For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ಆಟಗಾರನ ಜೊತೆ ಖ್ಯಾತ ನಿರ್ದೇಶಕ ಶಂಕರ್ ಪುತ್ರಿಯ ಮದುವೆ

  |

  ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಪುತ್ರಿ ಐಶ್ವರ್ಯಾ ಕ್ರಿಕೆಟ್ ಆಟಗಾರ ರೋಹಿತ್ ದಾಮೋದರನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಐಶ್ವರ್ಯಾ ಮತ್ತು ರೋಹಿತ್ ಮದುವೆ ಇಂದು (ಜೂನ್ 27) ಮಹಾಬಲಿಪುರಂನಲ್ಲಿ ನಡೆಯಲಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ತೀರ ಖಾಸಗಿಯಾಗಿ ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಇಬ್ಬರು ಕುಟುಂಬದ ಕೆಲವೇ ಸದಸ್ಯರು, ಸ್ನೇಹಿತರು ಮಾತ್ರ ಹಾಜರಾಗಲಿದ್ದಾರೆ ಎಂದು ಎನ್ನುವ ಮಾಹಿತಿ ತಿಳಿದುಬಂದಿದೆ. ಕೊರೊನಾ ಮಾರ್ಗಸೂಚಿ ಅನುಸಾರ ಮದುವೆ ನಡೆಯುತ್ತಿದ್ದು, ಹೆಚ್ಚಿನ ಜನರಿಗೆ ಆಹ್ವಾನ ನೀಡಿಲ್ಲ.

  ಅಂದಹಾಗೆ ಪುತ್ರಿಯ ಮದುವೆ ನಿರ್ದೇಶಕ ಶಂಕರ್ ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ. ಶಂಕರ್ ಪುತ್ರಿ ಐಶ್ವರ್ಯಾ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ರೋಹಿತ್ ರಣಜಿ ಕ್ರಿಕೆಟರ್ ಆಗಿದ್ದು, ಪಾಂಡಿಚೇರಿ ತಂಡದ ಕ್ಯಾಪ್ಟನ್ ಆಗಿದ್ದಾರೆ. ರೋಹಿತ್ ತಂದೆ ದಾಮೋದರನ್ ದೊಡ್ಡ ಉದ್ಯಮಿ. ತಮಿಳು ನಾಡು ಪ್ರೀಮಿಯರ್ ಲೀಗ್‌ನ ಮದುರೈ ಪ್ಯಾಂಥರ್ಸ್ ತಂಡದ ಮಾಲಿಕರಾಗಿದ್ದಾರೆ.

  ಆರಂಭದಲ್ಲಿ ರೋಹಿತ್ ತಮಿಳು ಕ್ರಿಕೆಟ್ ತಂಡದಲ್ಲಿ ಆಡಲು ತುಂಬಾ ಶ್ರಮಿಸಿದ್ದರು. ಅವಕಾಶ ಸಿಗದೆ ಬಳಿಕ ಶ್ರೀಲಂಕಾದ ಪರ ಆಡಿದ್ದರು. ಬಳಿಕ ತಂದೆಯ ಪ್ರಭಾವದೊಂದಿಗೆ ಪಾಂಡಿಚೇರಿ ಕ್ರಿಕೆಟ್ ತಂಡದದಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಬಳಿಕ ಅವರೇ ತಂಡದ ನಾಯಕರಾಗಿದ್ದಾರೆ.

  ಇಂದು ನಡೆಯುತ್ತಿರುವ ಮದುವೆ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಯಾರೆಲ್ಲ ಹಾಜರಾಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಕೊರೊನಾ ಕಟ್ಟುನಿಟ್ಟಿನ ನಿಯಮದ ಕಾರಣ ಚಿತ್ರರಂಗದ ಅನೇಕ ಗಣ್ಯರಿಗೆ ಆಹ್ವಾನ ನೀಡಿರುವ ಸಾಧ್ಯತೆ ತೀರ ಕಡಿಮೆ ಇದೆ. ಹಾಗಾಗಿ ಯಾರೆಲ್ಲ ಭಾಗಿಯಾಗಲಿದ್ದಾರೆ ಕಾದು ನೋಡಬೇಕು.

  ನಿರ್ದೇಶಕ ಶಂಕರ್ ತಮಿಳಿನ ಸ್ಟಾರ್ ನಟರಿಗೆ ಸಿನಿಮಾ ಮಾಡಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್, ಕಮಲ್ ಹಾಸನ್, ವಿಜಯ್, ವಿಕ್ರಮ್ ಸೇರಿದಂತೆ ಅನೇಕರಿಗೆ ಸಿನಿಮಾ ನಿರ್ದೇಶನ ಮಾಡಿ ಸಕ್ಸಸ್ ಕಂಡಿದ್ದಾರೆ. ಸದ್ಯ ಶಂಕರ್ ತೆಲುಗು ಸ್ಟಾರ್ ನಟ ರಾಮ್ ಚರಣ್ ತೇಜ್ ಅವರ ಜೊತೆ ಪ್ಯಾನ್ ಇಂಡಿಯಾ 3ಡಿ ಸಿನಿಮಾ ಅನೌನ್ಸ್ ಮಾಡಿದ್ದಾರೆ.

  ಪೋಲೀಸ್ ಸ್ಟೇಷನ್ ಗೆ ನಟ ಚೇತನ್ ಅಲೆದಾಟ ಇನ್ನು ನಿಂತಿಲ್ಲ! | Filmibeat Kannada

  ಈ ಸಿನಿಮಾ ಜೊತೆಗೆ ಅನ್ನಿಯನ್ ಹಿಂದಿ ರಿಮೇಕ್‌ಗೂ ತಯಾರಿ ನಡೆಯುತ್ತಿದ್ದಾರೆ. ಬಾಲಿವುಡ್ ನಟ ರಣ್ವೀರ್ ಸಿಂಗ್ ಜೊತೆ ಅನ್ನಿಯನ್ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡುತ್ತಿದ್ದಾರೆ. ಇದೆಲ್ಲದರ ಜೊತೆಗೆ ಕಮಲ್ ಹಾಸನ್ ಜೊತೆಗಿನ ಇಂಡಿಯನ್-2 ಸಿನಿಮಾ ಸಂಪೂರ್ಣ ಮಾಡಬೇಕಿದೆ. ಇಂಡಿಯನ್-2 ಮುಗಿಸಿ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

  English summary
  Tamil famous director Shankar's daughter Aishwarya to marry cricketer Rohit Damodaran on July 27th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X