For Quick Alerts
  ALLOW NOTIFICATIONS  
  For Daily Alerts

  'ಜಗಮೇ ಥಾಂದಿರಮ್' ಬಿಡುಗಡೆ ಬಗ್ಗೆ ಧನುಷ್ ಅಸಮಾಧಾನ

  |

  ಧನುಷ್ ನಟನೆಯ 'ಜಗಮೇ ಥಾಂದಿರಮ್' ಸಿನಿಮಾದ ಟ್ರೇಲರ್ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಜೂನ್ 18ಕ್ಕೆ ಬಿಡುಗಡೆ ಆಗಲಿದೆ.

  ಆದರೆ ಈ ಸಿನಿಮಾದ ನಾಯಕ ಧನುಷ್‌ಗೆ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡುವುದು ಬೇಸರ ತಂದಿದೆ. ಈ ಬಗ್ಗೆ ಬಹಿರಂಗವಾಗಿಯೇ ಅವರು ಅಸಮಾಧಾನ ಹೊರಹಾಕಿದ್ದಾರೆ.

  ಜೂನ್‌ 1 ರಂದು 'ಜಗಮೇ ಥಾಂದಿರಮ್' ಸಿನಿಮಾದ ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಸೇರಿದಂತೆ ಹಲವರು ಸಿನಿಮಾದ ಟ್ರೇಲರ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಟ ಧನುಷ್‌ ಸಹ ಟ್ರೇಲರ್‌ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಜೊತೆಗೆ 'ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಿದ್ದರೆ ಅದ್ಭುತ ಅನುಭವ ನೀಡುತ್ತಿತ್ತು ಈ ಸಿನಿಮಾ ಆದರೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ. ಅಲ್ಲಿಯೂ ನಿಮ್ಮನ್ನೆಲ್ಲ ರಂಜಿಸುತ್ತದೆ ಎಂದುಕೊಂಡಿದ್ದೇನೆ' ಎಂದಿದ್ದಾರೆ ಧನುಷ್.

  'ಜಗಮೇ ಥಾಂದಿರಮ್' ಸಿನಿಮಾವನ್ನು ಚಿತ್ರಮಂದಿರಗಳಲ್ಲಿಯೇ ಬಿಡುಗಡೆ ಮಾಡುವ ಉಮೇದಿನಲ್ಲಿ ಚಿತ್ರತಂಡ ಇತ್ತು. ಧನುಷ್ ನಟನೆಯ 'ಕರ್ಣನ್' ಸಿನಿಮಾ ಬಿಡುಗಡೆ ಆದ ಬಳಿಕ 'ಜಗಮೇ ಥಾಂದಿರಮ್' ಸಿನಿಮಾ ಬಿಡುಗಡೆ ಆಗಬೇಕು ಎಂದಾಗಿತ್ತು. ಅದಕ್ಕಾಗಿಯೇ ಚಿತ್ರತಂಡ ಹಲವು ತಿಂಗಳು ಕಾಯಿತು. ಆದರೆ 'ಕರ್ಣನ್' ಬಿಡುಗಡೆ ಬಳಿಕ ಮತ್ತೆ ಲಾಕ್‌ಡೌನ್ ಆದ ಕಾರಣ ಸಿನಿಮಾದ ನಿರ್ಮಾಪಕರು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದರು. ಧನುಷ್ ಇಷ್ಟವಿಲ್ಲದಿದ್ದರೂ ನಿರ್ಮಾಪಕರ ನಿರ್ಧಾರಕ್ಕೆ ಒಪ್ಪಬೇಕಾಯಿತು.

  ಕನ್ನಡದ ಇತಿಹಾಸ ಹೇಳಿ ಕನ್ನಡಿಗರ ಮನಗೆದ್ದ ಚೈತ್ರ | Filmibeat Kannada

  'ಜಗಮೇ ಥಾಂದಿರಮ್' ಸಿನಿಮಾವು ಗ್ಯಾಂಗ್‌ಸ್ಟರ್ ಕತೆಯಾಗಿದ್ದು, ಮಧುರೈನಿಂದ ಲಂಡನ್‌ಗೆ ಹೋಗಿ ಅಲ್ಲಿ ಗ್ಯಾಂಗ್‌ಸ್ಟರ್ ಆಗಿ ಮೆರೆವ ಪಾತ್ರದಲ್ಲಿ ಧನುಷ್ ನಟಿಸಿದ್ದಾರೆ. ಗೇಮ್‌ ಆಫ್ ಥ್ರೋನ್ಸ್‌ ಖ್ಯಾತಿಯ ಜೇಮ್ಸ್ ಕಾಸ್ಮೋ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ಲಕ್ಷ್ಮಿ, ಸಂಚನಾ ನಟರಾಜನ್, ಜೋಜು ಜಾರ್ಜ್ ಇನ್ನೂ ಹಲವರು ನಟಿಸಿದ್ದಾರೆ.

  English summary
  Dhanush starer Jagame Thandhiram movie releasing on Netflix. Dhanush not happy about the OTT release.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X