For Quick Alerts
  ALLOW NOTIFICATIONS  
  For Daily Alerts

  ಇವಳೇ ನನ್ನ ಮುಂದಿನ ಮಕ್ಕಳ ತಾಯಿ: ಖ್ಯಾತ ನಟಿಯ ಫೋಟೊ ಹಾಕಿದ ನಿರ್ದೇಶಕ!

  |

  ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ನಡುವಿನ ಲವ್ವಿ ಡವ್ವಿ ಬಹಿರಂಗವಾಗಿರುವ ಸಂಗತಿ. ಇಬ್ಬರು ಕೆಲವು ಸಮಯಗಳಿಂದ ಡೇಟಿಂಗ್ ನಡೆಸುತ್ತಿದ್ದಾರೆ. 'ನಾನುಂ ರೌಡಿ ಧಾನ್' ಚಿತ್ರದಲ್ಲಿ ಜತೆಗೆ ಕೆಲಸ ಮಾಡುವ ಸಂದರ್ಭದಿಂದ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

  ವಿದೇಶದಿಂದ ಅಪ್ಪು ಜೊತೆ ಮಾತುಕತೆ ನಡೆಸಿದ ವಿಶೇಷ ಅಭಿಮಾನಿ | Puneeth Rajkumar

  ತಮ್ಮ ಸಂಬಂಧದ ಕುರಿತು ಇಬ್ಬರೂ ಬಹಿರಂಗವಾಗಿ ಹೇಳಿಕೊಳ್ಳದೆ ಇದ್ದರೂ ಅವರು ಒಂದೆರಡು ವರ್ಷಗಳಿಂದ ಪ್ರೀತಿಸುತ್ತಿರುವುದು ಖಾತರಿಯಾಗಿತ್ತು. ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಈ ಪ್ರೇಮ ಪ್ರಸಂಗದ ಸುಳಿವು ಸಿಗುತ್ತಿತ್ತು. ಈಗ ನಿರ್ದೇಶಕ ವಿಘ್ನೇಶ್ ಶಿವನ್ ಒಂದು ಹೆಜ್ಜೆ ಮುಂದಿರಿಸಿದ್ದಾರೆ. ಅವರ ಸಂಬಂಧ ಮತ್ತೊಂದು ಹಂತಕ್ಕೆ ಸಾಗಲಿದೆ ಎಂಬ ಸುಳಿವು ನೀಡಿದ್ದಾರೆ. ನಯನತಾರಾ ಅವರೊಂದಿಗೆ ಅಧಿಕೃತವಾಗಿ ಸಂಸಾರ ಆರಂಭಿಸುವ ಸಾಧ್ಯತೆ ಇದೆ. ಮುಂದೆ ಓದಿ...

  ವಿಘ್ನೇಶ್ ಶಿವನ್ ಫೋಟೊ

  ವಿಘ್ನೇಶ್ ಶಿವನ್ ಫೋಟೊ

  ಅಮ್ಮಂದಿರ ದಿನದ ಸಂದರ್ಭದಲ್ಲಿ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಾಯಿಯ ಜತೆಗಿನ ಫೋಟೊ ಹಂಚಿಕೊಂಡು ಶುಭ ಹಾರೈಸಿದ್ದರು. ಆದರೆ ವಿಘ್ನೇಶ್ ಶಿವನ್ ಹಾಕಿರುವ ಫೋಟೊ ಮತ್ತು ಬರಹ ವಿಭಿನ್ನವಾಗಿದೆ. ಆ ಕಾರಣದಿಂದ ಸಾಕಷ್ಟು ಚರ್ಚೆಗೂ ಒಳಗಾಗಿದೆ.

  ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!ಸಿಂಬು ಮತ್ತು ನಯನತಾರಾ ಬ್ರೇಕಪ್‌ಗೆ ಕಾರಣವಾಗಿದ್ದು ಮುತ್ತಿನ ಫೋಟೊ!

