ಯಶ್, ಅಲ್ಲು ಅರ್ಜುನ್ ಜೊತೆ ದಳಪತಿ ವಿಜಯ್ ಹೋಲಿಸಿ ಟ್ರೋಲ್ ಆಗುತ್ತಿರುವ ಅಟ್ಲಿ
ತಮಿಳು ನಿರ್ದೇಶಕ ಅಟ್ಲಿ 'ಜವಾನ್' ಸಿನಿಮಾ ಮಾಡಿ ಬಾಲಿವುಡ್ ಪ್ರವೇಶಿಸಿದ್ದಾರೆ. ಶಾರುಖ್ ಖಾನ್ ನಟನೆಯ ಆಕ್ಷನ್ ಎಂಟರ್‌ಟ್ರೈನರ್ 'ಜವಾನ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿನಿಮಾ 1000 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿತ್ತು.
ಸದ್ಯ ಅಟ್ಲಿ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಭಾರೀ ನಿರೀಕ್ಷೆಯಿದೆ. 1000 ಕೋಟಿ ರೂ. ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕ ಎಂದಮೇಲೆ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಸಹಜ. ತಮಿಳು ನಟರು ಮಾತ್ರವಲ್ಲ ಅಟ್ಲಿ ಜೊತೆ ಕೆಲಸ ಮಾಡಲು ಬಾಲಿವುಡ್ ಸ್ಟಾರ್ಸ್ ಸಹ ಉತ್ಸುಕರಾಗಿದ್ದಾರೆ.

ಡ್ಯಾನ್ಸರ್ ಆಗಿ ಕರಿಯರ್ ಆರಂಭಿಸಿದ ಅಟ್ಲಿ ಬಳಿಕ ಸಹಾಯಕ ನಿರ್ದೇಶಕರಾಗಿ ಗುರ್ತಿಸಿಕೊಂಡರು. ಖ್ಯಾತ ನಿರ್ದೇಶಕ ಶಂಕರ್ ಗರಡಿಯಲ್ಲಿ 5 ವರ್ಷ ಪಳಗಿದ ಬಳಿಕ ಸ್ವತಂತ್ರ ನಿರ್ದೇಶಕರಾಗಿದ್ದರು. 10 ವರ್ಷಗಳ ಹಿಂದೆ ಬಂದ ರಾಜ ರಾಣಿ' ಅಟ್ಲಿ ನಿರ್ದೇಶಿಸಿದ ಮೊದಲ ಸಿನಿಮಾ. ಬಳಿ ದಳಪತಿ ವಿಜಯ್ ಜೊತೆ 'ತೆರಿ'. 'ಮೆರ್ಸಲ್' ಹಾಗೂ 'ಬಿಗಿಲ್' ಸಿನಿಮಾಗಳಲ್ಲಿ ಕೆಲಸ ಮಾಡಿದ್ದರು.
ವಿಜಯ್ ಜೊತೆ ಅಟ್ಲಿ ಮಾಡಿದ 3 ಸಿನಿಮಾಗಳು ಹಿಟ್ ಆಗಿತ್ತು. ಬರೋಬ್ಬರಿ 3 ವರ್ಷಗಳ ಕಾಲ ಶ್ರಮಿಸಿ 'ಜವಾನ್' ಸಿನಿಮಾ ಕಟ್ಟಿಕೊಟ್ಟಿದ್ದರು. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಕಮರ್ಷಿಯಲ್ ಅಂಶಗಳ ಜೊತೆ ಒಂದೊಳ್ಳೆ ಸಂದೇಶ ಹೊತ್ತು ಬಂದಿದ್ದ ಸಿನಿಮಾ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಒಂದಷ್ಟು ಸೌತ್ ಸಿನಿಮಾಗಳ ಛಾಯೆ ಕಂಡರೂ 'ಜವಾನ್' ಬಾಲಿವುಡ್ ಮಂದಿ ಮನಗೆದ್ದಿದ್ದು ಸುಳ್ಳಲ್ಲ.
