ಪತಿಯನ್ನು ಅನ್‌ಫಾಲೋ ಮಾಡಿದ ನಟಿ ನಯನತಾರಾ; ಆಕೆಯ ಪೋಸ್ಟ್ ಅರ್ಥವೇನು?

ತಮಿಳು ಚಿತ್ರರಂಗದ ಹಾಟ್ ಕಪಲ್ ನಟಿ ನಯನತಾರಾ - ನಿರ್ದೇಶಕ ವಿಘ್ನೇಶ್ ಶಿವನ್ ಸದಾ ಅಭಿಮಾನಿಗಳ ಗಮನ ಸೆಳೆಯುತ್ತಾರೆ. ಕೆಲ ವರ್ಷಗಳ ಕಾಲ ಪ್ರೀತಿಸಿ ಮದುವೆಯಾದ ಈ ಜೋಡಿ ಸದ್ಯ ಅವಳಿ ಮಕ್ಕಳ ಜೊತೆ ಜೀವನ ಸಾಗಿಸುತ್ತಿದ್ದಾರೆ. ಸರೊಗಸಿ ಪದ್ಧತಿಯಲ್ಲಿ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು.

ಜೋಡಿ ಅಂದ್ರೆ ಹೀಗಿರಬೇಕು ಎಂದು ಎಲ್ಲರೂ ಅಂದುಕೊಳ್ಳುವಂತೆ ದಂಪತಿ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಿದ್ದರು. ತಮ್ಮ ಜೀವನದ ಸುಂದರ ನೆನಪುಗಳನ್ನು ನಯನ್- ವಿಘ್ನೇಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇನ್ನು ಇನ್‌ಸ್ಟಾಗ್ರಾಂ ಪೋಸ್ಟ್ ಮಾಡುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಪತಿ ವಿಘ್ನೇಶ್ ಶಿವನ್‌ನ ಅನ್‌ಫಾಲೋ ಮಾಡಿ ಅಭಿಮಾನಿಗಳಿಗೆ ನಯನ್ ಶಾಕ್ ಕೊಟ್ಟಿದ್ದರು.

Did tamil actress Nayanthara unfollowed her husband Vignesh Shivan on Instagram

ನಯನತಾರಾ ಹಾಗೂ ವಿಘ್ನೇಶ್ ಶಿವನ್ ದೂರಾಗುತ್ತಾರೆ. ಡಿವೋರ್ಸ್ ಪಡೆಯುತ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ನಯನತಾರಾ ಒಂದು ಇಂಗ್ಲೀಷ್‌ ಪೋಸ್ಟ್ ಮಾಡಿದ್ದರು. "ಅವಳು ಕಣ್ಣೀರಿನ ಮೂಲಕವೂ ಇದು ಆಕೆ ಸಿಕ್ಕಿದೆ ಎಂದು ಯಾವಾಗಲೂ ಹೇಳುತ್ತಿದ್ದಳು" ಎನ್ನುವ ಅರ್ಥದಲ್ಲಿ ಒಂದು ಕೋಟ್ ಹಾಕಿದ್ದರು. ಜೊತೆಗೆ ಇನ್ಸ್ಟಾಗ್ರಾಮ್ ನಲ್ಲಿ ಪತಿ ವಿಘ್ನೇಶ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಹಾಗಾಗಿ ಸಂಸಾರದಲ್ಲಿ ಬಿರುಕು ಮೂಡಿದ್ಯಾ? ನಯನ್ ಪೋಸ್ಟ್ ಅರ್ಥವೇನು? ಆಕೆ ಪತಿಯನ್ನು ಅನ್‌ಫಾಲೋ ಮಾಡಲು ಕಾರಣ ಏನು? ಎನ್ನುವ ಚರ್ಚೆ ಆರಂಭವಾಗಿತ್ತು.

