For Quick Alerts
  ALLOW NOTIFICATIONS  
  For Daily Alerts

  ನಿರ್ಮಾಪಕರ ಖರ್ಚು ಹೆಚ್ಚಿಸುತ್ತಿರುವ ಪೂಜಾ ಹೆಗ್ಡೆ: ಸಿಟ್ಟಾದ ನಿರ್ದೇಶಕ

  |

  ನಟಿ ಪೂಜಾ ಹೆಗ್ಡೆ ದಕ್ಷಿಣ ಚಿತ್ರರಂಗ ಹಾಗೂ ಬಾಲಿವುಡ್ ಎರಡರಲ್ಲೂ ಬಹಳ ಬ್ಯುಸಿಯಾಗಿರುವ ನಟಿ. ಸಾಲು-ಸಾಲು ಹಿಟ್ ನೀಡುತ್ತಿರುವ ಪೂಜಾ ಹೆಗ್ಡೆಗೆ ಬೇಡಿಕೆ ಹೆಚ್ಚುತ್ತಲೇ ಇದೆ.

  ಪ್ರಭಾಸ್, ಅಲ್ಲು ಅರ್ಜುನ್, ಜೂ ಎನ್‌ಟಿಆರ್, ಮಹೇಶ್ ಬಾಬು ಅಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸಿರುವ ಪೂಜಾ ಹೆಗ್ಡೆ ಇದೀಗ ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್. ರಣ್ವೀರ್ ಸಿಂಗ್ ಜೊತೆ ನಟಿಸುತ್ತಿದ್ದಾರೆ.

  ಸಾಲು-ಸಾಲು ಹಿಟ್ ಸಿನಿಮಾಗಳನ್ನು ನೀಡಿರುವ ಪೂಜಾ ಹೆಗ್ಡೆ ಸಹಜವಾಗಿಯೇ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ನಟಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿರುವುದು ಹಲವರ ಕಣ್ಣು ಕೆಂಪಗೆ ಮಾಡಿದೆ. ಪೂಜಾ ಹೆಗ್ಡೆ ಅನವಶ್ಯಕವಾಗಿ ನಿರ್ಮಾಪಕರಿಗೆ ಖರ್ಚು ಹೆಚ್ಚು ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಅದರಲ್ಲೂ ಶಾಸಕಿ ರೋಜಾ ಪತಿ ಪೂಜಾ ಹೆಗ್ಡೆ ವಿರುದ್ಧ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ.

  ಶಾಸಕಿ ರೋಜಾ ಪತಿ ತಮಿಳು ಸಿನಿಮಾ ನಿರ್ದೇಶಕ ಆರ್‌.ಕೆ.ಸೆಲ್ವಮಣಿ ಪೂಜಾ ಹೆಗ್ಡೆ ವಿರುದ್ಧ ಕಿಡಿ ಕಾರಿದ್ದಾರೆ. ಪೂಜಾ ಹೆಗ್ಡೆ ಅನವಶ್ಯಕವಾಗಿ ನಿರ್ಮಾಪಕ ಖರ್ಚು ಹೆಚ್ಚಳ ಮಾಡುತ್ತಿದ್ದಾರೆ ಎಂದಿದ್ದಾರೆ. ಮುಂಚೆ ಒಬ್ಬ ಸಿಬ್ಬಂದಿಯನ್ನು ಸೆಟ್‌ಗೆ ಕರೆತರುತ್ತಿದ್ದ ಪೂಜಾ ಸ್ಟಾರ್ ಆದ ಬಳಿಕ 12 ಮಂದಿ ಸಿಬ್ಬಂದಿಯನ್ನು ಸೆಟ್‌ ಕರೆತರುತ್ತಿದ್ದಾರೆ. 12 ಮಂದಿ ವೈಯಕ್ತಿಕ ಸಿಬ್ಬಂದಿಯನ್ನು ಸೆಟ್‌ಗೆ ಕರೆದುಕೊಂಡು ಬರುವ ಅವಶ್ಯಕತೆ ಏನು? ಇದರಿಂದಾಗಿ ಪ್ರೊಡಕ್ಷನ್ ವೆಚ್ಚ ಹೆಚ್ಚಾಗುತ್ತಿದೆ'' ಎಂದು ಆರೋಪಿಸಿದ್ದಾರೆ.

