ಇಬ್ಬರೇ ಹೆಣ್ಣು ಮಕ್ಕಳು.. ಕೋಟಿ ಕೋಟಿ ಆಸ್ತಿ.. ಅಳಿಯನಿಗೆ ಅರ್ಜುನ್ ಸರ್ಜಾ ವರದಕ್ಷಿಣೆ ಏನು?

ಬಹುಭಾಷಾ ನಟ ಅರ್ಜುನ್ ಸರ್ಜಾ ಇತ್ತೀಚೆಗೆ ತಮ್ಮ ಮಗಳು ಐಶ್ವರ್ಯಾ ಮದುವೆ ಮಾಡಿ ಸಂಭ್ರಮಿಸಿದ್ದಾರೆ. ಸರಳವಾಗಿ ತಾವು ಕಟ್ಟಿಸಿರುವ ಆಂಜನೇಯನ ದೇವಸ್ಥಾನದಲ್ಲಿ ಕೆಲವೇ ಆಪ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೀತು. ಜೂನ್ 10ರಂದು ