Rajinikanth: ಸೂಪರ್ ಹಿಟ್ ಕೊಟ್ಟ ನಿರ್ದೇಶಕನಿಗೆ ತಲೈವಾ ಅವಮಾನ? ಇದೇ ಮೊದಲಲ್ಲ!

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಬರೋಬ್ಬರಿ 600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ನೆಲ್ಸನ್ ನಿರ್ದೇಶನ, ರಜನಿಕಾಂತ್ ಪರ್ಫಾರ್ಮೆನ್ಸ್, ಅನಿರುದ್ಧ್ ಮ್ಯೂಸಿಕ್ ಎಲ್ಲಾ ಸೇರಿ ಸಿನಿಮಾ ಹಿಟ್ ಆಯಿತು.

ಸನ್ ಪಿಕ್ಚರ್ಸ್ ಸಂಸ್ಥೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿತ್ತು. ಅದಕ್ಕೆ ತಕ್ಕ ಪ್ರತಿಫಲ ಸಿಕ್ಕಿತ್ತು. ದೊಡ್ಡ ಮೊತ್ತದ ಲಾಭ ನಿರ್ಮಾಪಕರಿಗೆ ಬಂದಿತ್ತು. ಅದರಲ್ಲಿ ಒಂದಷ್ಟು ಮೊತ್ತವನ್ನು ರಜನಿಕಾಂತ್, ನೆಲ್ಸನ್ ಹಾಗೂ ಅನಿರುದ್ಧ್‌ಗೆ ನೀಡಿದ್ದರು. ಮೂವರಿಗೂ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ಸಿಕ್ಕಿತ್ತು. ಇನ್ನು ಚಿತ್ರಕ್ಕೆ ಕೆಲಸ ಮಾಡಿದ 300 ಜನರಿಗೆ ಚಿನ್ನದ ನಾಣ್ಯ ಉಡುಗೊರೆಯಾಗಿ ನೀಡಿದ್ದರು.

Rajinikanth-Insult-Jailer-Nelson

ಬಹಳ ಅದ್ಧೂರಿಯಾಗಿ 'ಜೈಲರ್' ಸಕ್ಸಸ್ ಮೀಟ್ ಆಯೋಜಿಸಲಾಗಿತ್ತು. ರಜನಿಕಾಂತ್ ಸೇರಿದಂತೆ ಇಡೀ ಚಿತ್ರತಂಡ ಅದರಲ್ಲಿ ಭಾಗಿ ಆಗಿತ್ತು. ಇನ್ನು ವೇದಿಕೆಯಲ್ಲಿ ಸೂಪರ್ ಸ್ಟಾರ್ ಆಡಿದ ಮಾತುಗಳು ವೈರಲ್ ಆಗುತ್ತಿದೆ. ಅದರಲ್ಲಿ ರೀ ರೆಕಾರ್ಡಿಂಗ್‌ಗೂ ಮುನ್ನ 'ಜೈಲರ್' ನನಗೆ ಸಿನಿಮಾ ಪರವಾಗಿಲ್ಲ ಅಂತ ಅಷ್ಟೆ ಅನ್ನಿಸಿತ್ತು. ಅನಿರುದ್ಧ್ ರೀ ರೆಕಾರ್ಡಿಂಗ್ ಬಳಿಕ ಸಿನಿಮಾ ಮ್ಯಾಜಿಕ್ ಕ್ರಿಯೇಟ್ ಮಾಡ್ತು ಎಂದಿದ್ದಾರೆ.

ರಜನಿಕಾಂತ್ ಈ ಹೇಳಿಕೆ ಭಾರೀ ವೈರಲ್ ಆಗ್ತಿದೆ. ಇದೇ ವಿಚಾರವನ್ನಿಟ್ಟಿಕೊಂಡು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. ತಲೈವಾ ನಿರ್ದೇಶಕ ನೆಲ್ಸನ್‌ಗೆ ಅವಮಾನ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ರಜನಿಕಾಂತ್ ಏನು ಹೇಳಿದರು ಅಂತ ನೋಡುವುದಾದರೆ "ರೀ ರೆಕಾರ್ಡಿಂಗ್‌ಗೂ ಮುನ್ನ ನಾನು, ಸೆಂಬಿಯನ್ ಹಾಗೂ ಕಣ್ಣನ್ ಜೊತೆ ಸಿನಿಮಾ ವೀಕ್ಷಿಸಿದ್ವಿ. ಬಳಿಕ ಅವರನ್ನು ಸಿನಿಮಾ ಹೇಗಿದೆ ಎಂದು ಕೇಳಿದೆ"

Rajinikanth-Insult-Jailer-Nelson

"ಕಣ್ಣನ್ ಸೂಪರ್ ಸರ್ ಎಂದರು. ನಾನು ಹೇಳಿದೆ ನೀನು, ನೆಲ್ಸನ್‌ ಎಲ್ಲಾ ಸ್ನೇಹಿತರು ನೀನು ಹಾಗೆ ಹೇಳ್ತೀಯಾ ಬಿಡು ಅಂದೆ. ಸೆಂಬಿಯನ್ ನೀನು ಹೇಳು ಅಂದೆ ಆವರೇಜ್ ಎಂದರು. ನಿಜ ಹೇಳಬೇಕು ಅಂದ್ರೆ ರೀ ರೆಕಾರ್ಡಿಂಗ್ ಮಾಡೋಕು ಮುನ್ನ ನನಗೆ ಸಿನಿಮಾ ಎಬೋ ಆವರೇಜ್ ಎನಿಸಿತ್ತು."

