ನಾನು ಸತ್ತರೂ ಚಿತ್ರರಂಗದ ಹೀರೋಗಳನ್ನು ಮದುವೆಯಾಗುವುದಿಲ್ಲ, ಗುಡುಗಿದ ಖ್ಯಾತ ನಟಿ..!

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು.ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನು ಯಾರ ಜೊತೆಯಾದರೂ ಚೂರು ಸಲುಗೆಯಿಂದ ಮಾತನಾಡಿದರೆ ಸಾಕು ಬಣ್ಣದ ಪ್ರಪಂಚದಲ್ಲಿ ಸಂಬಂಧ ಕಟ್ಟಿಬಿಡುತ್ತಾರೆ.ಅದರಲ್ಲಿಯೂ ಒಂದೇ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರಂತೂ ಮುಗೀತು.

ಇಬ್ಬರ ಕುರಿತು ದಿನಕ್ಕೊಂದು ಸುದ್ದಿಯನ್ನು ಇಲ್ಲಿ ಅನೇಕರು ತೇಲಿ ಬಿಡುತ್ತಾರೆ. ಮಾನಸಿಕ ನೆಮ್ಮದಿಗೆ ಕೊಳ್ಳಿ ಇಡುತ್ತಾರೆ. ದಿವ್ಯಾ ಭಾರತಿ ಅವರ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ. ಹೌದು, ತಮಿಳಿನ ಬ್ಯಾಚುಲರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ದಿವ್ಯಾ ಭಾರತಿ ಆ ನಂತರ ಕಿಂಗ್ ಸ್ಟನ್ ಎಂಬ ಚಿತ್ರವನ್ನು ಮಾಡಿದರು. ವಿಶೇಷ ಅಂದರೆ ಈ ಎರಡು ಚಿತ್ರಗಳಲ್ಲಿ ತಮಿಳುನಾಡಿನ ಖ್ಯಾತ ಸಂಗೀತ ನಿರ್ದೇಶಕ ಮತ್ತು ನಟನಾಗಿರುವ ಜಿವಿ ಪ್ರಕಾಶ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದರು.

Divyabharathi denies rumors linking her to GV Prakash s divorce stating I would never date an actor

ಕಾಗೆ ಕೂರುವುದಕ್ಕೂ, ಕೊಂಬೆ ಮುರಿಯುವುದಕ್ಕೂ ಸರಿಹೋಯ್ತು ಎನ್ನುವಂತೆ ಇದೇ ಸಮಯದಲ್ಲಿ ಜಿವಿ ಪ್ರಕಾಶ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ತಮ್ಮ ಪತ್ನಿ ಸೈಂಧವಿ ಅವರಿಗೆ ವಿಚ್ಛೇದನ ನೀಡಲು ಜಿವಿ ಪ್ರಕಾಶ್ ಮುಂದಾದರು. ಚಿತ್ರರಂಗದಲ್ಲಿ ಗಾಯಕಿಯಾಗಿ ಕೂಡ ಗುರುತಿಸಿಕೊಂಡಿರುವ ಸೈಂಧವಿ ತಮ್ಮ ಪತಿ ಜಿವಿ ಪ್ರಕಾಶ್ ಅವರಿಂದ ದೂರವಾಗಲು ದಿವ್ಯಾ ಭಾರತಿ ಅವರೇ ಕಾರಣವೆಂದು ಜನ ಮಾತನಾಡಲು ಶುರು ಮಾಡಿದರು. ಸೋಶಿಯಲ್ ಮೀಡಿಯಾದಲ್ಲಿ ದಿವ್ಯಾ ಭಾರತಿ ಅವರನ್ನು ಟ್ರೋಲ್ ಕೂಡ ಮಾಡಿದರು.

