ತಮಿಳು ನಟ ಅಜಿತ್ ನಿರ್ಧಾರ ಮೆಚ್ಚಿದ ರಾಜಮೌಳಿ!

ತಮಿಳು ನಟ ಅಜಿತ್ ಸೌತ್‌ ಚಿತ್ರರಂಗದ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರು. ಅಜಿತ್‌ಗೆ ಮಾಸ್‌ ಅಭಿಮಾನಿಗಳು ಇದ್ದಾರೆ. ಅಜಿತ್ ಸಿನಿಮಾಗಳಿಗೆ ಎಲ್ಲಿದ ಕ್ರೇಜ್ ಇದೆ. ಹಾಗಾಗಿ ಅಜಿತ್‌ ಅಭಿನಯದ ಬಹುತೇಕ ಚಿತ್ರಗಳು ಸೂಪರ್‌ ಹಿಟ್‌ ಲಿಸ್ಟ್‌ ಸೇರಿಕೊಳ್ಳುತ್ತವೆ. ಅವರನ್ನು ದೇವರಂತೆ ಆರಾಧಿಸುವ ಅಭಿಮಾನಿಗಳು ಕೂಡ ಇದ್ದಾರೆ.

ಆದರೆ ಅಜಿತ್ ಇತ್ತೀಚೆಗೆ ತಮ್ಮ ನಿರ್ಧಾರದಿಂದ ಅಭಿಮಾನಿಗಳಲ್ಲಿ ಬೇಸರ ತಂದಿದ್ದರು. ಅಭಿಮಾನಿಗಳು ಅಜಿತ್‌ ಅವರನ್ನು ಪ್ರೀತಿಯಿಂದ 'ತಲಾ' ಎಂದು ಕರೆಯುತ್ತಿದ್ದರು. ಆದರೆ ಅಜಿತ್ ತಲಾ ಎನ್ನುವ ಬಿರುದಿನಿಂದ ಕರೆಯಬಾರದು ಎಂದು ಹೇಳಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದರು.

ಆದರೂ ಅವರ ಅಪ್ಪಟ ಅಭಿಮಾನಿಗಳು ಈ ನಿರ್ಧಾರವನ್ನು ಒಪ್ಪಿದ್ದರು. ಅಜಿತ್‌ ಅವರದ್ದು ಸರಳ ವ್ಯಕ್ತಿತ್ವ ಹಾಗಾಗಿ ಅಜಿತ್‌ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ಸುಮ್ಮನಾದರು.

ನಾನು ಅಜಿತ್ ಅವರ ನಿರ್ಧಾರ ಮೆಚ್ಚಿದ್ದೇನೆ: ರಾಜಮೌಳಿ!

ನಾನು ಅಜಿತ್ ಅವರ ನಿರ್ಧಾರ ಮೆಚ್ಚಿದ್ದೇನೆ: ರಾಜಮೌಳಿ!

ನಿರ್ದೇಶಕ ರಾಜಮೌಳಿ ಸದ್ಯ ಆರ್‌ಆರ್‌ಆರ್‌ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ದೇಶ ಸುತ್ತಿ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ. ಆದರೆ ಈ ನಡುವೆ ತಮಿಳು ನಟ ಅಜಿತ್ ಬಗ್ಗೆ ರಾಜಮೌಳಿ ಮಾತನಾಡಿದ್ದಾರೆ. ಅಜಿತ್ ಅವರು ತಮ್ಮನ್ನು 'ತಲಾ' ಎಂದು ಕರೆಯಬಾರದು ಎಂದು ಅಭಿಮಾನಿಗಳು ಮತ್ತು ಮೀಡಿಯಾಗಳಲ್ಲಿ ಮನವಿ ಮಾಡಿದ್ದರು. ತಮ್ಮನ್ನು ಅಜಿತ್, ಎಕೆ, ಅಜಿತ್ ಕುಮಾರ್‌ ಅಂತ ಮಾತ್ರ ಕರೆಯಬೇಕೆಂದು ಹೇಳಿ ತಮ್ಮ ನಿರ್ಧಾರ ತಿಳಿಸಿದ್ದರು. ಈ ಬಗ್ಗೆ ಮಾತನಾಡಿದ ರಾಜಮೌಳಿ "ಅವರ ಈ ನಿರ್ಧಾರವನ್ನು ನಾನು ಮೆಚ್ಚಿದ್ದೇನೆ, ಅವರು ಸರಿಯಾಗಿರುವುದನ್ನು ಮಾಡಿದ್ದಾರೆ. ಅವರ ಕೋಟ್ಯಂತರ ಅಭಿಮಾನಿಗಳು ತಲಾ ಎಂದು ಕರೆದು ಸಂಭ್ರಮಿಸುತ್ತಾರೆ. ಆದರೆ ಅವರು ಮಾತ್ರ ತಮ್ಮನ್ನು ಗುರುತಿಸಲು ಅಜಿತ್ ಸಾಕು ಎಂದಿದ್ದಾರೆ". ಎಂದು ರಾಜಮೌಳಿ ಆರ್‌ಆರ್‌ಆರ್‌ ಪ್ರಚಾರದ ವೇಳೆ ಹೇಳಿಕೆ ನೀಡಿದ್ದಾರೆ.

