For Quick Alerts
  ALLOW NOTIFICATIONS  
  For Daily Alerts

  ಬಿಗ್‌ಬಿ ಪ್ರೇಯಸಿ ನಟಿಸಬೇಕಿದ್ದ ಪಾತ್ರದಲ್ಲಿ ಸೊಸೆ ನಟಿಸುವಂತಾಗಿದ್ದು ವಿಪರ್ಯಾಸ!

  |

  ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ನಟನೆಯ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಚಿತ್ರದಲ್ಲಿ ಐಶ್ ಡಬಲ್ ರೋಲ್ ಪ್ಲೇ ಮಾಡಿದ್ದಾರೆ. ಪಳುವೂರ್ ರಾಣಿ ನಂದಿನಿ ಪಾತ್ರಕ್ಕೆ ಚಿತ್ರದಲ್ಲಿ ಬಹಳ ಮಹತ್ವ ಇದೆ. ಆಕೆಯ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ.

  ಮಣಿರತ್ನಂ ನಿರ್ದೇಶನದ ಬಹುಕೋಟಿ ವೆಚ್ಚದ ಐತಿಹಾಸಿಕ ದೃಶ್ಯಕಾವ್ಯ 'ಪೊನ್ನಿಯಿನ್‌ ಸೆಲ್ವನ್'. ಸೆಪ್ಟೆಂಬರ್ 30ಕ್ಕೆ ವಿಶ್ವದಾದ್ಯಂತ ಈ ಸಿನಿಮಾ ತೆರೆಗಪ್ಪಳಿಸಲಿದೆ. ಕಾರ್ತಿ, ಜಯಂ ರವಿ, ಚಿಯಾನ್ ವಿಕ್ರಂ, ಐಶ್ವರ್ಯಾ ರೈ, ತ್ರಿಶಾ, ಪ್ರಕಾಶ್ ರಾಜ್, ಶರತ್‌ಕುಮಾರ್‌ರಂತಹ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. 400 ಕೋಟಿ ಬಜೆಟ್‌ನಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ.

  ಜಾತಕ ದೋಷ, ಮರದೊಂದಿಗೆ ಐಶ್ವರ್ಯಾ ರೈ ಮೊದಲ ಮದುವೆ: ವಿದೇಶದಲ್ಲಿ ಮಾಜಿ ವಿಶ್ವಸುಂದರಿ ಉತ್ತರ!ಜಾತಕ ದೋಷ, ಮರದೊಂದಿಗೆ ಐಶ್ವರ್ಯಾ ರೈ ಮೊದಲ ಮದುವೆ: ವಿದೇಶದಲ್ಲಿ ಮಾಜಿ ವಿಶ್ವಸುಂದರಿ ಉತ್ತರ!

  ಸದ್ಯ ಚಿತ್ರತಂಡ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದೆ. ಇಂಟ್ರೆಸ್ಟಿಂಗ್ ಅಂದರೆ ಕಲ್ಕಿ ಕೃಷ್ಣಮೂರ್ತಿ ಬರೆದ 'ಪೊನ್ನಿಯಿನ್‌ ಸೆಲ್ವನ್' ಕಾದಂಬರಿ ಆಧರಿಸಿ ದಶಕಗಳ ಹಿಂದೆಯೇ ಸಿನಿಮಾ ಮಾಡುವ ಪ್ರಯತ್ನಗಳು ನಡೆದಿತ್ತು. ಶಿವಾಜಿ, ಎಂಜಿಆರ್‌ರಂತಹ ಕಲಾವಿದರು ನಟಿಸಬೇಕಿತ್ತು. ಆ ನಂತರ ಕಮಲ್ ಹಾಸನ್ ಈ ಸಿನಿಮಾ ಮಾಡುವ ಕನಸ್ಸು ಕಂಡಿದ್ದರು. ರಜಿನಿಕಾಂತ್ ಕೂಡ ಈ ಸಿನಿಮಾ ಮಾಡಲು ಬಹಳ ಆಸೆ ಪಟ್ಟಿದ್ದರಂತೆ. ಈ ವಿಚಾರವನ್ನು ಇತ್ತೀಚೆಗೆ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಸ್ವತಃ ತಲೈವಾ ಹೇಳಿಕೊಂಡಿದ್ದರು.

