twitter
    For Quick Alerts
    ALLOW NOTIFICATIONS  
    For Daily Alerts

    'ಹೆಬ್ಬುಲಿ' ನಾಯಕಿ ಅಮಲಾ ಪೌಲ್ ಮಾಜಿ ಪತಿಗೆ ಗಂಡು ಮಗು

    By Avani Malnad
    |

    ಕನ್ನಡದಲ್ಲಿ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ನಟಿ ಅಮಲಾ ಪೌಲ್ ಅವರ ಮೊದಲ ವೈವಾಹಿಕ ಬದುಕು ಸಾಕಷ್ಟು ವಿವಾದಗಳೊಂದಿಗೆ ಅಂತ್ಯಗೊಂಡಿತ್ತು. ಇತ್ತೀಚಿನ ದಿನದವರೆಗೂ ಆ ವಿವಾದ ಅವರ ಬೆಂಬಿಟ್ಟಿರಲಿಲ್ಲ. ಅಮಲಾ ಪೌಲ್ ಅವರಿಂದ ದೂರವಾದ ಬಳಿಕ ನಿರ್ದೇಶಕ ಎಎಲ್ ವಿಜಯ್, ಡಾ. ಐಶ್ವರ್ಯಾ ಎಂಬುವವರನ್ನು ಮದುವೆಯಾಗಿದ್ದರು.

    Recommended Video

    ದಕ್ಷಿಣ ಭಾರತದ ಸ್ಟಾರ್ ನಟಿಯ ತಂದೆ ವಿಧಿವಶ | Amala Paul | FilmiBeat Kannada

    ಕೆಲವು ತಿಂಗಳ ಹಿಂದೆ ನಟಿ ಅಮಲಾ ಪೌಲ್ ಕೂಡ ಗಾಯಕ ಭವ್ನಿಂದರ್ ಸಿಂಗ್ ಅವರನ್ನು ಗುಟ್ಟಾಗಿ ಮದುವೆಯಾಗಿದ್ದರು. ಈ ನಡುವೆ ಎ.ಎಲ್. ವಿಜಯ್ ಗಂಡು ಮಗುವಿನ ತಂದೆಯಾದ ಸಂಭ್ರಮದಲ್ಲಿದ್ದಾರೆ. ಎರಡನೆಯ ಪತ್ನಿ ಐಶ್ವರ್ಯಾ ಅವರ ಮೂಲಕ ಕುಟುಂಬದಲ್ಲಿ ಹೊಸ ಸದಸ್ಯನ ಆಗಮನದ ಸಂಭ್ರಮ ಮೂಡಿದೆ ಎಂಬ ಖುಷಿಯನ್ನು ವಿಜಯ್ ಸಹೋದರ ಉದಯ್ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಕಳೆದ ವರ್ಷ ಮದುವೆ

    ಕಳೆದ ವರ್ಷ ಮದುವೆ

    ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಐಶ್ವರ್ಯಾ ಅವರು ಶನಿವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವೈದ್ಯಕೀಯ ವೃತ್ತಿಯಲ್ಲಿರುವ ಐಶ್ವರ್ಯಾ ಜತೆಗೆ ಕಳೆದ ವರ್ಷದ ಜುಲೈ 11ರಂದು ವಿಜಯ್ ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ್ದರು.

    2ನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅಮಲಾ ಪೌಲ್: ಹೇಳಿದ್ದೇನು?2ನೇ ಮದುವೆ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಅಮಲಾ ಪೌಲ್: ಹೇಳಿದ್ದೇನು?

