'ಜೈಲರ್- 2 ಫಿಕ್ಸ್? ಡ್ರೀಮ್ ಪ್ರಾಜೆಕ್ಟ್ ಬಗ್ಗೆ ನೆಲ್ಸನ್ ಏನಂದ್ರು? ಮುಂದಿನ ಸಿನಿಮಾಗಳ ಲಿಸ್ಟ್

'ಜೈಲರ್‌' ಸಿನಿಮಾವನ್ನು ಗೆಲ್ಲಿಸಿ ನಿರ್ದೇಶಕ ನೆಲ್ಸನ್‌ ರಾತ್ರೋರಾತ್ರಿ ಸ್ಟಾರ್ ಡೈರೆಕ್ಟರ್ ಪಟ್ಟಕ್ಕೇರಿಬಿಟ್ಟಿದ್ದಾರೆ. ಇದಕ್ಕೂ ಮುನ್ನ ನೆಲ್ಸನ್ ನಿರ್ದೇಶನದ ಸಿನಿಮಾಗಳು ಗಮನ ಸೆಳೆದಿದ್ದವು. ಆದರೆ 'ಬೀಸ್ಟ್' ಸಿನಿಮಾ ಮಾಡಿ ಮುಗ್ಗರಿಸಿದ್ದರು. ಸೋಲಿನ ಬೆನ್ನಲ್ಲೇ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಿರ್ದೇಶನದ ಅವಕಾಶ ಸಿಕ್ಕಿತ್ತು. ಅದನ್ನು ಸದುಪಯೋಗಪಡಿಸಿಕೊಂಡಿದ್ದಾರೆ.

ಸನ್‌ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ಜೈಲರ್‌' ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನರ್ ಸಿನಿಮಾ. ರಜನಿಕಾಂತ್ ಇಮೇಜ್‌ಗೆ ತಕ್ಕಂತೆ ಸಿನಿಮಾ ಮಾಡಿ ನೆಲ್ಸನ್ ಗೆದ್ದಿದ್ದಾರೆ. 4 ದಿನಕ್ಕೆ ಸಿನಿಮಾ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಚಿತ್ರದ ಪ್ರತಿ ಪಾತ್ರದ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ. ಶಿವರಾಜ್‌ಕುಮಾರ್ ಸಣ್ಣ ಪಾತ್ರದಲ್ಲಿ ನಟಿಸಿದ್ದು ಅದಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ನಿರ್ದೇಶಕ ನೆಲ್ಸನ್ ಸಾಲು ಸಾಲು ಸಂದರ್ಶನಗಳಲ್ಲಿ ಭಾಗವಹಿಸಿ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

jailer-2-nelson-dream-project

ಕಾಮಿಡಿ ಜೊತೆ ಜೊತೆಗೆ ವಿಭಿನ್ನ ಕಥೆಗಳನ್ನು ಹೇಳಿ ನಿರ್ದೇಶಕರು ಗಮನ ಸೆಳೆಯುತ್ತಿದ್ದಾರೆ. ಡಾರ್ಕ್ ಕಾಮಿಡಿ ಸನ್ನಿವೇಶಗಳನ್ನು ಕಟ್ಟುವುದರಲ್ಲಿ ನೆಲ್ಸನ್ ಸಿದ್ಧಹಸ್ತರು. 'ಜೈಲರ್' ಚಿತ್ರದಲ್ಲೂ ಅದು ಮತ್ತೊಮ್ಮೆ ಸಾಬೀತಾಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ತಲೈವಾಗೆ ದೊಡ್ಡ ಬ್ರೇಕ್ ಸಿಕ್ಕಿದೆ. 'ಕೊಲಮಾವು ಕೋಕಿಲ', 'ಡಾಕ್ಟರ್', 'ಬೀಸ್ಟ್' ಬಳಿಕ ಜೈಲರ್ ಕಥೆ ಹೇಳಿ ನೆಲ್ಸನ್ ಸಕ್ಸಸ್ ಕಂಡಿದ್ದಾರೆ. ಸೆನ್ಸೇಷನಲ್ ನಿರ್ದೇಶಕನ ಮುಂದಿನ ಸಿನಿಮಾಗಳ ಬಗ್ಗೆ ಈಗ ಭಾರೀ ನಿರೀಕ್ಷೆ ಮೂಡಿದೆ.