  ಭವಿಷ್ಯದ ಮಕ್ಕಳ ತಾಯಿ

  ಭವಿಷ್ಯದ ಮಕ್ಕಳ ತಾಯಿ

  ಸಮುದ್ರವೊಂದರ ತೀರದಲ್ಲಿ ಮಗು ಎತ್ತಿಕೊಂಡು ನಿಂತಿರುವ ನಯನತಾರಾ ಅವರ ಫೋಟೊವೊಂದನ್ನು ವಿಘ್ನೇಶ್ ಶಿವನ್ ಶೇರ್ ಮಾಡಿದ್ದಾರೆ. 'ನನ್ನ ಭವಿಷ್ಯದ ಮಕ್ಕಳ ತಾಯಿಯ ಕೈಯಲ್ಲಿರುವ ಈ ಪುಟಾಣಿ ಕಂದಮ್ಮನ ಅಮ್ಮನಿಗೆ ತಾಯಂದಿರ ದಿನದ ಶುಭಾಶಯ' ಎಂದು ಬರೆದಿದ್ದಾರೆ.

  ಸಂಸಾರದ ಸುಳಿವು

  ಸಂಸಾರದ ಸುಳಿವು

  ವಿಘ್ನೇಶ್ ಫೋಟೊ ಸಾಕಷ್ಟು ವೈರಲ್ ಆಗಿದ್ದು, ನಯನತಾರಾ ಮತ್ತು ವಿಘ್ನೇಶ್ ಅಭಿಮಾನಿಗಳು ಮುಗಿಬಿದ್ದು ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಏಕೆಂದರೆ ಈ ಫೋಟೊದ ಮೂಲಕ ತಾವಿಬ್ಬರೂ ಮದುವೆಯಾಗುತ್ತಿದ್ದೇವೆ ಮತ್ತು ಸಂಸಾರ ಮಾಡಲಿದ್ದೇವೆ ಎಂಬ ಸುಳಿವನ್ನು ವಿಘ್ನೇಶ್ ನೀಡಿದ್ದಾರೆ.

  'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ'ನನ್ನ ಸಂಸಾರ ಹಾಳು ಮಾಡಿದ್ದೇ ನಯನತಾರಾ': ಕಿಡಿಕಾರಿದ ಪ್ರಭುದೇವ ಮಾಜಿ ಪತ್ನಿ

  ಅಮ್ಮನ ಜತೆಗನ ಫೋಟೊ

  ಅಮ್ಮನ ಜತೆಗನ ಫೋಟೊ

  ಈ ಪೋಸ್ಟ್ ಹಾಕುವುದಕ್ಕೂ ಮುನ್ನ ವಿಘ್ನೇಶ್ ಅಮ್ಮಂದಿರ ದಿನದ ಇನ್ನೂ ಮೂರು ಪೋಸ್ಟ್‌ಗಳನ್ನು ಹಾಕಿದ್ದರು. ತಮ್ಮ ಅಮ್ಮನೊಂದಿಗಿನ ಫೋಟೊಗಳನ್ನು ಹಂಚಿಕೊಂಡಿರುವ ಅವರು, ಇನ್ನೊಂದು ಪೋಸ್ಟ್‌ನಲ್ಲಿ ನಯನತಾರಾ ಹಾಗೂ ಅವರ ಅಮ್ಮ ಜತೆಗಿರುವ ಫೋಟೊಗಳನ್ನು ಹಾಕಿದ್ದಾರೆ.

  ನಯನತಾರಾ ತಾಯಿಯ ಫೋಟೊ

  ನಯನತಾರಾ ತಾಯಿಯ ಫೋಟೊ

  'ಅಮ್ಮಂದಿರ ದಿನದ ಶುಭಾಶಯಗಳು ಮಿಸೆಸ್ ಕುರಿಯನ್. ಇಷ್ಟು ಸುಂದರವಾದ ಮಗುವಿಗೆ ಜನ್ಮ ನೀಡುವ ಮೂಲಕ ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮನ್ನು ನಾವು ತುಂಬಾ ಪ್ರೀತಿಸುತ್ತೇವೆ ಅಮ್ಮಾ' ಎಂದು ಅದರಲ್ಲಿ ಬರೆದಿದ್ದಾರೆ.

  ಲವ್ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಯನತಾರಾಲವ್ ಬ್ರೇಕ್ ಅಪ್ ಬಗ್ಗೆ ಮನಬಿಚ್ಚಿ ಮಾತನಾಡಿದ ನಟಿ ನಯನತಾರಾ

  English summary
  Tamil director Vignesh Shivan called actress Nayanthara as Mother of My Future Children on mother's day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X