ಫೋಟೋಗಳು: ಕ್ರಿಕೆಟರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರ್ದೇಶಕ ಶಂಕರ್ ಪುತ್ರಿ ಐಶ್ವರ್ಯಾ

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಪುತ್ರಿ ಐಶ್ವರ್ಯಾ ಕ್ರಿಕೆಟ್ ಆಟಗಾರ ರೋಹಿತ್ ದಾಮೋದರನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು (ಜೂನ್ 27) ನಡೆದ ಮದುವೆ ಸಮಾರಂಭದಲ್ಲಿ ರೋಹಿತ್ ಶಂಕರ್ ಪುತ್ರಿ ಐಶ್ವರ್ಯಾ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದರು. ಐಶ್ವರ್ಯಾ ಮತ್ತು ರೋಹಿತ್ ಮದುವೆ ಮಹಾಬಲಿಪುರಂನಲ್ಲಿ ನಡೆದಿದೆ.

ಕೋವಿಡ್ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಮದುವೆ ಸಮಾರಂಭ ನಡೆದಿದೆ. ಶಂಕರ್ ಮತ್ತು ಅಳಿಯ ರೋಹಿತ್ ಕುಟುಂಬದ ಕೆಲವೇ ಸದಸ್ಯರು ಮತ್ತು ಕೆಲವು ಗಣ್ಯರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದರು. ಇದೀಗ ಐಶ್ವರ್ಯಾ ಮದುವೆಯ ಫೋಟೋ ಔಟ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮುಂದೆ ಓದಿ...

ಶಂಕರ್ ಪುತ್ರಿಯ ಮದುವೆ ಫೋಟೋ ವೈರಲ್

ಶಂಕರ್ ಪುತ್ರಿಯ ಮದುವೆ ಫೋಟೋ ವೈರಲ್

ಶಂಕರ್ ಪುತ್ರಿ ಮದುಮಗಳು ಐಶ್ವರ್ಯಾ ಕೆಂಪು ಮತ್ತು ಗೋಲ್ಡ್ ಬಣ್ಣದ ರೇಶ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ರೆ, ಮದುಮಗ ರೋಹಿತ್ ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ರು. ಇಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ನವ ಜೋಡಿಗೆ ಶುಭಹಾರೈಸುತ್ತಿದ್ದಾರೆ.

ಮದುವೆ ಸಮಾರಂಭದಲ್ಲಿ ಸಿಎಂ ಸ್ಟಾಲಿನ್ ಕುಟುಂಬ ಭಾಗಿ

ಮದುವೆ ಸಮಾರಂಭದಲ್ಲಿ ಸಿಎಂ ಸ್ಟಾಲಿನ್ ಕುಟುಂಬ ಭಾಗಿ

ಅಂದಹಾಗೆ ಐಶ್ವರ್ಯಾ ಮತ್ತು ರೋಹಿತ್ ಮದುವೆಗೆ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಮತ್ತು ಪುತ್ರ ಉದಯನಿಧಿ ಸ್ಟಾಲಿನ್ ಭೇಟಿ ನೀಡಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಐಶ್ವರ್ಯಾ ಮತ್ತು ರೋಹಿತ್ ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಎಲ್ಲರೂ ಮಾಸ್ಕ್ ಧರಿಸಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

ಐಶ್ವರ್ಯಾ ಪತಿ ರೋಹಿತ್ ಬಗ್ಗೆ

ಐಶ್ವರ್ಯಾ ಪತಿ ರೋಹಿತ್ ಬಗ್ಗೆ

ಐಶ್ವರ್ಯಾ ಶಂಕರ್ ಮತ್ತು ಪತ್ನಿ ಈಶ್ವರಿ ದಂಪತಿಯ ಮೊದಲ ಮಗಳು. ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೋಹಿತ್ ರಣಜಿ ಕ್ರಿಕೆಟರ್ ಆಗಿದ್ದು, ಪಾಂಡಿಚೆರಿ ತಂಡದ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ತಂದೆ ದಾಮೋದರನ್ ದೊಡ್ಡ ಉದ್ಯಮಿ. ತಮಿಳು ನಾಡು ಪ್ರೀಮಿಯರ್ ಲೀಗ್ ನ ಮದುರೈ ಪ್ಯಾಂಥರ್ಸ್ ತಂಡದ ಮಾಲಿಕರಾಗಿದ್ದಾರೆ.

