ಮಗಳ ಮದುವೆಗೆ ಭಾರಿ ಹಣ ಖರ್ಚು ಮಾಡಿದ ನಿರ್ದೇಶಕ ಶಂಕರ್

ಭಾರತೀಯ ಸಿನಿಮಾ ಪ್ರಪಂಚದಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿರುವ ಶಂಕರ್ ಕಳೆದ ತಿಂಗಳಲ್ಲಿ ತಮ್ಮ ಮಗಳು ಮದುವೆ ಮಾಡಿದ್ದರು. ಜೂನ್ 27 ರಂದು ನಡೆದ ವಿವಾಹ ಕಾರ್ಯಕ್ರಮದಲ್ಲಿ ಪುತ್ರಿ ಐಶ್ವರ್ಯ, ಕ್ರಿಕೆಟಿಗ ರೋಹಿತ್ ಜೊತೆ ದಾಂಪತ್ಯ ಜೀವನ ಆರಂಭಿಸಿದರು.

ಶಂಕರ್ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ತಮಿಳುನಾಡಿನ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಸಹ ಭಾಗವಹಿಸಿ ನವ ಜೋಡಿಗಳಿಗೆ ಆಶೀರ್ವಾದ ಮಾಡಿದ್ದರು. ಕೋವಿಡ್ ಕಾರಣದಿಂದ ಬಹಳ ಅದ್ಧೂರಿಯಾಗಿ ಅಲ್ಲದಿದ್ದರೂ ವಿಜೃಂಭಣೆಯಿಂದ ಮಗಳ ಮದುವೆ ಮಾಡಿ ಗಮನ ಸೆಳೆದರು ನಿರ್ದೇಶಕ ಶಂಕರ್. ಇದೀಗ, ಶಂಕರ್ ತನ್ನ ಮಗಳ ಮದುವೆ ಎಷ್ಟು ಹಣ ಖರ್ಚು ಮಾಡಿದರು ಎನ್ನುವ ಸುದ್ದಿ ಚರ್ಚೆಯಲ್ಲಿದೆ. ಮುಂದೆ ಓದಿ...

ಮಗಳ ಮದ್ವೆಗೆ ಖರ್ಚು ಮಾಡಿದ್ದೆಷ್ಟು?

ಮಗಳ ಮದ್ವೆಗೆ ಖರ್ಚು ಮಾಡಿದ್ದೆಷ್ಟು?

ನಿರ್ದೇಶಕ ಶಂಕರ್ ತನ್ನ ಮಗಳು ಐಶ್ವರ್ಯ ಮತ್ತು ರೋಹಿತ್ ಮದುವೆಗಾಗಿ ಭಾರಿ ದೊಡ್ಡ ಮೊತ್ತವನ್ನು ಖರ್ಚು ಮಾಡಿರುವ ಸುದ್ದಿ ಹೊರಬಿದ್ದಿದೆ. ಸದ್ಯ ತಮಿಳಿನ ವೆಬ್‌ಸೈಟ್‌ಗಳು ವರದಿ ಮಾಡಿರುವಂತೆ ಶಂಕರ್ ಮಗಳ ಮದುವೆಗಾಗಿ ಖರ್ಚು ಮಾಡಿದ ಒಟ್ಟು ಮೊತ್ತ 10 ಕೋಟಿ ದಾಟಿದೆಯಂತೆ.

ಹೇಳಲು ಸರಳ, ಮಾಡಿದ್ದು ದುಬಾರಿ

ಹೇಳಲು ಸರಳ, ಮಾಡಿದ್ದು ದುಬಾರಿ

ಕೋವಿಡ್ ಕಾರಣದಿಂದ ಕುಟುಂಬಸ್ಥರು ಮತ್ತು ಕೇವಲ ಆಪ್ತರು ಮಾತ್ರ ಈ ಮದುವೆಯಲ್ಲಿ ಭಾಗವಹಿಸಿದ್ದರು. ಖಾಸಗಿಯಾಗಿ ನಡೆದ ಈ ಮದುವೆ ಹೇಳಲು ಸರಳ ವಿವಾಹ ಎನ್ನಬಹುದು. ಆದರೆ, ಖರ್ಚು ನೋಡಿದ್ರೆ ಬಹಳ ದುಬಾರಿ ಮದುವೆ ಎಂದು ಅರ್ಥವಾಗುತ್ತದೆ. ಸಿನಿಮಾಗಳಷ್ಟೇ ಅದ್ಧೂರಿಯಾಗಿ ಮಗಳ ಮದುವೆ ಮಾಡಿದ್ದಾರೆ ಶಂಕರ್.

ಸಿನಿಮಾ ಮಾಡಬಹುದಿತ್ತು...

ಸಿನಿಮಾ ಮಾಡಬಹುದಿತ್ತು...

ಶಂಕರ್ ತನ್ನ ಮಗಳ ಮದುವೆಗೆ 10 ಕೋಟಿ ಖರ್ಚು ಮಾಡಿದ್ದಾರೆ ಎಂದು ಸುದ್ದಿ ನೋಡಿದ ನೆಟ್ಟಿಗರು, ಈ ದುಡ್ಡಿನಲ್ಲಿ ಒಂದು ಸಿನಿಮಾ ಮಾಡಬಹುದಿತ್ತು ಎಂದು ಹೇಳುತ್ತಿದ್ದಾರೆ. ಮುಂದಿನ ದಿನದಲ್ಲಿ ಸೆಲೆಬ್ರಿಟಿಗಳಿಗಾಗಿ ವಿಶೇಷವಾಗಿ ಆರತಕ್ಷತೆ ಮಾಡುವ ಲೆಕ್ಕಾಚಾರವೂ ಶಂಕರ್ ಮುಂದೆ ಇದೆ.

Recommended Video

KGF 2 ರಿಲೀಸ್ ಡೇಟ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ Prashanth Neel | Filmibeat Kannada
ರಣ್ವೀರ್ ಸಿಂಗ್ ಜೊತೆ ಸಿನಿಮಾ

ರಣ್ವೀರ್ ಸಿಂಗ್ ಜೊತೆ ಸಿನಿಮಾ

ಕಮಲ್ ಹಾಸನ್ ಜೊತೆ ಮಾಡಬೇಕಿದ್ದ ಇಂಡಿಯನ್ 2 ಸಿನಿಮಾ ಅರ್ಧಕ್ಕೆ ನಿಂತಿದೆ. ಈ ನಡುವೆ ರಾಮ್ ಚರಣ್ ಜೊತೆ ಶಂಕರ್ ಹೊಸ ಸಿನಿಮಾ ಘೋಷಿಸಿದ್ದಾರೆ. ಆ ಕಡೆ ಬಾಲಿವುಡ್‌ನಲ್ಲಿ ರಣ್ವೀರ್ ಸಿಂಗ್ ಜೊತೆ ಅನ್ನಿಯನ್ ರಿಮೇಕ್ ಮಾಡುವುದಾಗಿ ಪ್ರಕಟಿಸಿದ್ದಾರೆ.

More from Filmibeat

English summary
Tamil Director Shankar spent 10 Crore for his Daughter aishwarya Wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X