'ಹೆಬ್ಬುಲಿ' ನಾಯಕಿ ಅಮಲಾ ಪೌಲ್ ಮಾಜಿ ಪತಿಗೆ ಗಂಡು ಮಗು

By Avani Malnad

ಕನ್ನಡದಲ್ಲಿ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಅವರ ಮೊದಲ ವೈವಾಹಿಕ ಬದುಕು ಸಾಕಷ್ಟು ವಿವಾದಗಳೊಂದಿಗೆ ಅಂತ್ಯಗೊಂಡಿತ್ತು. ಇತ್ತೀಚಿನ ದಿನದವರೆಗೂ ಆ ವಿವಾದ ಅವರ ಬೆಂಬಿಟ್ಟಿರಲಿಲ್ಲ. ಅಮಲಾ ಪೌಲ್ ಅವರಿಂದ ದೂರವಾದ ಬಳಿಕ ನಿರ್ದೇಶಕ ಎಎಲ್ ವಿಜಯ್, ಡಾ. ಐಶ್ವರ್ಯಾ ಎಂಬುವವರನ್ನು ಮದುವೆಯಾಗಿದ್ದರು.

Recommended Video

ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

ಕೆಲವು ತಿಂಗಳ ಹಿಂದೆ ನಟಿ ಅಮಲಾ ಪೌಲ್ ಕೂಡ ಗಾಯಕ ಭವ್ನಿಂದರ್ ಸಿಂಗ್ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು. ಈ ನಡುವೆ ಎ.ಎಲ್. ವಿಜಯ್ ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ. ಎರಡನೆಯ ಪತ್ನಿ ಐಶ್ವರ್ಯಾ ಅವರ ಮೂಲಕ ಕುಟುಂಬದಲ್ಲಿ ಹೊಸ ಸದಸ್ಯನ ಆಗಮನದ ಸಂಭ್ರಮ ಮೂಡಿದೆ ಎಂಬ ಖುಷಿಯನ್ನು ವಿಜಯ್ ಸಹೋದರ ಉದಯ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಕಳೆದ ವರ್ಷ ಮದುವೆ

ಕಳೆದ ವರ್ಷ ಮದುವೆ

ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಐಶ್ವರ್ಯಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವ ಐಶ್ವರ್ಯಾ ಜತೆಗೆ ಕಳೆದ ವರ್ಷದ ಜುಲೈ 11ರಂದು ವಿಜಯ್ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದರು.

ಖಾಸಗಿ ಸಮಾರಂಭ

ಖಾಸಗಿ ಸಮಾರಂಭ

ಕುಟುಂಬದ ಸದಸ್ಯರು ಮತ್ತು ಕೆಲವೇ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಿದ್ದರು. ಇದು ಕುಟುಂಬದವರು ನೋಡಿ ಮಾಡಿದ ಮದುವೆ ಎಂದು ವರದಿಯಾಗಿತ್ತು. ಅವರ ಬಯಕೆಯಂತೆ ಒಂದು ವರ್ಷದಲ್ಲಿಯೇ ಮನೆಗೆ ಮುದ್ದಾದ ಮಗು ಆಗಮಿಸಿದೆ

ಮೂರು ವರ್ಷದ ನಂತರ ವಿಚ್ಚೇದನ

ಮೂರು ವರ್ಷದ ನಂತರ ವಿಚ್ಚೇದನ

ಇದಕ್ಕೂ ಮೊದಲು ವಿಜಯ್, ನಟಿ ಅಮಲಾ ಪೌಲ್ ಅವರನ್ನು ವರಿಸಿದ್ದರು. 2011ರಲ್ಲಿ ದೈವ ತಿರುಮಗಳ್ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರೂ ಪ್ರೀತಿಯನ್ನು ಬಿದ್ದಿದ್ದರು. ಮೂರು ವರ್ಷಗಳ ಪ್ರೇಮ ಪಯಣದ ಬಳಿಕ 2014ರಲ್ಲಿ ಇಬ್ಬರೂ ಹಸೆಮಣೆ ಏರಿದ್ದರು.

ಅಮಲಾ ನಿರ್ಧಾರಕ್ಕೆ ಕಾರಣ ಇದು

ಅಮಲಾ ನಿರ್ಧಾರಕ್ಕೆ ಕಾರಣ ಇದು

ಆದರೆ ಇಬ್ಬರ ಸಾಂಸಾರಿಕ ಬದುಕು ಆರಂಭದಲ್ಲಿಯೇ ಬಿರಕು ಕಂಡಿತ್ತು. ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. 2017ರಲ್ಲಿ ಇಬ್ಬರೂ ಪರಸ್ಪರ ಸಹಮತದೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದರು. ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸುವುದಕ್ಕೆ ವಿಜಯ್ ಪೋಷಕರು ಒಪ್ಪಿರಲಿಲ್ಲ. ಮದುವೆಯಾದ ಕೂಡಲೇ ಇಬ್ಬರೂ ಸಂಸಾರ ಆರಂಭಿಸಬೇಕು, ಮಗು ಪಡೆಯಬೇಕು ಎನ್ನುವುದು ಪೋಷಕರ ಒತ್ತಾಯವಾಗಿದ್ದು. ಇದಕ್ಕೆ ಒಪ್ಪದೆ ಅಮಲಾ ಹೊರಬಂದಿದ್ದರು ಎನ್ನಲಾಗಿದೆ.

More from Filmibeat

English summary
Director AL Vijay and his wife Dr Aishwarya blessed with a baby boy. AL Vijay was separated from his first wife Amala Paul 3 years ago.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X