ಇತ್ತೀಚೆಗೆ ನಿರ್ದೇಶಕ ಅಟ್ಲಿ ABP ವಾಹಿನಿ ಸಮಿಟ್‌ನಲ್ಲಿ ಭಾಗವಹಿಸಿ ಚಿತ್ರರಂಗದ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಹಾಲಿವುಡ್ ಸಿನಿಮಾ ಮಾಡುತ್ತೀನಿ ಎಂದು ಭರವಸೆಯಿಂದ ಹೇಳಿದ್ದಾರೆ. ಬಾಲಿವುಡ್ ಸಿನಿಮಾ ಮಾಡಲು 10 ವರ್ಷ ಸಮಯ ಬೇಕಾಯಿತು. ಅದೇ ರೀತಿ ಹಾಲಿವುಡ್ ಸಿನಿಮಾ ಮಾಡಲು ಇನ್ನೈದು ವರ್ಷ ಬೇಕಾಗಬಹುದು ಎಂದಿದ್ದಾರೆ. ಯುವ ನಿರ್ದೇಶಕನ ಕಾನ್ಫಿಡೆನ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇನ್ನು ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ಯಶ್, ಅಲ್ಲು ಅರ್ಜುನ್ ಹಾಗೂ ದಳಪತಿ ವಿಜಯ್ ಹೆಸರುಗಳನ್ನು ಅಟ್ಲಿ ಪ್ರಸ್ತಾಪಿಸಿದ್ದಾರೆ. 'KGF' ಎಲ್ಲಾ ಕಡೆ ದೊಡ್ಡಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಬರುವವರೆಗೂ ಯಶ್ ಯಾರು ಎಂದು ಹಿಂದಿ ಭಾಷಿಕರಿಗೆ ಗೊತ್ತಿರಲಿಲ್ಲ. 'KGF' ಬಳಿಕ ಯಶ್ ಇಂಡಿಯನ್ ಸೂಪರ್ ಸ್ಟಾರ್ ಆಗಿದ್ದಾರೆ.
ಅದೇ ರೀತಿ 'ಪುಷ್ಪ' ಸಿನಿಮಾ ಮೂಲಕ ಅಲ್ಲು ಅರ್ಜುನ್ ಹಾಗೂ 'ಲಿಯೋ' ಸಿನಿಮಾ ಮಾಡಿ ವಿಜಯ್ ಸರ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ಸ್ ಆಗಿದ್ದಾರೆ ಎಂದು ಅಟ್ಲಿ ಹೇಳಿದ್ದಾರೆ. ಯಶ್ ಹಾಗೂ ಅಲ್ಲು ಅರ್ಜುನ್ ಸರಿ ವಿಜಯ್ ಹೆಸರನ್ನು ಈ ಲಿಸ್ಟ್‌ನಲ್ಲಿ ಸೇರಿಸಿದ್ದಕ್ಕೆ ಈಗ ಅಟ್ಲಿ ಟ್ರೋಲ್ ಆಗುತ್ತಿದ್ದಾರೆ.
ದಳಪತಿ ವಿಜಯ್ ಕಾಲಿವುಡ್‌ನಲ್ಲಿ ದೊಡ್ಡ ಸ್ಟಾರ್ ಇರಬಹುದು. ಆದರೆ ಪ್ಯಾನ್ ಇಂಡಿಯಾ ಸ್ಟಾರ್ ಇನ್ನು ಆಗಿಲ್ಲ. ಅದರಲ್ಲೂ 'ಲಿಯೋ' ಸಿನಿಮಾ ಉತ್ತರ ಭಾರತದಲ್ಲಿ ಗೆಲ್ಲಲೇಯಿಲ್ಲ. ಅದು ಹೇಗೆ ವಿಜಯ್‌ನ ನ್ಯಾಷನಲ್ ಸ್ಟಾರ್ ಲಿಸ್ಟ್‌ನಲ್ಲಿ ಸೇರಿಸಿದೆ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.

ನಿನಗೆ ವಿಜಯ್ ದೊಡ್ಡ ಸ್ಟಾರ್ ಇರಬಹುದು. ನೀನು ಆತನ ಅಭಿಮಾನಿ ಆಗಿರಬಹುದು. ಹಾಗಂತ ಆತನನ್ನು ಪ್ಯಾನ್ ಇಂಡಿಯಾ ಸ್ಟಾರ್ ಎನ್ನುವುದು ಎಷ್ಟು ಸರಿ? ಹಾಗದಾರೆ 'ಲಿಯೋ' ಹಾಗೂ 'KGF' ಎರಡೂ ಸರಿಸಮನಾದ ಸಿನಿಮಾಗಳೇ? ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ವಿಜಯ್ ಬಗ್ಗೆ ಉತ್ತರ ಭಾರತದ ಪ್ರೇಕ್ಷಕರಿಗೆ ಗೊತ್ತೇಯಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