ಇತ್ತೀಚೆಗೆ ಸೆಲೆಬ್ರಿಟಿಗಳು ಡಿವೋರ್ಸ್ ಪಡೆದು ಬೇರ್ಪಡುವ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡುತ್ತಿದ್ದಾರೆ. ಇಬ್ಬರ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡುತ್ತಾರೆ. ಆ ಮೂಲಕ ಪರೋಕ್ಷವಾಗಿ ತಮ್ಮ ಡಿವೋರ್ಸ್ ಬಗ್ಗೆ ಸುಳಿವು ಕೊಡುತ್ತಿದ್ದಾರೆ. ಕೊನೆಗೆ ಬಹಿರಂಗವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ದೂರಾಗುತ್ತಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ನಯನ್ ತಮ್ಮ ಪತಿಯನ್ನು ಅನ್ ಫಾಲೋ ಮಾಡಿದ್ದರೆ, ವಿಘ್ನೇಶ್ ಫಾಲೋ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ಇನ್ನು ಇವೆ. ಇವರಿಬ್ಬರು ಬೇರ್ಪಟ್ಟಿದ್ದಾರೆಯೇ? ಆಕಸ್ಮಿಕವಾಗಿ ನಯನ್ ಅನ್‌ಫಾಲೋ ಮಾಡಿದ್ರಾ? ತಾಂತ್ರಿಕ ಸಮಸ್ಯೆಯಿಂದ ಹೀಗಾಯ್ತಾ? ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಕೆಲವರು ಬೇರೆಯಾಗುವ ಸಾಧ್ಯತೆ ಇಲ್ಲ ಎಂದು ಕೂಡ ಹೇಳುತ್ತಿದ್ದಾರೆ.

Did tamil actress Nayanthara unfollowed her husband Vignesh Shivan on Instagram

ನಯನತಾರಾ ಬಹಳ ತಡವಾಗಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದರು. ಮೊದಲ ಪೋಸ್ಟ್ ಆಗಿ ತನ್ನ ಅವಳಿ ಮಕ್ಕಳ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ಇನ್‌ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದರು. ಬಳಿಕ ಲಕ್ಷಾಂತರ ಅಭಿಮಾನಿಗಳು ಆಕೆಯನ್ನು ಫಾಲೋ ಮಾಡಲು ಆರಂಭಿಸಿದ್ದರು. ಸದ್ಯ 78 ಲಕ್ಷ (7.8 ಮಿಲಿಯನ್) ಆಕೆಯನ್ನು ಇನ್‌ಸ್ಟಾದಲ್ಲಿ ಫಾಲೋ ಮಾಡುತ್ತಿದ್ದಾರೆ. ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಬಹಳ ಸಮಯದಿಂದ ಪ್ರೀತಿಸುತ್ತಿದ್ದರು ಮತ್ತು ಜೂನ್ 9, 2022 ರಂದು ವಿವಾಹವಾದರು.

ಅಕ್ಟೋಬರ್ 9, 2022 ದಂಪತಿ ಅವಳಿ ಮಕ್ಕಳನ್ನು ಬಾಡಿಗೆ ತಾಯ್ತನದ ಮೂಲಕ ಪಡೆದರು. ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆ ಆಗುವ ಮುನ್ನ ಸಿಂಬು, ಪ್ರಭುದೇವ ಜೊತೆಗೆ ನಯನತಾರಾ ಹೆಸರು ತಳಕು ಹಾಕಿಕೊಂಡಿತ್ತು. ಇನ್ನು ಮದುವೆ ನಂತರ ಕೂಡ ನಯನ್ ಗ್ಯಾಪ್ ಇಲ್ಲದೇ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಕಳೆದ ವರ್ಷ 'ಜವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಪರಿಚಿತರಾಗಿದ್ದಾರೆ.

ಇರೈವನ್ ಹಾಗೂ ಅನ್ನಪೂರ್ಣಿ ಸಿನಿಮಾಗಳಲ್ಲಿ ನಯನ್ ಕೊನೆಯದಾಗಿ ನಟಿಸಿದ್ದರು. ಸದ್ಯ 'ಟೆಸ್ಟ್' ಹಾಗೂ 'ಮಣ್ಣನ್‌ಗಟ್ಟಿ ಸಿನ್ಸ್ 1960' ಎನ್ನುವ 2 ತಮಿಳು ಸಿನಿಮಾಗಳ ಲೇಡಿ ಸೂಪರ್ ಸ್ಟಾರ್ ಕೈಯಲ್ಲಿವೆ.

More from Filmibeat

English summary
Why Nayanthara Unfollows Vignesh Shivan on Instagram?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X