ಅಮ್ಮ ಕೋಮಾಗೆ ಹೋಗಿ 6 ವರ್ಷ ಆಯ್ತು.. ಅಪ್ಪನಿಗೆ ನನ್ನ ಪೀರಿಯಡ್ಸ್ ಡೇಟ್ ಕೂಡ ಗೊತ್ತು; ದಿವ್ಯಾ ಸತ್ಯರಾಜ್
ತಮಿಳು ನಟ ಸತ್ಯರಾಜ್ ತೆಲುಗು, ಮಲಯಾಳಂ ಹಾಗೂ ಒಂದು ಕನ್ನಡ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರದ ಬಳಿಕ ಮತ್ತೆ ಚಿತ್ರರಂಗದಲ್ಲಿ ಅವರು ಬಹಳ ಸಕ್ರಿಯರಾಗಿಬಿಟ್ಟರು. ಅವರಿಗೆ ಸಬಿ ಎಂಬ ಮಗ ಹಾಗೂ ದಿವ್ಯಾ ಮಗಳು ಇದ್ದಾರೆ. ದಿವ್ಯಾ ಸತ್ಯರಾಜ್ ಸಂದರ್ಶನವೊಂದರಲ್ಲಿ ಮದುವೆ, ರಿಲೇಷನ್‌ಶಿಪ್, ಜೋತಿಷ್ಯದ ಬಗ್ಗೆ ಹೇಳಿದ್ದ ಮಾತುಗಳು ವೈರಲ್ ಆಗುತ್ತಿದೆ.
ಸತ್ಯರಾಜ್ ಪತ್ನಿ ಕಳೆದ 6 ವರ್ಷಗಳಿಂದ ಕೋಮಾದಲ್ಲಿ ಇದ್ದಾರೆ. ಹಾಗಾಗಿ ತಂದೆಗೆ ನಾನು ತಾಯಿಯಾಗಿ, ನನಗೆ ಅಮ್ಮ, ಅಪ್ಪ ಎರಡು ಆಗಿ ಅವರು ಇದ್ದಾರೆ ಎಂದು ದಿವ್ಯಾ ಹೇಳಿದ್ದಾರೆ. ನನ್ನ ಪೀರಿಯಡ್ಸ್ ಡೇಟ್ ಕೂಡ ಅವರಿಗೆ ಚೆನ್ನಾಗಿ ಗೊತ್ತು. ಅಷ್ಟರಮಟ್ಟಿಗೆ ಅವರು ನನ್ನ ಬಗ್ಗೆ ಕೇರ್ ತೆಗೆದುಕೊಳ್ಳುತ್ತಾರೆ ಎಂದು ದಿವ್ಯಾ ಹೇಳಿದ್ದಾರೆ.

ವೃತ್ತಿಯಲ್ಲಿ ನ್ಯೂಟ್ರಿಷಿಯನಿಸ್ಟ್ ಆಗಿರುವ ದಿವ್ಯಾ ಸತ್ಯರಾಜ್ ಇತ್ತೀಚೆಗೆ ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. ಕಳೆದೊಂದು ವರ್ಷದಿಂದ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಐಟಿ ವಿಭಾಗದ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಾಧ್ಯಮಗಳ ಮುಂದೆ ಆಕೆ ಬರುವುದು ಕಮ್ಮಿ. ಇತ್ತೀಚೆಗೆ Rednool ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅಂತರಾಳ ತೆರೆದಿಟ್ಟಿದ್ದಾರೆ.
"ಅಪ್ಪನ ಎತ್ತರ 6.2 ಅಡಿ.. ನನ್ನ ಎತ್ತರ 5.2 ಅಡಿ.. ಆದರೆ ಅವರಿಗೆ ನಾನೇ ತಾಯಿ.. ನಾನು ಅಪ್ಪನ ಪ್ರಿನ್ಸೆಸ್ ಅಲ್ಲ.. ನಾನೇ ಅವರಿಗೆ ಪೋಷಕಿ.. ನಾನೇ ಅವರನ್ನು ನಿಯಂತ್ರಿಸುತ್ತೀನಿ. ನಾನು ಬಹಳ ಕಟ್ಟುನಿಟ್ಟಿನ ಪೋಷಕಿ ಎನ್ನಬಹುದು.. 6 ವರ್ಷಗಳಿಂದ ಅಮ್ಮ ಕೋಮಾದಲ್ಲಿ ಇದ್ದಾರೆ. ಅಪ್ಪ ಸಿಂಗಲ್ ಪೇರೆಂಟ್ ಆಗಿ ಎಲ್ಲವನ್ನು ನಿಭಾಯಿಸುತ್ತಿದ್ದಾರೆ. ನಾನು ಅವರಿಗೆ ಸಿಂಗಲ್ ಪೇರೆಂಟ್.. ಇಬ್ಬರೂ ಒಬ್ಬರಿಗೊಬ್ಬರು ಸಿಂಗಲ್ ಪೇರೆಂಟ್ ಆಗಿ ಇದ್ದೀವಿ" ಎಂದು ನಮ್ಮ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ.