ಅಪ್‌ಕಮ್ಮಿಂಗ್ ಸಿನಿಮಾಗಳ ಬಗ್ಗೆ ಮಾತನಾಡುತ್ತಾ ನೆಲ್ಸನ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್ ಕೊಟ್ಟಿದ್ದಾರೆ. ಈ ವಿಚಾರವನ್ನು ಬಾಕ್ಸಾಫೀಸ್ ವಿಶ್ಲೇಷಕ ಮನೋಬಲ ಟ್ವೀಟ್ ಮಾಡಿ ತಿಳಿಸಿದ್ದಾರೆ. "ಜೈಲರ್- 2' ಸಿನಿಮಾ ಕೂಡ ಇರಲಿದೆ. ಇದಕ್ಕಾಗಿ ಪ್ಲ್ಯಾನ್ ಮಾಡುತ್ತಿದ್ದೇನೆ. ನಯನತಾರಾ ಜೊತೆಗಿನ 'ಕೊಲಮಾವು ಕೋಕಿಲ', ಶಿವ ಕಾರ್ತಿಕೇಯ ಜೊತೆ 'ಡಾಕ್ಟರ್' ಮತ್ತು ವಿಜಯ್ ದಳಪತಿ ಜೊತೆ 'ಬೀಸ್ಟ್' ಚಿತ್ರಗಳ ಮುಂದುವರೆದ ಭಾಗವನ್ನು ತೆರೆಗೆ ತರುವ ಆಲೋಚನೆ ಇದೆ" ಎಂದಿದ್ದಾರೆ. ಇದೇ ವೇಳೆ ನೆಲ್ಸನ್ ತಮ್ಮ ಡ್ರೀಮ್ ಪ್ರಾಜೆಕ್ಟ್ ಬಗ್ಗೆಯೂ ಮಾತನಾಡಿದ್ದಾರೆ.

jailer-2-nelson-dream-project

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ದಳಪತಿ ವಿಜಯ್ ಇಬ್ಬರನ್ನು ಒಂದೇ ಚಿತ್ರದಲ್ಲಿ ನಿರ್ದೇಶನ ಮಾಡುವ ಕನಸಿದೆ ಎಂದು ನೆಲ್ಸನ್ ಹೇಳಿದ್ದಾರೆ. ಕಾಲಿವುಡ್‌ನ ಇಬ್ಬರು ಟಾಪ್ ನಟರ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿರುವ ನೆಲ್ಸನ್ ಇಬ್ಬರನ್ನು ಸೇರಿಸಿ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಸದ್ಯಕ್ಕೆ ನಿರ್ದೇಶಕರು ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ಜೈಲರ್' ಸಕ್ಸಸ್ ಸಂಭ್ರಮದಲ್ಲಿದ್ದಾರೆ. ಮುಂದಿನ ಸಿನಿಮಾ ಬಗೆಗಿನ ಪ್ರಶ್ನೆಗೆ ಇನ್ನು ಯಾವುದು ಕಥೆ ಫೈನಲ್ ಆಗಿಲ್ಲ. ಮುಂದೆ ಯೋಚಿಸಬೇಕು ಎಂದಿದ್ದಾರೆ.

ಉಳಗ ನಾಯಗನ್ ಕಮಲ್ ಹಾಸನ್ ಸಹ ನೆಲ್ಸನ್ ಹಾಗೂ ರಜನಿಕಾಂತ್‌ಗೆ ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ ಎನ್ನಲಾಗ್ತಿದೆ. ಆಕ್ಷನ್ ಎಂಟರ್‌ಟೈನರ್ 'ಜೈಲರ್' ಸಿನಿಮಾ ಗೆಲುವಿನ ನಾಗಾಲೋಟ ಮುಂದುವರೆದಿದೆ. ಇನ್ನೊಂದು ವಾರ ಕ್ರೇಜ್ ಇದೇ ರೀತಿ ಇದ್ದರೆ ಸಿನಿಮಾ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನಲಾಗ್ತಿದೆ.

ನಿಷ್ಠಾವಂತ 'ಜೈಲರ್' ಮತ್ತು ಆತನ ಕುಟುಂಬದ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರಕ್ಕೆ ಹಾಲಿವುಡ್‌ನ ಸಿನಿಮಾಗಳಿಂದ ಸ್ಫೂರ್ತಿ ಪಡೆದಿಲ್ಲ. ಇಂತಹ ಕತೆಗಳು ನಮ್ಮಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ಬಂದಿದೆ. 70 ದಶಕದ 'ತಂಗ ಪದಕಂ' ಚಿತ್ರದ ಕಥೆ ಕೂಡ ಇದೇ ರೀತಿ ಇರುತ್ತದೆ ಎಂದು ನೆಲ್ಸನ್ ಇತ್ತೀಚೆಗೆ ಹೇಳಿದ್ದರು. ಅಂದಹಾಗೆ 'ತಂಗ ಪದಕಂ' ಸಿನಿಮಾದಿಂದ ಪ್ರೇರಣೆಗೊಂಡು ಕನ್ನಡದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ 'ಕದಂಬ' ಸಿನಿಮಾ ಮೂಡಿ ಬಂದಿತ್ತು.

More from Filmibeat

English summary
Director Nelson on Jailer-2 and Rajinikanth- Vijay multi starrer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X