ಬೆಂಗಳೂರಿನಲ್ಲಿ ಧನುಷ್ 'ವಾತಿ' ಚಿತ್ರದ ಬಿಗಿ ಹಿಡಿತ; ಹಾಲಿವುಡ್‌ನ ದೊಡ್ಡ ಚಿತ್ರಕ್ಕಿಂತ ಹೆಚ್ಚು ಶೋಸ್!

ಬೆಂಗಳೂರು.. ಎಲ್ಲಾ ಭಾಷೆಯ ಚಿತ್ರಗಳನ್ನೂ ವೀಕ್ಷಿಸುವ ಸಿನಿ ರಸಿಕರು ಇರುವ ನಗರ. ಸಾಮಾನ್ಯ ಟಿಕೆಟ್ ದರದ ಸಿಂಗಲ್ ಸ್ಕ್ರೀನ್‌ನಿಂದ ಹಿಡಿದು ಒಂದು ಟಿಕೆಟ್‌ಗೆ ಸಾವಿರಾರು ರೂಪಾಯಿ ಕೊಟ್ಟು ಸಿನಿಮಾ ನೋಡುವ ಎಲ್ಲಾ ರೀತಿಯ ಪ್ರೇಕ್ಷಕ ವರ್ಗ ಸಹ ಇಲ್ಲಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ದುಬಾರಿ ಪಿವಿಆರ್, ಐನಾಕ್ಸ್, ಸಿನಿಪೊಲಿಸ್ ರೀತಿಯ ಪರದೆಗಳು ಹಲವೆಡೆ ತಲೆ ಎತ್ತಿವೆ.

ಹೀಗೆ ದಿನಕ್ಕೆ ಸಾವಿರಾರು ಪ್ರದರ್ಶನಗಳು ಜರುಗುವ ಬೆಂಗಳೂರಿನಲ್ಲಿ ಪ್ರತಿವಾರ ಅನೇಕ ಹೊಸ ಚಿತ್ರಗಳು ಬಿಡುಗಡೆಯಾಗಲಿದ್ದು, ಚಿತ್ರಗಳ ನಡುವೆ ಶೋಗಳಿಗಾಗಿ ಪೈಪೋಟಿ ಇದ್ದೇ ಇರುತ್ತದೆ. ಇನ್ನು ಕನ್ನಡದ ಬಿಗ್ ಸ್ಟಾರ್‌ಗಳ ಚಿತ್ರಗಳು ಇಲ್ಲವೆಂದರೆ ಬೆಂಗಳೂರು ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳೇ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಳ್ಳುವುದು ಕಾಮನ್ ಆಗಿಬಿಟ್ಟಿದ್ದು, ಈ ವಾರದ ಪರಿಸ್ಥಿತಿ ಸಹ ಅದೇ ರೀತಿ ಇದೆ.

 Dhanush starrer Vaathi got more shows than any other films in Bangalore on February 23

ಅತ್ತ ಹಾಲಿವುಡ್‌ನ ದೊಡ್ಡ ಚಿತ್ರ ಆಂಟ್‌ಮ್ಯಾನ್ ಬಿಡುಗಡೆಯಾಗಿದ್ದರೂ ಸಹ ಧನುಷ್ ನಟನೆಯ ತಮಿಳು ಸಿನಿಮಾ ವಾತಿ ಬೆಂಗಳೂರಿನಲ್ಲಿ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದೆ. ಹೀಗೆ ಹಾಲಿವುಡ್ ಚಿತ್ರವನ್ನೂ ಮೀರಿಸುವ ಮಟ್ಟಕ್ಕೆ ಧನುಷ್ ಚಿತ್ರ ಪ್ರದರ್ಶನಗಳನ್ನು ಪಡೆದುಕೊಳ್ಳುತ್ತಿರುವುದಕ್ಕೆ ಕಾರಣ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ.

ಹೌದು, ಧನುಷ್ ಹಾಗೂ ಸಂಯುಕ್ತ ಮೆನನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ವಾತಿ ಚಿತ್ರ ತೆಲುಗಿನಲ್ಲಿ ಸರ್ ಎಂಬ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಿದ್ದು, ಮೊದಲ 5 ದಿನಗಳಲ್ಲಿ ವಿಶ್ವದಾದ್ಯಂತ 60 ಕೋಟಿ ಬಾಚಿದೆ. ಇನ್ನು ಕರ್ನಾಟಕದಲ್ಲಿ ಮೊದಲ ಐದು ದಿನಗಳಲ್ಲಿ ಮೂರು ಕೋಟಿ ಗಳಿಸಿದೆ. ಇಂದು ( ಫೆಬ್ರವರಿ 23 ) ವಾತಿ ಚಿತ್ರದ ಏಳನೇ ದಿನದ ಪ್ರದರ್ಶನ ನಡೆಯುತ್ತಿದ್ದು, ಬೆಂಗಳೂರಿನಲ್ಲಿ ಚಿತ್ರ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಹಾಗೂ ಉಳಿದ ಚಿತ್ರಗಳು ಎಷ್ಟೆಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ವಾತಿ - 345 ಪ್ರದರ್ಶನಗಳು

ಆಂಟ್‌ಮ್ಯಾನ್ - 343 ಪ್ರದರ್ಶನಗಳು

ಶೆಹ್ಜಾದಾ - 159 ಪ್ರದರ್ಶನಗಳು

ಪಠಾಣ್ - 124 ಪ್ರದರ್ಶನಗಳು

ಲವ್ ಬರ್ಡ್ಸ್ - 118 ಪ್ರದರ್ಶನಗಳು

ಇನ್ನು ಪಠಾಣ್ ಮೂವತ್ತು ದಿನಗಳನ್ನು ಪೂರೈಸಿದ ನಂತರವೂ ಸಹ ಇಷ್ಟು ದೊಡ್ಡ ಮಟ್ಟದ ಪ್ರದರ್ಶನಗಳನ್ನು ಪಡೆದುಕೊಳ್ಳುವುದರ ಮೂಲಕ ಬಿಗಿ ಹಿಡಿತವನ್ನು ಹೊಂದಿದ್ದು, ಚಿತ್ರ ವಿಶ್ವದಾದ್ಯಂತ 1000 ಕೋಟಿ ಕ್ಲಬ್ ಕೂಡ ಸೇರಿದೆ.

More from Filmibeat

English summary
Dhanush starrer Vaathi got more shows than any other films in Bangalore on February 23. Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X