  ಸ್ಟಾರ್ ಆದ ಕೂಡಲೇ ಸಂಭಾವನೆ ಏರಿಸಿಕೊಂಡಿದ್ದಾರೆ: ಸೆಲ್ವಮಣಿ

  ಸ್ಟಾರ್ ಆದ ಕೂಡಲೇ ಸಂಭಾವನೆ ಏರಿಸಿಕೊಂಡಿದ್ದಾರೆ: ಸೆಲ್ವಮಣಿ

  ಪೂಜಾ ಹೆಗ್ಡೆ ಸಂಭಾವನೆ ಹೆಚ್ಚಿಸಿಕೊಂಡಿರುವ ಬಗ್ಗೆಯೂ ತಕರಾರು ಎತ್ತಿದ್ದಾರೆ ಆರ್‌.ಕೆ.ಸೆಲ್ವಮಣಿ, ''ಸ್ಟಾರ್ ಆದ ಕೂಡಲೇ ಸಂಭಾವನೆ ಏರಿಸಿಕೊಂಡು ಸಿನಿಮಾ ನಿರ್ಮಾಪಕರಿಗೆ ಕಷ್ಟವಾಗುವಂತೆ ಪೂಜಾ ಹೆಗ್ಡೆ ಮಾಡಿದ್ದಾರೆ'' ಎಂದು ನಿರ್ದೇಶಕ ಆರ್‌.ಕೆ.ಸೆಲ್ವಮಣಿ ಆರೋಪ ಮಾಡಿದ್ದಾರೆ. ವಿಶೇಷವೆಂದರೆ ಪೂಜಾ ಹೆಗ್ಡೆ ನಟಿಸಿರುವ ಯಾವುದೇ ಸಿನಿಮಾವನ್ನು ಸೆಲ್ವಮಣಿ ನಿರ್ದೇಶಿಸಿಲ್ಲ, ನಿರ್ಮಿಸಿಲ್ಲ ಆದರೂ ಆರೋಪಗಳನ್ನು ಸೆಲ್ವಮಣಿ ಮಾಡಿದ್ದಾರೆ.

  ನಟಿಯರ ಸಂಭಾವನೆ ವಿಚಾರ ಬಹಳ ಚರ್ಚೆ

  ನಟಿಯರ ಸಂಭಾವನೆ ವಿಚಾರ ಬಹಳ ಚರ್ಚೆ

  ನಟಿಯರ ಸಂಭಾವನೆ ಏರಿಕೆ ವಿಚಾರ ಬಹಳವೇ ಸದ್ದಾಗುತ್ತಿದೆ. ನಟಿ ಕರೀನಾ ಕಪೂರ್, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲು 12 ಕೋಟಿ ಸಂಭಾವನೆ ಕೇಳಿದರು ಎಂಬುದು ದೊಡ್ಡ ಸುದ್ದಿಯಾಗಿತ್ತು. ಈ ಸಂದರ್ಭದಲ್ಲಿ ಹಲವರು ಕರೀನಾ ಬೆಂಬಲಕ್ಕೆ ಬಂದು, ನಟ ಸಂಭಾವನೆ ಹೆಚ್ಚಿಸಿಕೊಂಡರೆ ಆತನ ಮಾರುಕಟ್ಟೆ ಹೆಚ್ಚಿದೆ ಎನ್ನುತ್ತಾರೆ, ನಟಿ ಸಂಭಾವನೆ ಹೆಚ್ಚಿಸಿಕೊಂಡರೆ ಆಕೆ ಬಹಳ 'ಡಿಮ್ಯಾಂಡಿಂಗ್' ಎನ್ನುತ್ತಾರೆ ಎಂದು ನಟಿ ತಾಪ್ಸಿ ಪನ್ನು ಹೇಳಿದ್ದರು. ನಟಿ ಪೂಜಾ ಹೆಗ್ಡೆ ಸಹ ಕರೀನಾ ಕಪೂರ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಪೂಜಾ ಹೆಗ್ಡೆ ವಿರುದ್ಧವೇ ಟೀಕೆಗಳು ಕೇಳಿಬರುತ್ತಿವೆ.