ಆರಂಭದಲ್ಲಿ ಶ್ರೀಲಂಕಾ ಪರ ಆಡಿದ್ದ ರೋಹಿತ್

ಆರಂಭದಲ್ಲಿ ಶ್ರೀಲಂಕಾ ಪರ ಆಡಿದ್ದ ರೋಹಿತ್

ಆರಂಭದಲ್ಲಿ ರೋಹಿತ್ ತಮಿಳು ಕ್ರಿಕೆಟ್ ತಂಡದಲ್ಲಿ ಆಡಲು ತುಂಬಾ ಶ್ರಮಿಸಿದ್ದರು. ಅವಕಾಶ ಸಿಗದೆ ಆರಂಭದಲ್ಲಿ ಶ್ರೀಲಂಕಾದ ಪರ ಆಡಿದ್ದರು. ಬಳಿಕ ತಂದೆಯ ಪ್ರಭಾವದೊಂದಿಗೆ ಪಾಂಡಿಚೆರಿ ಕ್ರಿಕೆಟ್ ತಂಡದದಲ್ಲಿ ಅವಕಾಶ ಗಿಟ್ಟಿಸಿಕೊೆಂಡರು. ಬಳಿಕ ಅವರೇ ತಂಡದ ನಾಯಕರಾಗಿದ್ದಾರೆ.

ಅದ್ದೂರಿ ಆರತಕ್ಷತೆಗೆ ಶಂಕರ್ ಪ್ಲಾನ್

ಅದ್ದೂರಿ ಆರತಕ್ಷತೆಗೆ ಶಂಕರ್ ಪ್ಲಾನ್

ಇನ್ನು ಮದುವೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಮಾಹಿತಿ ಇನ್ನು ರಿವೀಲ್ ಆಗಿಲ್ಲ. ಮೂಲಗಳ ಪ್ರಕಾರ ಕೊರೊನಾ ಈಗಿನ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ಬಳಿಕ ಅದ್ದೂರಿ ಆರತಕ್ಷತೆ ನಡೆಸಲು ಶಂಕರ್ ಪ್ಲಾನ್ ಮಾಡಿದ್ದಾರೆ ಎನ್ನುವ ಮಾಹಿತಿ ಇದೆ. ಸಮಾರಂಭದಲ್ಲಿ ಇಡೀ ತಮಿಳು ಚಿತ್ರರಂಗಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ.

ಸ್ಟಾರ್ ಕಲಾವಿದರ ಜೊತೆ ಶಂಕರ್ ಸಿನಿಮಾ

ಸ್ಟಾರ್ ಕಲಾವಿದರ ಜೊತೆ ಶಂಕರ್ ಸಿನಿಮಾ

ನಿರ್ದೇಶಕ ಶಂಕರ್ ತಮಿಳಿನ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ವಿಕ್ರಮ್ ಸೇರಿದಂತೆ ಅನೇಕರಿಗೆ ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡಿದ್ದಾರೆ. ಸದ್ಯ ಶಂಕರ್ ತೆಲುಗು ಸ್ಟಾರ್ ನಟ ರಾಮ್ ಚರಣ್ ತೇಜ್ ಅವರ ಜೊತೆ ಪ್ಯಾನ್ ಇಂಡಿಯಾ 3ಡಿ ಸಿನಿಮಾ ಅನೌನ್ಸ್ ಮಾಡಿದ್ದಾರೆ.

Recommended Video

lockdownನಲ್ಲಿ ಮದುವೆಯಾದ ಸೆಲೆಬ್ರಿಟಿಗಳು!! | Filmibeat Kannada
'ಅನ್ನಿಯನ್' ಸಿನಿಮಾ ರಿಮೇಕ್ ಗೆ ತಯಾರಿ

'ಅನ್ನಿಯನ್' ಸಿನಿಮಾ ರಿಮೇಕ್ ಗೆ ತಯಾರಿ

ಈ ಸಿನಿಮಾ ಜೊತೆಗೆ ಅನ್ನಿಯನ್ ಹಿಂದಿ ರಿಮೇಕ್ ಗೂ ತಯಾರಿ ನಡೆಯುತ್ತಿದ್ದಾರೆ. ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಮಲ್ ಹಾಸನ್ ಜೊತೆ 'ಇಂಡಿಯನ್-2' ಸಿನಿಮಾ ಸಂಪೂರ್ಣ ಮಾಡಬೇಕಿದೆ. 'ಇಂಡಿಯನ್-2' ಮುಗಿಸಿ ಉಳಿದ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

More from Filmibeat

English summary
Tamil famous Director Shankar daughter Aishwarya tie the knot with cricketer Rohit Damodaran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X