ಇದರಿಂದ ನೊಂದು ಬೆಂದು ಹೋದ ದಿವ್ಯಾ ಭಾರತಿ ಆಗಲೇ ಸ್ಪಷ್ಟೀಕರಣವನ್ನು ಕೂಡ ನೀಡಿದ್ದರು. ಜಿವಿ ಪ್ರಕಾಶ್ ಮತ್ತು ಸೈಂಧವಿ ಅವರನ್ನು ಜೊತೆಯಲ್ಲಿ ನೋಡಲು ನನಗೆ ತುಂಬಾ ಇಷ್ಟ ಆದರೆ ಇದನ್ನು ಅರ್ಥ ಮಾಡಿಕೊಳ್ಳದ ಅನೇಕರು ಅವರಿಬ್ಬರ ದಾಂಪತ್ಯ ನನ್ನಿಂದ ಮುರಿದು ಬಿತ್ತು ಎಂದು ಮಾತನಾಡುತ್ತಿದ್ದಾರೆ ಎಂದು ಬೇಸರವನ್ನು ಹೊರ ಹಾಕಿದ್ದರು. ವಿಶೇಷವಾಗಿ ಹೆಣ್ಣು ಮಕ್ಕಳು ನನ್ನನ್ನೇ ಈ ವಿಚಾರದಲ್ಲಿ ವಿಲನ್ ಮಾಡುತ್ತಿದ್ದಾರೆ, ಬೇಕಾ ಬಿಟ್ಟಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಬ್ಯಾಚುಲರ್ ಚಿತ್ರದಲ್ಲಿ ನಮ್ಮ ಇಬ್ಬರ ಕೆಮೆಸ್ಟ್ರೀಯನ್ನು ಜನ ತುಂಬಾ ಮೆಚ್ಚಿಕೊಂಡಿದ್ದರು ಅದಕ್ಕೆ ಇಬ್ಬರ ವಿಚ್ಚೇದನಕ್ಕೆ ನನ್ನನ್ನು ಹೊಣೆಯಾಗಿಸುವುದು ಸರಿ ಅಲ್ಲ ಎಂದು ಹೇಳಿದ್ದರು.

ಈಗ ಜಿವಿ ಪ್ರಕಾಶ್ ಮತ್ತು ಸೈಂಧವಿ ಅಧಿಕೃತವಾಗಿ ದೂರವಾಗಿದ್ಧಾರೆ. ಮೊನ್ನೆ ಮೊನ್ನೆಯಷ್ಟೇ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರಂತೆ ಜೊತೆಯಲ್ಲಿ ನ್ಯಾಯಾಲಯಕ್ಕೆ ಒಂದೇ ಕಾರಿನಲ್ಲಿ ಬಂದಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಕೂಡ ಒಂದೇ ಕಾರಿನಲ್ಲಿ ಮರಳಿದ್ದಾರೆ. ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲಿಯೇ ಅನೇಕರು ಈಗ ಮತ್ತೊಮ್ಮೆ ದಿವ್ಯಾ ಭಾರತಿ ಅವರ ಬೆನ್ನು ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿಂದಿಸುತ್ತಿದ್ದಾರೆ. ತೀರಾ ಅಸಹ್ಯವಾಗಿ ಟ್ರೋಲ್ ಮಾಡುತ್ತಿದ್ದಾರೆ. ಸಹಜವಾಗಿ ಇದರಿಂದ ದಿವ್ಯಾ ಭಾರತಿ ಮತ್ತೊಮ್ಮೆ ನೊಂದುಕೊಂಡಿದ್ದಾರೆ. ಹತಾಶರಾಗಿದ್ದಾರೆ.

ಹೀಗಾಗಿಯೇ ಮತ್ತೊಮ್ಮೆ ಸ್ಪಷ್ಟೀಕರಣವನ್ನು ನೀಡಿರುವ ಜಿವಿ ಪ್ರಕಾಶ್ ಮತ್ತು ಸೈಂಧವಿ ದಾಂಪತ್ಯ ಮುರಿದು ಬೀಳಲು ನಾನು ಕಾರಣ ಅಲ್ಲ ಎಂದು ಹೇಳಿದ್ದಾರೆ. ನಾನು ಸತ್ತರೂ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡವರನ್ನು ಪ್ರೀತಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ದಿವ್ಯಾ ಭಾರತಿ ಬೇರೆಯವರ ವ್ಯೆಯಕ್ತಿಕ ಬದುಕಿನ ವಿಚಾರದಲ್ಲಿ ನನ್ನ ಹೆಸರನ್ನು ಸುಖಾಸುಮ್ಮನೆ ಎಳೆದು ತರಲಾಗುತ್ತಿದೆ ಎಂದು ಹೇಳಿದ್ಧಾರೆ. ಜಿವಿ ಪ್ರಕಾಶ್ ಮತ್ತು ನನ್ನ ಕುರಿತು ಹರಡಿರುವ ಸುದ್ದಿಗಳೆಲ್ಲವೂ ಆಧಾರ ರಹಿತ ಎಂದು ಹೇಳಿರುವ ದಿವ್ಯಾ ಭಾರತಿ ನಾನು ನಟರ ಜೊತೆ ಅದರಲ್ಲಿಯೂ ಮದುವೆಯಾದವರ ಜೊತೆ ಯಾವತ್ತು ಪ್ರೀತಿ-ಪ್ರೇಮ ಎಂದು ತಿರುಗಾಡುವುದಿಲ್ಲ, ಅವರ ಜೊತೆ ಡೇಟಿಂಗ್ ಮಾಡಲು ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಹೇಳಿದ್ದಾರೆ.

