ನಿರ್ದೇಶಕ ಅಟ್ಲಿ, ಪತ್ನಿ ಬೆಡ್ ರೂಮ್ ಫೋಟೊ ವೈರಲ್: ಅಭಿಮಾನಿಗಳಲ್ಲಿ ಬೇಸರ!
ತಮಿಳು ಸಿನಿಮಾರಂಗದಲ್ಲಿ ಸ್ಟಾರ್ ದಂಪತಿಗಳಂತೆ ಮಿಂಚುತ್ತಾ ಇರುತ್ತಾರೆ ನಿರ್ದೇಶಕ ಅಟ್ಲಿ ಮತ್ತು ಪ್ರಿಯಾ. ಇವರ ಜೋಡಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ದಂಪತಿ ಏನೇ ಮಾಡಿದ್ರು ಕೂಡ ಅದು ವೈರ್ ಲಿಸ್ಟ್ ಸೇರಿ ಬಿಡುತ್ತದೆ. ಇವರ ಮದುವೆ ಆಗುವ ಸಂದರ್ಭದಲ್ಲೂ ಹೆಚ್ಚು ಸುದ್ದಿ ಆಗಿದ್ದರು. ಅದಕ್ಕೆ ಕಾರನ ಅವರಿಬ್ಬರ ಬಣ್ಣ.
Recommended Video
ಅಲ್ಟಿ ಸದಾ ತಮ್ಮ ಪತ್ನಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾ ಇರುತ್ತಾರೆ. ಪ್ರಿಯಾ ಅವರು ಕೂಡಾ ಪತಿಯೊಂದಿಗೆ ಕಳೆಯುವ ಸಮಯದ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಹಾಗಾಗಿ ಪ್ರಿಯಾ ಅವರಿಗೂ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಅಭಿಮಾನಿಗಳು ಇದ್ದಾರೆ.
ಈಗ ಅವರ ಅಭಿಮಾನಿಗಳಿಗೆ ಈ ಜೋಡಿ ಬೇಸರ ಮೂಡಿಸಿದೆ. ಇವರ ನಡೆಗೆ ಅವರನ್ನು ಫಾಲೋ ಮಾಡುವವರು ಬೇಸರ ವ್ಯಕ್ತ ಪಡಿಸಿದ್ದಾರೆ. ಅಷ್ಟು ಅವರ ಬೇಸರಕ್ಕೆ ಕಾರಣ ಏನು? ಪ್ರಿಯಾ ಹಂಚಿಕೊಂಡ ಆ ಫೋಟೋದಲ್ಲಿ ಏನಿದೆ ಎನ್ನುವುದನ್ನು ಮುಂದೆ ಓದಿ..
ಬೆಡ್ ರೋಮ್ ಫೋಟೊ ಹಂಚಿಕೊಂಡ ಪ್ರಿಯಾ!
ಅಟ್ಲಿ ಪತ್ನಿ ಪ್ರಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತಿಯೊಂದಿಗಿನ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೊದಲ್ಲಿ ಅಟ್ಲಿ ಪ್ರಿಯಾ ಅವರ ಕಾಲಬಳಿ ಮಲಗಿದ್ದಾರೆ. ಅಟ್ಲಿ ಅವರ ಕಾಲ ಬಳಿ ಅವರ ನಾಯಿ ಮರಿ ಮಲಗಿದೆ. ಇಷ್ಟು ಬಿಟ್ಟರೆ ಈ ಫೋಟೋದಲ್ಲಿ ಬೇರೆ ಏನು ಇಲ್ಲ. ಫೋಟೋ ಹಂಚಿಕೊಂಡು "ಇದು ನನ್ನ ಅತ್ಯಂತ ಪುಟ್ಟ ಪ್ರಪಂಚ" ಎಂದು ಪ್ರಿಯಾ ಬರೆದುಕೊಂಡಿದ್ದಾರೆ. ಆದರೆ ಈ ಫೋಟೊಗೆ ಕಮೆಂಟ್ ಮಾಡದಂತೆ ಬ್ಲಾಕ್ ಮಾಡಲಾಗಿದೆ. ಹಾಗಾಗಿ ಬೇರೆ ಕಡೆಗೆ ಈ ಫೊಟೋ ಶೇರ್ ಅದಾಗ ಅವರ ಅಭಿಮಾನಿಗಳು ಪ್ರಿಯಾ ಅವರು ಕಮೆಂಟ್ ಬ್ಲಾಕ್ ಮಾಡಿದ್ದಕ್ಕೆ ಬೇಸರ ಹೊರ ಹಾಕಿದ್ದಾರೆ.