  "ನಾನು 'ಪೊನ್ನಿಯಿನ್ ಸೆಲ್ವನ್' ಕಥೆ ಓದುತ್ತಾ ಓದುತ್ತಾ ಒಂದೊಂದು ಪಾತ್ರದಲ್ಲಿ ಒಬ್ಬೊಬ್ಬರನ್ನು ಊಹಿಸಿಕೊಳ್ಳಲು ಶುರು ಮಾಡಿದ್ದೆ. ನನ್ನನ್ನು ವಂದಿಯದೇವನ್ ಪಾತ್ರದಲ್ಲಿ. ಅರುಲ್‌ಮುಳಿ ವರ್ಮನ್ ಅಂದಾಕ್ಷಣ ಕಮಲ್, ಆದಿತ್ಯಾ ಕರಿಕಾಲನ್ ಅಂದರೆ ವಿಜಯ್‌ಕಾಂತ್, ನಂದಿನಿ ಅಂದರೆ ರೇಖಾ, ಕುಂದವೈ ಪಾತ್ರದಲ್ಲಿ ಶ್ರೀದೇವಿ, ಪೆರಿಯ ಪಳುವೆಟ್ಟರೈಯಾರ್ ಪಾತ್ರದಲ್ಲಿ ಸತ್ಯರಾಜ್‌ನ ಕಲ್ಪನೆ ಮಾಡಿಕೊಂಡಿದ್ದೆ" ಎಂದು ರಜಿನಿಕಾಂತ್ ವಿವರಿಸಿದ್ದರು.

  ಕಮಲ್ ಹಾಸನ್‌ ಕೂಡ ನಂದಿನಿ ಪಾತ್ರದಲ್ಲಿ ರೇಖಾ ನಟಿಸಬೇಕು ಎಂದುಕೊಂಡಿದ್ದರಂತೆ. ಬಿಗ್‌ಬಿ ಅಮಿತಾಭ್‌ ಬಚ್ಚನ್ ಹಾಗೂ ರೇಖಾ ಲವ್ ಸ್ಟೋರಿ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದು ಬೇಕಾಗಿಲ್ಲ. ಕೆಲ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಸೂಪರ್ ಸಕ್ಸಸ್ ಕಂಡಿದ್ದ ಜೋಡಿ ಪ್ರೇಮ ಪಾಶಕ್ಕೆ ಸಿಲುಕಿತ್ತು. ಇಬ್ಬರು ಮದುವೆ ಆಗುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಇಬ್ಬರೂ ದೂರಾಗಿದ್ದರು. ಅಂದು 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ನಂದಿನಿ ಪಾತ್ರವನ್ನು ರೇಖಾ ಮಾಡಿದರೆ ಚೆನ್ನಾಗಿರುತ್ತೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಆ ಪಾತ್ರವನ್ನು ಬಿಗ್‌ಬಿ ಸೊಸೆ ಐಶ್ವರ್ಯ ರೈ ಮಾಡಿದ್ದಾರೆ.

  Director Mani Ratnam wanted Rekha to play Nandini in Ponniyin Selvan Movie

  ಸ್ವತಃ ಮಣಿರತ್ನಂ 90 ದಶಕದಲ್ಲಿ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಮಾಡುವ ಕನಸು ಕಂಡಿದ್ದರು. ಆಗಲೂ ರಾಣಿ ನಂದಿನಿ ಪಾತ್ರವನ್ನು ರೇಖಾ ಮಾಡಿದರೆ ಚೆನ್ನಾಗಿರುತ್ತೆ ಎಂದುಕೊಂಡಿದ್ದರಂತೆ. ಇದನ್ನು ಕೇಳಿದವರು ಅಮಿತಾಭ್ ಗರ್ಲ್‌ ಫ್ರೆಂಡ್ ಮಾಡಬೇಕಿದ್ದ ಪಾತ್ರವನ್ನು ಸೊಸೆ ಮಾಡಿದಂತಾಯ್ತು ಬಿಡಿ ಎನ್ನುತ್ತಿದ್ದಾರೆ. 1000 ವರ್ಷಗಳ ಹಿಂದಿನ ಚೋಳ ರಾಜರ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗ್ತಿದೆ. ನಿಜವಾದ ಪಾತ್ರಗಳ ಜೊತೆಗೆ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿಸಿ ಬಹಳ ರೋಚಕವಾಗಿ ಈ ಕಾಸ್ಟ್ಯೂಮ್‌ ಡ್ರಾಮಾ ಕಟ್ಟಿಕೊಡಲಾಗಿದೆ.

  English summary
  Director Mani Ratnam wanted Rekha to play Queen Nandini in Ponniyin Selvan. Know More.
  Tuesday, September 20, 2022, 15:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X