twitter
    For Quick Alerts
    ALLOW NOTIFICATIONS  
    For Daily Alerts

    ರಾಜಮೌಳಿ- ಪ್ರಶಾಂತ್‌ ನೀಲ್ ಇಬ್ಬರಿಗೆ ಸಮ ಒಬ್ಬ 'ಜಂಟಲ್‌ಮನ್' ಶಂಕರ್!

    |

    ಸೌತ್ ಸಿನಿದುನಿಯಾದ ಸ್ಟಾರ್ ಡೈರೆಕ್ಟರ್ ಶಂಕರ್. 90ರ ದಶಕದಲ್ಲೇ ಬಾಲಿವುಡ್ ಮಂದಿ ಕಾಲಿವುಡ್ ತಿರುಗಿ ನೋಡುವಂತೆ ಮಾಡಿದ ಜಾದೂಗಾರ. ಸಿನಿಮಾ ಅಂದರೆ ಬರೀ ಮನರಂಜನೆ ಅಲ್ಲ, ಅದನ್ನು ಮೀರಿದ್ದು ಎಂದು ತೋರಿಸಿಕೊಟ್ಟ ನಿರ್ದೇಶಕ ಶಂಕರ್.

    'ಜಂಟಲ್‌ಮನ್', 'ಕಾದಲನ್', 'ಇಂಡಿಯನ್', 'ಮುದಲ್ವನ್', 'ಅನ್ನಿಯನ್', 'ಎಂದಿರನ್' ರೀತಿಯ ಬ್ಲಾಕ್‌ಬಸ್ಟರ್‌ ಹಿಟ್ ಸಿನಿಮಾಗಳನ್ನು ಶಂಕರ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಶಂಕರ್ ಮ್ಯಾಜಿಕ್ ತೆರೆಮೇಲೆ ನಡೀತಿಲ್ಲ. ಆದರೂ ಅವರ ಸಿನಿಮಾಗಳಿಗೆ ಪ್ರತ್ಯೇಕ ಅಭಿಮಾನಿ ಬಳಗ ಇದೆ. ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶ ಸಾರುವುದು ಶಂಕರ್ ಸ್ಟೈಲ್. ಸದ್ಯ ರಾಮ್‌ಚರಣ್ ನಟನೆಯ ಹೊಸ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಬಾಹುಬಲಿ', 'ಕೆಜಿಎಫ್' ಸಿನಿಮಾಗಳನ್ನು ನೋಡಿ ಎಲ್ಲರೂ ರಾಜಮೌಳಿ, ಪ್ರಶಾಂತ್‌ ನೀಲ್ ವಿಷನ್ ಬಗ್ಗೆ ಮಾತನಾಡುತ್ತಾರೆ. ಆದರೆ ಖುದ್ದು ಮೌಳಿ, ನೀಲ್ ಕೂಡ ಶಂಕರ್ ಸಿನಿಮಾಗಳಿಂದ ಇನ್‌ಸ್ಪೈರ್ ಆದವರೇ.

    ರಜನಿ- ಶಿವಣ್ಣ 'ಜೈಲರ್' ಸಿನಿಮಾ ಅಪ್‌ಡೇಟ್: ಏನಂದ್ರು ಸೂಪರ್ ಸ್ಟಾರ್ ?ರಜನಿ- ಶಿವಣ್ಣ 'ಜೈಲರ್' ಸಿನಿಮಾ ಅಪ್‌ಡೇಟ್: ಏನಂದ್ರು ಸೂಪರ್ ಸ್ಟಾರ್ ?

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಿರ್ದೇಶಕ ಶಂಕರ್‌ಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಾಮಾಜಿಕ ಸಮಸ್ಯೆಗಳಿಗೆ ಕಮರ್ಷಿಯಲ್ ಅಂಶಗಳನ್ನು ಸೇರಿಸಿ ಕ್ಲಾಸ್ ಹಾಗೂ ಮಾಸ್ ಪ್ರೇಕ್ಷಕರನ್ನು ಮೆಚ್ಚಿಸುವ ಕಲೆ ಈ ತಮಿಳು ನಿರ್ದೇಶಕನಿಗೆ ಸಿದ್ದಿಸಿದೆ. ಇಡೀ ಭಾರತೀಯ ಚಿತ್ರರಂಗವೇ ಸೌತ್‌ ಸಿನಿಮಾಗಳ ಬಗ್ಗೆ ಮಾತನಾಡುವಂತಹ ಸಿನಿಮಾಗಳನ್ನು ದಶಕಗಳ ಹಿಂದೆಯೇ ಶಂಕರ್ ಮಾಡಿ ತೋರಿಸಿದ್ದಾರೆ. ಒಂದ್ಕಾಲದಲ್ಲಿ ಶಂಕರ್ ಸಿನಿಮಾಗಳನ್ನು ನೋಡಿ ಬಾಲಿವುಡ್ ಫಿಲ್ಮ್ ಮೇಕರ್ಸ್ ಬೆರಗಾಗಿದ್ದರು. #RC15 ನಂತರ ನಿರ್ದೇಶಕರು ಕಮಲ್ ಹಾಸನ್ ನಟನೆಯ 'ಇಂಡಿಯನ್-2' ಸಿನಿಮಾ ಮುಗಿಸುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ರಣ್‌ವೀರ್‌ ಸಿಂಗ್ ಜೊತೆ ಬಾಲಿವುಡ್‌ನಲ್ಲಿ 'ಅನ್ನಿಯನ್' ರೀಮೇಕ್ ಮಾಡುವುದಾಗಿ ಶಂಕರ್ ಘೋಷಿಸಿದ್ದಾರೆ. ಮತ್ತೆ ಗೆಲುವಿನ ಲಯಕ್ಕೆ ಮರಳಲು ಕಸರತ್ತು ನಡೆಸುತ್ತಿದ್ದಾರೆ. ಹುಟ್ಟುಹಬ್ಬದ ಸಡಗರದಲ್ಲಿರುವ ಶಂಕರ್ ನಿರ್ದೇಶನದ ಮಾಸ್ಟರ್‌ಪೀಸ್ ಸಿನಿಮಾಗಳ ಪರಿಚಯ ಇಲ್ಲಿದೆ ನೋಡಿ.

