಷನ್ ಹೀಗಿದೆ: ಮೊದಲ ದಿನ 14.81 ಕೋಟಿ ಗ್ರಾಸ್, ಎರಡನೇ ದಿನ 18.08 ಕೋಟಿ ಗ್ರಾಸ್, ಮೂರನೇ ದಿನ 17.25 ಕೋಟಿ ಗ್ರಾಸ್, ನಾಲ್ಕನೇ ದಿನ 5.52 ಕೋಟಿ ಗ್ರಾಸ್ ಹಾಗೂ ಐದನೇ ದಿನ 4.45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಇನ್ನು ಕರ್ನಾಟಕದಲ್ಲಿಯೂ ಸಹ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಪ್ರದರ್ಶನವನ್ನು ಕಾಣುತ್ತಿರುವ ವಾತಿ ಐದು ದಿನಗಳಲ್ಲಿ 3 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.

More from Filmibeat

English summary
Dhanush starrer Vaathi 5 days box office collection report. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X