ತಲಾ ಬಿರುದಿನಿಂದ ಅಜಿತ್-ವಿಜಯ್ ಅಭಿಮಾನಿಗಳ ನಡುವೆ ಸಮರ!

ತಲಾ ಬಿರುದಿನಿಂದ ಅಜಿತ್-ವಿಜಯ್ ಅಭಿಮಾನಿಗಳ ನಡುವೆ ಸಮರ!

ತಮಿಳಿನಲ್ಲಿ ತಲಾ ಎನ್ನುವ ಬಿರುದು ನಟ ಅಜಿತ್‌ಗೆ ಮಾತ್ರವಲ್ಲ. ನಟಿ ವಿಜಯ್‌ಗೂ ಕೂಡ ಇದೆ. ತಮಿಳಿನಲ್ಲಿ ಅಜಿತ್ ಮತ್ತು ವಿಜಯ್ ಇಬ್ಬರ ಅಭಿಮಾನಿಗಳ ನಡುವೆ ಫ್ಯಾನ್‌ ವಾರ್ ನಡೆಯುತ್ತಲೇ ಇರುತ್ತದೆ. ಈ ಇಬ್ಬರು ಸ್ಟಾರ್‌ಗಳು ಕೂಡ ಆಗಾಗ ಸ್ಟಾರ್‌ ವಾರ್‌ನಿಂದಲೂ ಸುದ್ದಿ ಆಗುತ್ತಿರುತ್ತಾರೆ. ಈ ತಲಾ ಎನ್ನುವ ಬಿರುದು ಇವರ ಫ್ಯಾನ್‌ ವಾರ್‌ಗೆ ಕಾರಣ ಆದ ಉದಾಹಣೆಗಳು ಇದೆ. ಈಗ ಅಜಿತ್ ಈ ಬಿರುದು ಕೈ ಬಿಟ್ಟ ಕಾರಣ ಈಗ ಅದು ವಿಜಯ್‌ ಪಾಲಾಗಿದೆ.

ದೀನ ಚಿತ್ರದ ಬಳಿಕ ಅಜಿತ್‌ಗೆ ಸಿಕ್ಕ ಬಿರುದು 'ತಲಾ'!

ದೀನ ಚಿತ್ರದ ಬಳಿಕ ಅಜಿತ್‌ಗೆ ಸಿಕ್ಕ ಬಿರುದು 'ತಲಾ'!

ನಟ ಅಜಿತ್‌ಗೆ ತಲಾ ಎನ್ನುವ ಬಿರುದು 'ದೀನ' ರಿಲೀಸ್‌ ಆದಾಗ ನೀಡಲಾಗಿತ್ತು. ಅಜಿತ್‌ಗೆ 2001ರಲ್ಲಿ ತಲಾ ಎಂಬ ಬಿರುದನ್ನು ಅಭಿಮಾನಿಗಳು ನೀಡಿದ್ದರು. ಆ ಸಿನಿಮಾದಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರದ ಹೆಸರು 'ತಲಾ ಧೀನದಯಾಳ್' ಎಂದು ಇಡಲಾಗಿತ್ತು. ಆ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಅಜಿತ್ ಅವರನ್ನು ಅಭಿಮಾನಿಗಳು ತಲಾ ಅಜಿತ್ ಎಂದೇ ಕರೆಯಲು ಆರಂಭಿಸಿದರು. ಸಿನಿಮಾಗಳಲ್ಲಿ, ಮಾಧ್ಯಮಗಳಲ್ಲಿಯೂ ಅಜಿತ್ ಹೆಸರಿನ ಮುಂದೆ ತಲಾ ಎನ್ನುವ ಬಿರುದನ್ನು ಸೇರಿಲಾಗಿತ್ತು.

ಜನವರಿ 13ಕ್ಕೆ 'ವಲಿಮೈ' ರಿಲೀಸ್!

ಜನವರಿ 13ಕ್ಕೆ 'ವಲಿಮೈ' ರಿಲೀಸ್!

ನಟ ಅಜಿತ್‌ ಈಗ 'ವಲಿಮೈ' ಚಿತ್ರದ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. ಅಜಿತ್‌ ಅವರ ಆ್ಯಕ್ಷನ್‌ ಚಿತ್ರ 'ವಲಿಮೈ'. ಈಗಾಗಲೇ ಚಿತ್ರದ ಟೀಸರ್ ಕುತೂಹಲ ಹುಟ್ಟು ಹಾಕಿದೆ. ಅಜಿತ್ ಈ ಚಿತ್ರದಲ್ಲಿ ಮ್ತ್‌ ಆ್ಯಕ್ಷನ್ ಮಾಡಿದ್ದಾರೆ. ಜನವರಿ 13ಕ್ಕೆ 'ವಲಿಮೈ' ತೆರೆಗೆ ಬರಲಿದೆ.

More from Filmibeat

English summary
Director SS Rajamouli Admire Ajith Kumar Decision: Ajith Kumar Disowning Thala,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X