     ಎಜುಕೇಶನ್ ಮಾಫಿಯಾ 'ಜಂಟಲ್‌ಮನ್' ಗುದ್ದು

    ಎಜುಕೇಶನ್ ಮಾಫಿಯಾ 'ಜಂಟಲ್‌ಮನ್' ಗುದ್ದು

    ಶಂಕರ್ ನಿರ್ದೇಶನದ ಚೊಚ್ಚಲ ಸಿನಿಮಾ 'ಜಂಟಲ್‌ಮನ್'. 1993ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಎಜುಕೇಶನ್ ಮಾಫಿಯಾ ಸುತ್ತಾ ಕಥೆಯನ್ನು ಹೆಣೆಯಲಾಗಿತ್ತು. ಅರ್ಹ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟ್ ಸಿಗಬೇಕು. ಬಡವರು ಕೂಡ ಮೆಡಿಕಲ್ ಓದಿ ವೈದ್ಯರಾಗಬೇಕು ಎನ್ನುವ ಕಾರಣಕ್ಕೆ ರಾಬಿನ್ ಹುಡ್ ರೀತಿಯಲ್ಲಿ ಶ್ರೀಮಂತರಿಂದ ದೋಚಿ ಕೃಷ್ಣಮೂರ್ತಿ ಮೆಡಿಕಲ್ ಕಾಲೇಜು ಕಟ್ಟುವ ಕಥೆ ಈ ಚಿತ್ರದಲ್ಲಿತ್ತು. ಎ. ಆರ್ ರೆಹಮಾನ್ ಮ್ಯೂಸಿಕ್‌ನಲ್ಲಿ ಸಿನಿಮಾ ಆಲ್ಬಮ್‌ ಸೂಪರ್ ಹಿಟ್ ಆಗಿತ್ತು. ಹೀರೊ ಅರ್ಜುನ್‌ ಸರ್ಜಾಗೆ ಈ ಸಿನಿಮಾ ದೊಡ್ಡ ಬ್ರೇಕ್‌ ಕೊಟ್ಟಿತ್ತು.

     ಒಂದು ದಿನ ಸಿಎಂ ಕಥೆ 'ಮುದಲ್ವನ್

    ಒಂದು ದಿನ ಸಿಎಂ ಕಥೆ 'ಮುದಲ್ವನ್

    ನಿರ್ದೇಶಕ ಶಂಕರ್‌ ಸೂಪರ್ ಸ್ಟಾರ್ ರಜನಿಕಾಂತ್‌ಗಾಗಿ ಮಾಡಿದ ಕಥೆ 'ಮುದಲ್ವನ್'. ಆದರೆ ಕಾರಣಾಂತರಗಳಿಂದ ತಲೈವಾ ಬದಲು ಅರ್ಜುನ್ ಸರ್ಜಾ ಈ ಚಿತ್ರದಲ್ಲೂ ಹೀರೊ ಆಗಿ ನಟಿಸಿದ್ದರು. ಚಿತ್ರದಲ್ಲಿ ಜಡ್ಡು ಹಿಡಿದ ರಾಜಕೀಯ ವ್ಯವಸ್ಥೆಯ ಬಗ್ಗೆ ಶಂಕರ್ ಮಾತನಾಡಿದ್ದರು. ಒಬ್ಬ ಜವಾಬ್ದಾರಿಯುತ ವ್ಯಕ್ತಿ ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದರೇ ಏನೆಲ್ಲಾ ಬದಲಾವಣೆ ತರಬಹುದು ಅನ್ನುವುದನ್ನು ಹೇಳುವ ಪ್ರಯತ್ನ ಮಾಡಿದ್ದರು. ಶಂಕರ್ ಕಥೆ ಹೇಳಿದ ಪರಿಗೆ ಬಿಟೌನ್ ಮಂದಿ ಕೂಡ ಹುಬ್ಬೇರಿಸಿದ್ದರು. ಇದೇ ಚಿತ್ರವನ್ನು 'ನಾಯಕ್' ಹೆಸರಿನಲ್ಲಿ ಹಿಂದಿಗೂ ಶಂಕರ್ ರಿಮೇಕ್ ಮಾಡಿದ್ದರು.