8 ವರ್ಷದ ಪ್ರೀತಿಸಿ ಮದುವೆ ಆದ ಜೋಡಿ!
ಅಟ್ಲಿ ಮತ್ತು ಪ್ರಿಯಾ 2014 ರಲ್ಲಿ ವೈವಾಹಿಕ ಬಾಳಿಗೆ ಕಾಲಿಟ್ಟಿದ್ದಾರೆ. ಮದುವೆಗೂ ಮುನ್ನ ಎಂಟು ವರ್ಷಗಳ ಕಾಲ ಪರಸ್ಪರ ಪ್ರೀತಿಯಲ್ಲಿ ಇತ್ತು ಈ ಜೋಡಿ. ಮದುವೆಯ ಬಳಿಕ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಜನರಿಗೆ ಹತ್ತಿರ ಅಗಿದ್ದಾರೆ. ಇವರ ಹೊಸ, ಹೊಸ ಪೋಸ್ಟ್‌ಗಳಿಗಾಗಿ ಅಭಿಮಾನಿಗಳು ಸದಾ ಕಾಯುತ್ತಾ ಇರುತ್ತಾರೆ.

ಶಾರುಕ್‌ಗೆ ನಿರ್ದೇಶನ ಮಾಡಲಿರುವ ಅಟ್ಲಿ!
ಈ ನಡುವೆ ಅಟ್ಲಿ ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ಮುಂಬರುವ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಡೇಟ್ ಸಮಸ್ಯೆ ಇಂದಾಗಿ ನಯನತಾರ ಈ ಚಿತ್ರದಿಂದ ಹೊರ ಬಂದಿದ್ದಾರೆ ಎನ್ನಲಾಗುದೆ. ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ಹಿಂದಿಯ 'ಪಠಾಣ್' ಚಿತ್ರದ ಕೆಲವು ಭಾಗಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ ಕೂಡಲೇ ಅಟ್ಲಿ ನಿರ್ದೇಶನದ ಸಿನಿಮಾ ಆರಂಭಿಸಿದ್ದಾರೆ.

ಹಿಟ್ ನಿರ್ದೇಶಕ ಅಟ್ಲಿ, ಬಾಲಿವುಡ್ ಜೊತೆಗೆ ತೆಲುಗು ಚಿತ್ರ!
ನಿರ್ದೇಶಕ ಅಟ್ಲಿ ಒಬ್ಬ ಯಶಸ್ವಿ ನಿರ್ದೇಶಕ. ತಮಿಳಿನಲ್ಲಿ ಇಲ್ಲಿ ತನಕ ನಾಲ್ಕು ಸಿನಿಮಾಗಳನ್ನು ಅಟ್ಲಿ ನಿರ್ದೇಶನ ಮಾಡಿದ್ದಾರೆ. ವಿಶೇಷ ಅಂದರೆ ಆ ನಾಲ್ಕು ಚಿತ್ರಗಳು ಕೂಡ ಹಿಟ್ ಲಿಸ್ಟ್ ಸೇರಿವೆ. ರಾಜಾ-ರಾಣಿ ಚಿತ್ರದ ಮೂಲಕ ನಿರ್ದೇಶಕನಾಗಿ ಅಟ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನಂತರ ತೆರಿ, ಮೆರ್ಸಲ್, ಬಿಗಿಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಗಳಲ್ಲಿ ಕೊನೆಯ ಮೂರೂ ಚಿತ್ರಗಳನ್ನು ತಮಿಳು ನಟ ವಿಜಯ್‌ಗಾಗಿಯೇ ಮಾಡಿದ್ದಾರೆ. ಈಗ ವಿಜಯ್ ನಿರ್ದೇಶಕ ಅಲ್ಲು ಅರ್ಜುನ್‌ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.


Click it and Unblock the Notifications











