ಭಿಕ್ಷುಕನ ಅವತಾರದಲ್ಲಿ ಧನುಷ್ ; ಹಿಡಿ ಶಾಪ ಹಾಕಿದ ತಿರುಪತಿ ತಿಮ್ಮಪ್ಪನ ಭಕ್ತರು..

ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ನಟ ಧನುಷ್. ಕಮರ್ಷಿಯಲ್ ಹೀರೋ ಆಗಿ ತನ್ನದೇ ಆದ ಸ್ಥಾನವನ್ನ ಹೊಂದಿರುವ ಧನುಷ್, ಬೇರೆ ಸೂಪರ್ ಸ್ಟಾರ್ ಗಳು ಆಯ್ಕೆ ಮಾಡಿಕೊಳ್ಳಲು ಹಿಂದೇಟು ಹಾಕುವ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ಸಲೀಸಾಗಿ ನಟಿಸುತ್ತಾ ಬಂದಿದ್ದಾರೆ. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಜನಸಾಮಾನ್ಯರನ್ನ ಪ್ರತಿನಿಧಿಸುವಂತಹ, ಅಪರೂಪದ ಕಥೆಗಳಿಗೆ ಜೀವ ತುಂಬುವ ಪ್ರಾಮಾಣಿಕ ಪ್ರಯತ್ನವನ್ನ ಮಾಡುವ ಧನುಷ್ ಸದ್ಯಕ್ಕೆ ಅಲೆಮಾರಿಯಂತೆ ಬದುಕಿದ್ದಾರೆ. ತಿರುಪತಿಯಲ್ಲಿ ಭಿಕ್ಷುಕನಂತೆ ಬೀದಿ ಬೀದಿ ಅಲೆದಿದ್ದಾರೆ.

ಹೌದು, ಗ್ಲೋಬಲ್ ಲೆವಲ್ ನಲ್ಲಿ ಮಾರ್ಕೆಟ್ ಹೊಂದಿರುವ ಧನುಷ್, ಸದ್ಯಕ್ಕೆ ತಮ್ಮ 51ನೇ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಶೇಖರ್ ಕಮ್ಮುಲು ನಿರ್ದೇಶನದ ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗೆ ತಿರುಪತಿಯಲ್ಲಿ ನಡೆದಿದೆ. ಕೆದರಿದ ಕೂದಲು, ಮಾಸಿದ ಬಟ್ಟೆ ಹಾಗೂ ಅತಿಯಾಗಿ ಬೆಳೆದ ಗಡ್ಡದ ಜೊತೆ ಧನುಷ್ ಬೀದಿ ಬೀದಿ ಸುತ್ತಿದ್ದಾರೆ. ಈ ಅವತಾರದಲ್ಲಿ ಧನುಷ್ ಅವರನ್ನ ಯಾರು ಗುರುತಿಸಲು ಸಾಧ್ಯವಾಗಲಿಲ್ಲ ಅನ್ನುವುದು ಬೇರೆ ವಿಷಯ.

Dhanushs D 51 Shoot Cancelled In Tirupati

ಹಿಡಿ ಶಾಪ ಹಾಕಿದ ತಿರುಪತಿ ತಿಮ್ಮಪ್ಪನ ಭಕ್ತರು..!

ತಿರುಪತಿ ಸನ್ನಿಧಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಹಿನ್ನೆಲೆ, ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಪೊಲೀಸರು ಬದಲಾವಣೆಯನ್ನ ಮಾಡಿದ್ದರು. ಈ ಕಾರಣದಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಾಹನ ಸವಾರರು ಕಿರಿಕಿರಿಯನ್ನೂ ಅನುಭವಿಸಿದರು. ಹೀಗಾಗಿ ಇಂತಹ ಜಾಗದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ಏಕೆ ಎಂದು ಕೆಂಡಾಮಂಡಲವಾದ ದರ್ಶನಕ್ಕೆ ಬಂದಿದ್ದ ಕೆಲ ಭಕ್ತರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕೊನೆಗೆ ಭಕ್ತರೊಬ್ಬರು ಪೊಲೀಸರಿಗೆ ದೂರು ನೀಡಿದ ಬಳಿಕ ಶೂಟಿಂಗ್ ನಿಲ್ಲಿಸಲಾಯಿತು. ಚಿತ್ರೀಕರಣವನ್ನು ಪೊಲೀಸರು ತಡೆದರೂ ತಂಡ ತಾವು ಬಯಸಿದದ್ದನ್ನು ಶೂಟ್​ ಮಾಡಲು ಯಶಸ್ವಿಯಾಗಿದೆ. ಶೂಟಿಂಗ್ ಮುಗಿಸಿ ಧನುಷ್ ಕೂಡ ಬುಧವಾರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಈ ವೇಳೆ ಅವರು ಸಾಂಪ್ರದಾಯಿಕ ಬಿಳಿ ಪಂಚೆ ಮತ್ತು ಶಾಲು ಧರಿಸಿದ್ದರು.

More from Filmibeat

English summary
Kollywood Super Star Dhanush shoots for his next film in Tirupati, police halts filming after complaint filed against film unit
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X