     ಭ್ರಷ್ಟಾಚಾರದ ವಿರುದ್ಧ 'ಇಂಡಿಯನ್' ಯುದ್ಧ

    ಭ್ರಷ್ಟಾಚಾರದ ವಿರುದ್ಧ 'ಇಂಡಿಯನ್' ಯುದ್ಧ

    ಕಮಲ್ ಹಾಸನ್ ನಟನೆಯ 'ಇಂಡಿಯನ್' ಚಿತ್ರದಲ್ಲಿ ದೇಶದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಶಂಕರ್ ಚರ್ಚಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಹಾಗೂ ಆರ್‌ಟಿಓ ಕಛೇರಿ ಬ್ರೋಕರ್ ಚಂದ್ರಬೋಸ್ ಆಗಿ ಡಬಲ್ ರೋಲ್‌ನಲ್ಲಿ ಕಮಲ್ ನಟಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಸೈನಿಕನಾಗಿ ಹೋರಾಡಿದ ಸೇನಾಪತಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಚಿತ್ರದಲ್ಲಿತ್ತು. ತಪ್ಪು ಯಾರೇ ಮಾಡಿದರೂ ತಪ್ಪೇ, ಸ್ವಂತ ಮಗನೇ ತಪ್ಪು ಮಾಡಿದ್ದಾನೆ ಎಂದು ತಿಳಿದು ಆತನನ್ನು ಕೊಲ್ಲುವ ಸೇನಾಪತಿಯ ಕಥೆ ನೋಡಿ ಸಿನಿರಸಿಕರು ಹುಬ್ಬೇರಿಸಿದ್ದರು. ಚಿತ್ರದಲ್ಲಿ ಮರ್ಮಕಲೆಯನ್ನು ತೋರಿಸಿ ಶಂಕರ್ ಮೆಚ್ಚುಗೆ ಗಳಿಸಿದ್ದರು. ಈ ಚಿತ್ರದ ಸೀಕ್ವೆಲ್ ಕಾರಣಾಂತರಗಳಿಂದ ತಡವಾಗುತ್ತಿದೆ.

     'ಅನ್ನಿಯನ್' ಚಿತ್ರದಲ್ಲೂ ಇತ್ತು ಸಾಮಾಜಿಕ ಸಂದೇಶ

    'ಅನ್ನಿಯನ್' ಚಿತ್ರದಲ್ಲೂ ಇತ್ತು ಸಾಮಾಜಿಕ ಸಂದೇಶ

    2005ರಲ್ಲಿ ಶಂಕರ್ 'ಅನ್ನಿಯನ್' ಅನ್ನುವ ಮತ್ತೊಂದು ಅದ್ಭುತ ಸಿನಿಮಾ ಕಟ್ಟಿಕೊಟ್ಟಿದ್ದರು. ದೇಶದಲ್ಲಿ ಇರುವ ಪ್ರತಿಯೊಬ್ಬರು ಅವರವರ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು. ಭ್ರಷ್ಟಾಚಾರವನ್ನು ಪ್ರೋತ್ಸಾಹಿಸುವುದು ಕೂಡ ತಪ್ಪು ಅನ್ನುವ ಸಂದೇಶವನ್ನು ಈ ಸಿನಿಮಾ ಹೊತ್ತು ಬಂದಿತ್ತು. ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಅನ್ನುವ ಸಮಸ್ಯೆಯನ್ನು ಬಳಸಿಕೊಂಡು ಅದಕ್ಕೆ ಭ್ರಷ್ಟಾಚಾರದ ಕಥೆಯನ್ನು ಸೇರಿಸಿ ಶಂಕರ್ ಸಕ್ಸಸ್ ಕಂಡಿದ್ದರು. 'ರಾಮಾನುಜಂ', 'ಅನ್ನಿಯನ್', 'ರೆಮೋ' ಹೀಗೆ 3 ಶೇಡ್‌ಗಳಿರೋ ಪಾತ್ರದಲ್ಲಿ ಚಿಯಾನ್ ವಿಕ್ರಮ್ ನಟಿಸಿ ಗೆದ್ದಿದ್ದರು. ಶಂಕರ್ ಹೀಗೆ ತಮ್ಮ ಸಿನಿಮಾಗಳಲ್ಲಿ ಸಾಮಾಜಿಕ ಸಂದೇಶಗಳನ್ನು ಹೆಚ್ಚು ಹೇಳುವ ಪ್ರಯತ್ನ ಮಾಡಿದ್ದಾರೆ.

    English summary
    Director Shankar Birthday Best Social Message Films Of Shankar. Know More.
    Wednesday, August 17, 2022, 19:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X