ಸುಳ್ಳು ಸುದ್ದಿಗಳಿಗೆಲ್ಲ ಪ್ರತಿಕ್ರಿಯೆಯನ್ನು ನೀಡಬಾರದು ಎಂದು ನಾನು ಸುಮ್ಮನಾಗಿದ್ದೆ ಆದರೆ ಈಗ ವಿಚಾರ ಗಂಭೀರವಾಗುತ್ತಿದೆ, ಮೀತಿ ಮೀರುತ್ತಿದೆ ಎಂದು ಹೇಳಿರುವ ದಿವ್ಯಾ ಭಾರತಿ ನಾನು ಒಬ್ಬಳು ಸ್ವಾವಲಂಬಿ ಹೆಣ್ಣು ನಿಮ್ಮ ಗಾಸಿಪ್‌ಗಳಿಂದ ನನ್ನ ವ್ಯಕ್ತಿತ್ವ ರೂಪಿಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ನಕಾರಾತ್ಮಕ ವಿಚಾರಗಳನ್ನು ಹರಡುವ ಬದಲು ಉತ್ತಮ ಸಮಾಜ ನಿರ್ಮಾಣದತ್ತ ಗಮನ ವಹಿಸೋಣ ಎಂದು ಹೇಳಿರುವ ದಿವ್ಯಾ ಭಾರತಿ ಈ ವಿಚಾರದಲ್ಲಿ ಇದೇ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಕೂಡ ಹೇಳಿದ್ದಾರೆ.

ದಿವ್ಯಾ ಭಾರತಿ ಹೀಗೆ ಸ್ಪಷ್ಟೀಕರಣವನ್ನು ನೀಡಿದರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಇನ್ನು ಚರ್ಚೆ ನಿಂತಿಲ್ಲ. ಈಗಲೂ ಕೂಡ ಅನೇಕರು ದಿವ್ಯಾ ಭಾರತಿ ಅವರಿಂದನೇ ಜಿವಿ ಪ್ರಕಾಶ್ ಮತ್ತು ಸೈಂಧವಿ ಅವರ ದಾಂಪತ್ಯ ಮುರಿದು ಬೀಳಲು ದಿವ್ಯಾಭಾರತಿ ಅವರೇ ಕಾರಣವೆನ್ನುತ್ತಿದ್ಧಾರೆ. ಮದುವೆಯಾಗಿರುವ ನಟನ ಜೊತೆ ನಾನು ಯಾವತ್ತು ಡೇಟಿಂಗ್ ಹೊಗಲಾರೆ ಎಂದು ಹೇಳಿರುವ ಇದೇ ದಿವ್ಯಾ ಭಾರತಿ ಮುಂದೊಂದು ದಿನ ಜಿವಿ ಪ್ರಕಾಶ್ ಅವರನ್ನೇ ಮದುವೆಯಾಗುತ್ತಾರೆ ನೋಡುತ್ತೀರಿ ಎಂದು ಭವಿಷ್ಯವನ್ನು ಹೇಳುತ್ತಿದ್ದಾರೆ.

ಅಂದ್ಹಾಗೇ ಜಿವಿ ಪ್ರಕಾಶ್ ಅವರಿಂದ ದೂರವಾದ ಸೈಂಧವಿ ಅನಿಯನ್ ಚಿತ್ರದ ಮೂಲಕ 2005ರಲ್ಲಿ ಗಾಯಕಿಯಾಗಿ ವೃತ್ತಿ ಜೀವನ ಶುರು ಮಾಡಿದರು. ಸೈಂಧವಿ ಇಲ್ಲಿಯವರೆಗೆ ಹಲವಾರು ಹಾಡುಗಳನ್ನು ಹಾಡಿದ್ದಾರೆ. ಕೇವಲ ತಮಿಳು ಮಾತ್ರವಲ್ಲ ತೆಲುಗಿನಲ್ಲಿ ಕೂಡ ಹಾಡು ಹಾಡಿರುವ ಸೈಂಧವಿ ಕನ್ನಡದಲ್ಲಿ ಸೈಕೋ, ಉಲ್ಲಾಸ ಉತ್ಸಾಹ ಚಿತ್ರಗಳ ಹಾಡನ್ನು ಹಾಡಿದ್ದಾರೆ. ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದಲ್ಲಿನ 'ಮತ್ತೆ ನೋಡಬೇಡ' ಹಾಡಿಗೆ ಕೂಡ ಧ್ವನಿಯಾಗಿದ್ದಾರೆ.

