'ದಳಪತಿ' ವಿಜಯ್ ಗೆ ಫೋನ್ ಮಾಡಿದ್ರಾ ಅಜಿತ್? ವೈರಲ್ ಆಗಿದೆ ತಲಾ ಫೋನ್ ಕಾಲ್ ವಿಚಾರ
ತಮಿಳು ಚಿತ್ರರಂಗದ ಖ್ಯಾತ ನಟರಾದ ದಳಪತಿ ವಿಜಯ್ ಮತ್ತು ತಲಾ ಅಜಿತ್ ನಡುವೆ ಫೋನ್ ಕಾಲ್ ಸುದ್ದಿಯೊಂದು ವೈರಲ್ ಆಗಿದೆ. ನಟ ಅಜಿತ್ ದಳಪತಿ ವಿಜಯ್ ಗೆ ಫೋನ್ ಮಾಡಿದ್ದಾರೆ ಎನ್ನುವ ವಿಚಾರ ಕಾಲಿವುಡ್ ನಲ್ಲಿ ಅಚ್ಚರಿ ಮೂಡಿಸಿದೆ. ಕಾಲಿವುಡ್ ಅಜಿತ್ ಮತ್ತು ವಿಜಯ್ ನಡುವೆ ವೃತ್ತಿಪರ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ಇಬ್ಬರು ಸ್ಟಾರ್ ನಟರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಡಿಕೊಳ್ಳುತ್ತಿರುತ್ತಾರೆ.
Recommended Video
ಇಬ್ಬರಲ್ಲಿ ಯಾರು ಗ್ರೇಟ್ ಎನ್ನುವ ವಿಚಾರವಾಗಿ ಆಗಾಗ ಜಗಳವಾಡಿಕೊಳ್ಳುತ್ತಿರುತ್ತಾರೆ. ಹೀಗಿರುವಾಗ ಫೋನ್ ಕಾಲ್ ಸುದ್ದಿ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ನಿಜಕ್ಕೂ ತಲಾ ಅಜಿತ್ ದಳಪತಿ ವಿಜಯ್ ಗೆ ಫೋನ್ ಮಾಡಿದ್ರಾ? ಅಷ್ಟಕ್ಕೂ ಫೋನ್ ಕಾಲ್ ವಿಚಾರ ದಿಢೀರ್ ವೈರಲ್ ಆಗಲು ಕಾರಣವೇನು? ಮುಂದೆ ಓದಿ..

ವಿದೇಶದಲ್ಲಿ ಸಿಲುಕಿರುವ ವಿಜಯ್ ಪುತ್ರ
ದಳಪತಿ ವಿಜಯ್ ಪುತ್ರ ಜಾಸನ್ ಸಂಜಯ್ ಕೆನಡಾದಲ್ಲಿಯೆ ಸಿಲುಕ್ಕಿದ್ದಾರೆ. ಕುಟುಂಬದಿಂದ ದೂರ ಇರುವ ಮಗನ ಚಿಂತೆಯಲ್ಲಿಯೆ ಕಾಲಕಳೆಯುತ್ತಿದ್ದಾರೆ ವಿಜಯ್ ಮತ್ತು ಕುಟುಂಬ. ವಿದ್ಯಾಭ್ಯಾಸಕ್ಕೆ ಹೋದ ಮಗ ವಾಪಸ್ ಆಗಿಲ್ಲ ಎಂದು ಚಿಂತಿಸುತ್ತಿರುವ ವಿಜಯ್ ಗೆ ಸ್ನೇಹಿತರು, ಆಪ್ತರು ಧೈರ್ಯ ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯ್ ಗೆ ಧೈರ್ಯ ತುಂಬಿದ್ರಾ ಅಜಿತ್?
ಈ ನಡುವೆ ಮಗನ ಚಿಂತೆಯಲ್ಲಿರುವ ವಿಜಯ್ ಗೆ ತಲಾ ಅಜಿತ್ ಫೋನ್ ಮಾಡಿ ಧೈರ್ಯ ತುಂಬಿದ್ದಾರೆ ಎನ್ನುವ ಸುದ್ದಿ ದಿಢೀರನೆ ಕಾಲಿವುಡ್ ನಲ್ಲಿ ವೈರಲ್ ಆಗಿದೆ. ವಿಜಯ್ ಗೆ ಫೋನ್ ಮಾಡಿ ಕೆನಾಡದಲ್ಲಿರುವ ಮಗನ ಸುರಕ್ಷತೆ ಮತ್ತು ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದಾರೆ ಎನ್ನುವ ವದಂತಿ ಕಾಳ್ಗಿಚ್ಚಿನಂತೆ ಹಬ್ಬಿದೆ. ಆದರೆ ಈ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದೆ.

ಅಜಿತ್ ಫೋನ್ ಮಾಡಿದ್ದು ವದಂತಿ ಅಷ್ಟೆ
ಅಜಿತ್ ಫೋನ್ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದಂತೆ ಅಜಿತ್ ಆಪ್ತವಲಯ ಈ ಸುದ್ದಿಯನ್ನು ತಳ್ಳಿ ಹಾಕಿದೆ. "ಯಾವುದೆ ಫೋನ್ ಕಾಲ್ ಮಾಡಿಲ್ಲ. ಒಂದು ವೇಳೆ ಅಜಿತ್ ಮತ್ತು ವಿಜಯ್ ನಡುವೆ ಮಾತುಕತೆ ನಡೆದರೆ ಅದೂ ಖಾಸಗಿಯಾಗಿಯೇ ಇರುತ್ತೆ. ಸಾರ್ವಜನಿಕ ಚರ್ಚೆಯ ವಿಷಯವಾಗಿಸುವುದಿಲ್ಲ. ಇದೆಲ್ಲ ಸುಳ್ಳು ಸುದ್ದಿ" ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿಗೆ ಅಜಿತ್ ಹೊಗಳಿದ್ದ ವಿಜಯ್
ನಟ ವಿಜಯ್ ಇತ್ತೀಚಿಗಷ್ಟೆ ತಲಾ ಅಜಿತ್ ಅನ್ನು ಹೊಗಳಿ ಮಾತನಾಡಿದ್ದರು. ಮಾಸ್ಟರ್ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ "ನನ್ನ ಗೆಳೆಯ ಅಜಿತ್ ಹಾಗೆ ನಾನು ಸೂಟ್ ಧರಿಸಿಕೊಂಡು ಬಂದಿದ್ದೇನೆ" ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ಇಬ್ಬರು ಸ್ಟಾರ್ ನಟ ನಡುವೆ ಉತ್ತಮ ಒಡನಾಟವಿರುವುದನ್ನು ವಿಜಯ್ ಮಾತಿನ ಮೂಲಕ ವ್ಯಕ್ತಪಡಿಸಿದ್ದರು.


Click it and Unblock the Notifications