    ಖಾಸಗಿ ಸಮಾರಂಭ

    ಖಾಸಗಿ ಸಮಾರಂಭ

    ಕುಟುಂಬದ ಸದಸ್ಯರು ಮತ್ತು ಕೆಲವೇ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆದ ಸಮಾರಂಭದಲ್ಲಿ ಇಬ್ಬರೂ ಮದುವೆಯಾಗಿದ್ದರು. ಇದು ಕುಟುಂಬದವರು ನೋಡಿ ಮಾಡಿದ ಮದುವೆ ಎಂದು ವರದಿಯಾಗಿತ್ತು. ಅವರ ಬಯಕೆಯಂತೆ ಒಂದು ವರ್ಷದಲ್ಲಿಯೇ ಮನೆಗೆ ಮುದ್ದಾದ ಮಗು ಆಗಮಿಸಿದೆ

    ಮೂರು ವರ್ಷದ ನಂತರ ವಿಚ್ಚೇದನ

    ಮೂರು ವರ್ಷದ ನಂತರ ವಿಚ್ಚೇದನ

    ಇದಕ್ಕೂ ಮೊದಲು ವಿಜಯ್, ನಟಿ ಅಮಲಾ ಪೌಲ್ ಅವರನ್ನು ವರಿಸಿದ್ದರು. 2011ರಲ್ಲಿ ದೈವ ತಿರುಮಗಳ್ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರೂ ಪ್ರೀತಿಯನ್ನು ಬಿದ್ದಿದ್ದರು. ಮೂರು ವರ್ಷಗಳ ಪ್ರೇಮ ಪಯಣದ ಬಳಿಕ 2014ರಲ್ಲಿ ಇಬ್ಬರೂ ಹಸೆಮಣೆ ಏರಿದ್ದರು.

    ಆ ನಟಿಯನ್ನು ಮದುವೆಯಾಗಿ ನನ್ನ ಮಗನ ಬಾಳು ಹಾಳಾಯಿತು: ನಿರ್ಮಾಪಕನ ಅಳಲುಆ ನಟಿಯನ್ನು ಮದುವೆಯಾಗಿ ನನ್ನ ಮಗನ ಬಾಳು ಹಾಳಾಯಿತು: ನಿರ್ಮಾಪಕನ ಅಳಲು

    ಅಮಲಾ ನಿರ್ಧಾರಕ್ಕೆ ಕಾರಣ ಇದು

    ಅಮಲಾ ನಿರ್ಧಾರಕ್ಕೆ ಕಾರಣ ಇದು

    ಆದರೆ ಇಬ್ಬರ ಸಾಂಸಾರಿಕ ಬದುಕು ಆರಂಭದಲ್ಲಿಯೇ ಬಿರಕು ಕಂಡಿತ್ತು. ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದರು. 2017ರಲ್ಲಿ ಇಬ್ಬರೂ ಪರಸ್ಪರ ಸಹಮತದೊಂದಿಗೆ ವಿಚ್ಚೇದನ ಪಡೆದುಕೊಂಡಿದ್ದರು. ಮದುವೆಯ ನಂತರವೂ ಸಿನಿಮಾಗಳಲ್ಲಿ ನಟಿಸುವುದಕ್ಕೆ ವಿಜಯ್ ಪೋಷಕರು ಒಪ್ಪಿರಲಿಲ್ಲ. ಮದುವೆಯಾದ ಕೂಡಲೇ ಇಬ್ಬರೂ ಸಂಸಾರ ಆರಂಭಿಸಬೇಕು, ಮಗು ಪಡೆಯಬೇಕು ಎನ್ನುವುದು ಪೋಷಕರ ಒತ್ತಾಯವಾಗಿದ್ದು. ಇದಕ್ಕೆ ಒಪ್ಪದೆ ಅಮಲಾ ಹೊರಬಂದಿದ್ದರು ಎನ್ನಲಾಗಿದೆ.

    ತಂದೆಯ ಸಾವು, ಅಮ್ಮನ ಸಂಕಟ ನೆನೆದು ಕಣ್ಣೀರಿಟ್ಟ 'ಹೆಬ್ಬುಲಿ' ನಟಿ ಅಮಲಾ ಪೌಲ್ತಂದೆಯ ಸಾವು, ಅಮ್ಮನ ಸಂಕಟ ನೆನೆದು ಕಣ್ಣೀರಿಟ್ಟ 'ಹೆಬ್ಬುಲಿ' ನಟಿ ಅಮಲಾ ಪೌಲ್

    English summary
    Director AL Vijay and his wife Dr Aishwarya blessed with a baby boy. AL Vijay was separated from his first wife Amala Paul 3 years ago.
    Sunday, May 31, 2020, 17:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X