ಇನ್ನು ಸದ್ಯ ಗಂಡ ಹೆಂಡತಿಯ ಸಂಬಂಧ ಕಡಿದುಕೊಳ್ಳಲು ಮುಂದಾಗಿರುವ ಜಿವಿ ಪ್ರಕಾಶ್ ಮತ್ತು ಸೈಂಧವಿ ಮುಂಬರುವ ದಿನಗಳಲ್ಲಿ ವೃತ್ತಿ ಜೀವನದಲ್ಲಿ ಜೊತೆಯಾಗಿ ಕೆಲಸ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದ್ಧಾರೆ, ಇಬ್ಬರು ಜೊತೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

ವಿಶೇಷ ಅಂದರೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಜಿವಿ ಪ್ರಕಾಶ್ ಮತ್ತು ಸೈಂಧವಿ ಬಾಲ್ಯದ ಸ್ನೇಹಿತರು. ಜೊತೆ ಜೊತೆಯಾಗಿಯೇ ಬೆಳೆದವರು. ಜೊತೆ ಜೊತೆಯಾಗಿ ಕನಸು ಕಂಡವರು. ಚಿತ್ರರಂಗಕ್ಕೆ ಕೂಡ ಹೆಚ್ಚು ಕಡಿಮೆ ಒಂದೇ ಸಮಯಕ್ಕೆ ಎಂಟ್ರಿಯನ್ನು ನೀಡಿದವರು. ಹೀಗಾಗಿ ಇಬ್ಬರು ಮದುವೆಯಾದಾಗ ಅನೇಕರು ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ತನ್ನ ಬೆಸ್ಟ್‌ ಫ್ರೆಂಡ್‌ನ ಮದುವೆಯಾಗುತ್ತಿರುವ ಹಿನ್ನೆಲೆ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿರುತ್ತೆ ಎಂದು ಅಂದುಕೊಂಡಿದ್ದರು.

ಆದರೆ ಅಂದುಕೊಂಡಿದ್ದು ಒಂದು. ಆಗಿದ್ದು ಇನ್ನೊಂದು. ಸದ್ಯ ನಾನೊಂದು ತೀರ ನೀನೊಂದು ತೀರ ಎನ್ನುತ್ತಿರುವ ಇಬ್ಬರಿಗೆ ಇಬ್ಬರಿಗೆ ಅನ್ವಿ ಎಂಬ ಮಗಳಿದ್ದು ಡಿವೋರ್ಸ್ ನಂತರ ಪುತ್ರಿಯನ್ನು ನೋಡಿಕೊಳ್ಳುವ ಜವಾಬ್ಧಾರಿಯನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವುದಕ್ಕೆ ಉತ್ತರ ಇನ್ನು ಸಿಕ್ಕಿಲ್ಲ. ಇನ್ನು ಇದರ ನಡುವೆ ಜಿವಿ ಪ್ರಕಾಶ್ ಅವರಿಂದ ಸೈಂಧವಿ ಎಷ್ಟು ಹಣವನ್ನು ಜೀವನಾಂಶದ ರೂಪದಲ್ಲಿ ಪಡೆಯಬಹುದು ಎನ್ನುವ ಚಿಂತೆ ಕೂಡ ಅನೇಕರನ್ನು ಕಾಡುತ್ತಿದೆ. ಕಳೆದ ಕೆಲ ವರ್ಷಗಳಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದರು ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಒಟ್ನಲ್ಲಿ ಸದ್ಯ ಜಿವಿ ಪ್ರಕಾಶ್ ಮತ್ತು ಸೈಂಧವಿ ದಾಂಪತ್ಯ ಮುರಿದು ಬೀಳಲು ನಾನು ಕಾರಣವಲ್ಲ ಎಂದು ದಿವ್ಯಾ ಭಾರತಿ ಹೇಳಿದ್ಧಾರೆ. ನಾನು ಇದೇ ಕೊನೆಯ ಬಾರಿ ಈ ವಿಚಾರದ ಕುರಿತು ಸ್ಪಷ್ಟೀಕರಣ ಕೊಡುತ್ತಿರುವುದು ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ದಿವ್ಯಾ ಭಾರತಿ ಮತ್ತು ಜಿವಿ ಪ್ರಕಾಶ್ ಅಂತರವನ್ನು ಕಾಪಾಡಿಕೊಳ್ಳುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

divyabharathi-denies-rumors-linking-her-to-gv-prakashs-divorce-stating-i-would-never-date-an-actor

More from Filmibeat

Read more about: divorce filmibeat news kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X