"ಅನಿರುದ್ಧ್ ರೀ ರೆಕಾರ್ಡಿಂಗ್ ಮೂಲಕ ಸಿನಿಮಾವನ್ನು ಎಲ್ಲಿಗೋ ತಗೊಂಡು ಹೋಗಿಬಿಟ್ಟರು. ಅನಿರುದ್ಧ್‌ನಿಂದಲೇ ಸಿನಿಮಾ ಬ್ಲಾಕ್‌ ಬಸ್ಟರ್ ಆಯಿತು. ಹೇಗಾದರೂ ಮಾಡಿ ನನಗೆ ಹಿಟ್ ಕೊಡಬೇಕು, ತನ್ನ ಸ್ನೇಹಿತ ನೆಲ್ಸನ್‌ಗೆ ಹಿಟ್‌ ಕೊಡಬೇಕು ಎಂದು ಹುಚ್ಚನಂತೆ ಕೆಲಸ ಮಾಡಿ ಗೆಲ್ಲಿಸಿದರು. ಅಲಂಕಾರ ಮಾಡದ ಮದುವೆ ಹುಡುಗಿಯಂತೆ ಇದ್ದ ಚಿತ್ರವನ್ನು ತಮ್ಮ ಮ್ಯೂಸಿಕ್‌ನಿಂದ ಅನಿರುದ್ಧ್ ಸುಂದರಗೊಳಿಸಿದರು" ಎಂದಿದ್ದಾರೆ.

ರಜನಿಕಾಂತ್ ಹೇಳಿಕೆ ನೋಡಿದರೆ ನೆಲ್ಸನ್ ಏನು ಶ್ರಮವಹಿಸಲಿಲ್ಲ. ಕಂಪ್ಲೀಟ್ ಕ್ರೆಡಿಟ್‌ ಅನಿರುದ್ಧ್‌ಗೆ ಕೊಟ್ಟರೆ ಹೇಗೆ? ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ತಲೈವಾ ಸಿಕ್ಕಾಪಟ್ಟೆ ಸಿಂಪಲ್. ಇದ್ದಿದ್ದನ್ನು ಇದ್ದಂತೆ ಹೇಳುತ್ತಾರೆ ಅವರು ಹೇಳಿದ್ದರಲ್ಲಿ ತಪ್ಪಿಲ್ಲ ಎನ್ನುತ್ತಿದ್ದಾರೆ. ಆದರೆ ಮತ್ತೆ ಕೆಲವರು ಇದರಲ್ಲಿ ತಪ್ಪು ಹುಡುಕುತ್ತಿದ್ದಾರೆ. 'ಜೈಲರ್' ಆಡಿಯೋ ಲಾಂಚ್ ವೇದಿಕೆಯಲ್ಲೂ ರಜನಿಕಾಂತ್ ನೆಲ್ಸನ್ ನಿರ್ದೇಶನದ 'ಬೀಸ್ಟ್' ಸೋಲನ್ನು ನೆನಪಿಸಿದ್ದರು. ಆ ಸಿನಿಮಾ ಸೋತಿದೆ ಎಂದು ಗೊತ್ತಾದ ಮೇಲೂ, ಕೆಲ ವಿತರಕರು ಬೇಡ ಎಂದಮೇಲೂ ನೆಲ್ಸನ್ ಜೊತೆ ಸಿನಿಮಾ ಮಾಡಿದ್ದಾಗೆ ಹೇಳಿದ್ದರು.

ಪರೋಕ್ಷವಾಗಿ ಅಂದು ಕೂಡ ರಜನಿಕಾಂತ್ ನೆಲ್ಸನ್ ಪ್ರತಿಭೆ ಬಗ್ಗೆ ಮಾತನಾಡಿದ್ದರು. ಈಗ ಮತ್ತೊಮ್ಮೆ ಸಂಪೂರ್ಣ ಸಿನಿಮಾ ಗೆಲುವಿನ ಕ್ರೆಡಿಟ್‌ ಅನ್ನು ಅನಿರುದ್ದ್‌ಗೆ ಕೊಟ್ಟಿದ್ದಾರೆ ಎನ್ನುತ್ತಿದ್ದಾರೆ. 'ಜೈಲರ್' ಸಿನಿಮಾದಲ್ಲಿ ಹೊಸದೇನು ಇಲ್ಲ. ಕಾಮಿಡಿ, ಆಕ್ಷನ್, ಫ್ಯಾಮಿಲಿ ಡ್ರಾಮಾ ಮಿಕ್ಸ್ ಮಾಡಿರೋ ಸಿನಿಮಾ ಅಷ್ಟೆ. ಆದರೂ ನೆಲ್ಸನ್‌ ಕೆಲಸಕ್ಕೆ ಮೆಚ್ಚುಗೆ ಸಿಗಲೇಬೇಕು. ಈ ಹಿಂದೆ 'ಬಾಷಾ' ಸಿನಿಮಾ ಬಗ್ಗೆ ಕೂಡ ತಲೈವಾ ಇದೇ ರೀತಿ ಮಾತನಾಡಿದ್ದರು ಎಂದು ಆ ವಿಡಿಯೋವನ್ನು ಕೂಡ ವೈರಲ್ ಮಾಡುತ್ತಿದ್ದಾರೆ.

More from Filmibeat

English summary
is Nelson insult by Rajinikanth at Jailer success meet?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X