ವಿಡಿಯೋ: ವೇದಿಕೆ ಮೇಲೆ ನಟಿಯೊಂದಿಗೆ ನಿರ್ದೇಶಕನ ಅನುಚಿತ ವರ್ತನೆ

ನಿರ್ದೇಶಕನೊಬ್ಬ ತಮ್ಮ ಸಿನಿಮಾದ ನಾಯಕಿಯೊಂದಿಗೆ ಅನುಚಿತ ರೀತಿಯಲ್ಲಿ ವರ್ತಿಸಿರುವ ಘಟನೆ ತಮಿಳು ಚಿತ್ರರಂಗದಲ್ಲಿ ನಡೆದಿದೆ.

ತಮಿಳಿನ ಖ್ಯಾತ ನಟ ಸಿಂಭು ನಟನೆಯ 'ಈಶ್ವರನ್' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕ ಸುಸೀಂದ್ರನ್, ಸಿನಿಮಾದ ನಾಯಕಿ ನಿಧಿ ಅಗರ್ವಾಲ್ ಬಳಿ ಅನುಚಿತವಾಗಿ ವರ್ತಿಸಿರುವ ವಿಡಿಯೋ ಸಖತ್ ವೈರಲ್ ಆಗಿದೆ.

ವಿಡಿಯೋ ನೋಡಿದವರೆಲ್ಲ ನಿರ್ದೇಶಕ ಸುಸೀಂದ್ರನ್ ವರ್ತನೆಯನ್ನು ಖಂಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಸೀಂದ್ರನ್ ವಿರುದ್ಧ ಹಲವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಶ್ವರನ್ ಸಿನಿಮಾದ ಆಡಿಯೋ ಕಾರ್ಯಕ್ರಮಕ್ಕೆ ಸಿನಿಮಾದ ನಾಯಕಿ ನಿಧಿ ಅಗರ್ವಾಲ್ ಸಹ ಹೋಗಿದ್ದರು. ನಿಧಿ ಅವರನ್ನು ವೇದಿಕೆ ಮೇಲಕ್ಕೆ ಕರೆದು ಮಾತನಾಡುವಂತೆ ಕೋರಲಾಯಿತು. ನಿಧಿ ಮಾತನಾಡಲು ಮೈಕ್ ಬಳಿ ಹೋದಾಗ ಅಲ್ಲಿ ನಿರ್ದೇಶಕ ಸುಸೀಂದ್ರನ್ ಸಹ ಇದ್ದರು.

ಸಿಂಭು ಬಗ್ಗೆ ಮಾತನಾಡುವಂತೆ ಒತ್ತಾಯ

ಸಿಂಭು ಬಗ್ಗೆ ಮಾತನಾಡುವಂತೆ ಒತ್ತಾಯ

ನಿಧಿ ಮಾತು ಆರಂಭಿಸುತ್ತಿದ್ದಂತೆ, ಸುಸೀಂದ್ರನ್, 'ಸಿಂಭು ಮಾಮ ಬಗ್ಗೆ ಮಾತನಾಡು' ಎಂದಿದ್ದಾರೆ. ಅದಕ್ಕೆ ನಟಿ ನಿಧಿ, 'ಮಾತನಾಡುತ್ತೇನೆ' ಎಂದು, 'ನನಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದ' ಎಂದು ಸುಸೀಂದ್ರನ್ ಗೆ ಹೇಳುತ್ತಾರೆ. ಇದು ಒಪ್ಪದ ಸುಸೀಂದ್ರನ್, 'ನನ್ನ ಬಗ್ಗೆ ಮಾತನಾಡಿದರೆ ಜನ ಕೇಳುವುದಿಲ್ಲ, ಸಿಂಭುಮಾಮಾ ಬಗ್ಗೆ ಮಾತನಾಡು' ಎನ್ನುತ್ತಾರೆ.

'ಸಿಂಭು ಐ ಲವ್ ಯೂ' ಎನ್ನುವಂತೆ ಒತ್ತಾಯ

ನಿರ್ದೇಶಕರ ಒತ್ತಾಯದಿಂದ ಮುಜುಗರಕ್ಕೆ ಒಳಗಾಗಿ ಸುಮ್ಮನಾಗುವ ನಿಧಿಗೆ, 'ಸಿಂಭುಮಾಮ ಐ ಲವ್ ಯೂ' ಎಂದು ಹೇಳು' ಎಂದು ಒತ್ತಾಯಿಸುತ್ತಾರೆ ನಿರ್ದೇಶಕ ಸುಸೀಂದ್ರನ್. ಮುಜುಗರಕ್ಕೆ ಒಳಗಾಗುವ ನಿಧಿ ಹಾಗೆ ಹೇಳುವುದಿಲ್ಲ, ಆದರೂ ನಿರ್ದೇಶಕ ಸುಸೀಂದ್ರನ್ ಒತ್ತಾಯ ಮಾಡುತ್ತಾರೆ.

'ತಮಿಳಿನಲ್ಲಿ ಮಾತನಾಡು' ಎಂದು ಒತ್ತಾಯ

'ತಮಿಳಿನಲ್ಲಿ ಮಾತನಾಡು' ಎಂದು ಒತ್ತಾಯ

ಸಿನಿಮಾದ ಬಗ್ಗೆ ತಮಗೆ ದೊರೆತ ಅವಕಾಶದ ಬಗ್ಗೆ ನಿಧಿ ಮಾತು ಮುಂದುವರೆಸಿದ್ದಾರೆ. ಆಗ ಮತ್ತೆ ಮಧ್ಯೆ ಬಾಯಿ ಹಾಕುವ ನಿರ್ದೇಶಕ ಸುಸೀಂದ್ರನ್, 'ತಮಿಳಿನಲ್ಲಿ ಮಾತನಾಡು' ಎಂದು ತಾಕೀತು ಮಾಡುತ್ತಾರೆ. ತೆಲುಗು ಮೂಲದ ನಿಧಿ ತಮಿಳಿನಲ್ಲಿಯೇ ತುಸು ಮಾತನಾಡಿ, ತಮ್ಮ ಮಾತು ಮುಗಿಸುತ್ತಾರೆ.

ಸುಸೀಂದ್ರನ್ ವಿರುದ್ಧ ತೀವ್ರ ಆಕ್ರೋಶ

ಸುಸೀಂದ್ರನ್ ವಿರುದ್ಧ ತೀವ್ರ ಆಕ್ರೋಶ

ಸುಸೀಂದ್ರನ್ ನ ಈ ಅನುಚಿತ ವರ್ತನೆಯ ವಿಡಿಯೋ ಸಖತ್ ವೈರಲ್ ಆಗಿದ್ದು, ಸುಸೀಂದ್ರನ್ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸುಸೀಂದ್ರನ್ 'ಪಿಂಪ್' ರೀತಿ ವರ್ತಿಸುತ್ತಿದ್ದಾರೆ. ಮಹಿಳೆಯೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಆತನಿಗೆ ಗೊತ್ತಿಲ್ಲವೆಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ ನೆಟ್ಟಿಗರು.

More from Filmibeat

English summary
Director Suseenthiran miss behaved with actress Nidhi Agawral in Eeswaran movie audio launch program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X