ಖ್ಯಾತ ನಿರ್ದೇಶಕ ಶಂಕರ್ ಅವರ ತಾಯಿ ನಿಧನ
ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಅವರ ತಾಯಿ ಮಂಗಳವಾರ ನಿಧನರಾಗಿದ್ದಾರೆ. 88 ವರ್ಷದ ಎಸ್ ಮುತ್ತುಲಕ್ಷ್ಮಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಬುಧವಾರ ಶಂಕರ್ ತಾಯಿಯ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿದೆ.
ಶಂಕರ್ ಅವರ ತಾಯಿಯ ನಿಧನಕ್ಕೆ ಸೌತ್ ಇಂಡಸ್ಟ್ರಿಯ ಅನೇಕರು ಸಂತಾಪ ಸೂಚಿಸಿದ್ದಾರೆ. ಈ ಹಿಂದೆ ಹಲವು ಸಂದರ್ಶನಗಳಲ್ಲಿ ತಮ್ಮ ತಾಯಿಯ ಬಗ್ಗೆ ಶಂಕರ್ ಮಾತನಾಡಿದ್ದರು.
ಚಿತ್ರರಂಗದಲ್ಲಿ ಶಂಕರ್ ಕಂಡಿರುವ ಯಶಸ್ಸಿನ ಬಗ್ಗೆ ತಾಯಿ ಮುತ್ತುಲಕ್ಷ್ಮಿ ಸದಾ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು ಎಂದು ಹೇಳಿಕೊಂಡಿದ್ದರು. ಶಂಕರ್ ಅವರು ಸಹ ತಾಯಿಯ ಬಗ್ಗೆ ಹೆಚ್ಚು ಪ್ರೀತಿ ಮತ್ತು ಬಾಂಧವ್ಯ ಹೊಂದಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದ್ರೆ ಕಮಲ್ ಹಾಸನ್ ಜೊತೆ ಮಾಡುತ್ತಿರುವ 'ಇಂಡಿಯನ್-2' ಸಿನಿಮಾ ಅರ್ಧಕ್ಕೆ ಸ್ಥಗಿತಗೊಂಡಿದೆ. ಈ ನಡುವೆ ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆ ಮಾಡಿದ್ದಾರೆ.
ರಣ್ವೀರ್ ಸಿಂಗ್ ಜೊತೆ ಹಿಂದಿಯಲ್ಲಿ ಅನ್ನಿಯನ್ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರ 2022ರಲ್ಲಿ ಆರಂಭವಾಗುವುದು ಎಂದು ತಿಳಿಸಿದ್ದಾರೆ.


Click it and Unblock the Notifications