'ರಾಜ-ರಾಣಿ' ಚಿತ್ರದಲ್ಲಿ ಸತ್ಯರಾಜ್ ಹಾಗೂ ನಯನತಾರ ತಂದೆ- ಮಗಳಾಗಿ ನಟಿಸಿದ್ದರು. "ನಾವಿಬ್ಬರಯ 'ರಾಜ-ರಾಣಿ' ಚಿತ್ರದ ತಂದೆ, ಮಗಳ ರೀತಿ ಇರಲ್ಲ. ನಾನು ಟಾಮ್, ಅಪ್ಪ ಜೆರ್ರಿ.. ಅವರಿಗೆ ಕೋಪ ಬರಲ್ಲ, ನಾನೇ ಏನಾದರೂ ಕಾರಣ ಹುಡುಕಿ ಬೈಯ್ತೀನಿ. ನನ್ನ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಅಪ್ಪನಿಗೆ ಬಹಳ ಗೌರವವಿದೆ. ನನ್ನ ಕಾಲಿನ ಮೇಲೆ ನಾನು ನಿಂತುಕೊಳ್ಳಬೇಕು ಎಂದು ಬಯಸುತ್ತಾರೆ. ನನಗೆ ಬ್ರೇಕಪ್ ಆದಾಗ ಕೂಡ ಅಪ್ಪನಿಗೆ ಹೇಳಲಿಲ್ಲ.. ನನ್ನ ಪಾಡಿಗೆ ನಾನು ಅತ್ತು ಸುಮ್ಮನಾದೆ.. ಅವ್ರು ಕೇಳಲಿಲ್ಲ" ಎಂದು ದಿವ್ಯಾ ಸತ್ಯರಾಜ್ ಹೇಳಿದ್ದಾರೆ.
ನನ್ನ ಸ್ನೇಹಿತರಿಗೂ ಅವರು ಅಪ್ಪನ ಸಮಾನ.. ನನ್ನ ಸ್ನೇಹಿತರಿಗೆ ನನಗಿಂತ ಮುಂದೆ ಅಪ್ಪ ಫೋನ್ ಮಾಡಿ ಹುಟ್ಟುಹಬ್ಬಕ್ಕೆ ಶುಭ ಕೋರುತ್ತಾರೆ.. ಅಷ್ಟರಮಟ್ಟಿಗೆ ನಮ್ಮಿಬ್ಬರ ಬಾಂಧವ್ಯ ಇರುತ್ತೆ ಎಂದು ದಿವ್ಯಾ ಸತ್ಯರಾಜ್ ಹೇಳಿದ್ದಾರೆ. "ನಿನಗೆ ಪೀರಿಯಡ್ ಡೇಟ್ ಅಲ್ವಾ?? ಪ್ರಚಾರಕ್ಕೆ ಹೋಗಬೇಡ ಎಂದು ನೆನಪಿಸುತ್ತಾರೆ. ಹೊಟ್ಟೆನೋವಿಗೆ ಏನಾದರೂ ಮೆಡಿಸಿನ್ ತಗೊಂಡು ಹೋಗು.. ನನ್ನ ಬಗ್ಗೆ ಅವರಿಗೆ ಎಲ್ಲವೂ ಗೊತ್ತು.. ನನ್ನ ಸ್ನೇಹಿತರು, ನನ್ನ ಪೀರಿಯಡ್ಸ್ ಎಲ್ಲವೂ ಗೊತ್ತು.. ಪೀರಿಯಡ್ಸ್ ಡೇಟ್ ಕೂಡ ನೆನಪಿದೆ" ಎಂದು ತಿಳಿಸಿದ್ದಾರೆ.
ಸತ್ಯರಾಜ್ ಹಾಗೂ ದಿವ್ಯಾ ಡಿಎಂಕೆ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಸತ್ಯರಾಜ್ ಮಗ ಸಿಬಿ ಸತ್ಯರಾಜ್ ಮಾತ್ರ ಈ ಬಾರಿ ವಿಜಯ್ ಸ್ಥಾಪಿಸಿರುವ ಟಿವಿಕೆ ಪಕ್ಷವನ್ನು ಬೆಂಬಲಿಸಿದ್ದರು. ಟಿವಿಕೆ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ ಎಂದು ಪ್ರಚಾರ ಮಾಡಿದ್ದು ಅಚ್ಚರಿ ಮೂಡಿಸಿತ್ತು.


Click it and Unblock the Notifications