  ಸಂಭಾವನೆ ಏರಿಸಿಕೊಂಡಿರುವ ನಟಿ

  ಸಂಭಾವನೆ ಏರಿಸಿಕೊಂಡಿರುವ ನಟಿ

  'ಅಲಾ ವೈಕುಂಟಪುರಂಲೊ' ಸಿನಿಮಾದ ಬಳಿಕ ನಟಿ ಪೂಜಾ ಹೆಗ್ಡೆ ತಮ್ಮ ಸಂಭಾವನೆ ಏರಿಸಿಕೊಂಡಿದ್ದಾರೆ. ಪ್ರಭಾಸ್ ಜೊತೆ ನಟಿಸುತ್ತಿರುವ 'ರಾಧೆ' ಸಿನಿಮಾಕ್ಕೆ ಬರೋಬ್ಬರಿ 3 ಕೋಟಿ ಸಂಭಾವನೆಯನ್ನು ಪೂಜಾ ಹೆಗ್ಡೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಪೂಜಾ ಹೆಗ್ಡೆಯ ಸಂಭಾವನೆ 1 ಕೋಟಿ ಪಡೆಯುತ್ತಿದ್ದರು. ನಟಿ ಅನುಷ್ಕಾ ಶೆಟ್ಟಿ ನಂತರ ತೆಲುಗು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕಿ ಪೂಜಾ ಎನ್ನಲಾಗುತ್ತಿದೆ. ಸಂಭಾವನೆ ಹೆಚ್ಚಿಸಿಕೊಂಡರು ಹಲವು ಹೊಸ ಸಿನಿಮಾಗಳಿಗೆ ಪೂಜಾ ಹೆಗ್ಡೆ ಸಹಿ ಹಾಕಿದ್ದಾರೆ.

  ಹಲವು ಸಿನಿಮಾಗಳಿವೆ ಪೂಜಾ ಹೆಗ್ಡೆ ಕೈಯಲ್ಲಿ

  ಹಲವು ಸಿನಿಮಾಗಳಿವೆ ಪೂಜಾ ಹೆಗ್ಡೆ ಕೈಯಲ್ಲಿ

  ಪೂಜಾ ಹೆಗ್ಡೆ, ಪ್ರಭಾಸ್ ಜೊತೆ ನಟಿಸಿರುವ 'ರಾಧೆಶ್ಯಾಮ್' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ನಿಖಿಲ್ ಜೊತೆ ನಟಿಸಿರುವ 'ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್' ಸಿನಿಮಾ ಸಹ ಬಿಡುಗಡೆ ಆಗಲಿದೆ. ಚಿರಂಜೀವಿ ಮುಖ್ಯ ಪಾತ್ರದಲ್ಲಿರುವ 'ಆಚಾರ್ಯ' ಸಿನಿಮಾದಲ್ಲಿ ರಾಮ್ ಚರಣ್ ತೇಜಗೆ ನಾಯಕಿಯಾಗಿ ಪೂಜಾ ಕಾಣಿಸಿಕೊಂಡಿದ್ದಾರೆ. ಈ ನಡುವೆ ತಮಿಳಿನ ವಿಜಯ್ ನಟನೆಯ 'ಬೀಸ್ಟ್' ಸಿನಿಮಾದಲ್ಲಿ ಪೂಜಾ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ಜೊತೆಗೆ 'ಭಾಯಿಜಾನ್' ನಟ ರಣ್ವೀರ್ ಸಿಂಗ್ ಜೊತೆಗೆ 'ಸರ್ಕಸ್' ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ.

  English summary
  MLA Roja husband director RK Selvamani alleged that actress Pooja Hegde unnecessarily rising production cost of the movie by bringing 12 personal employers of her own.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X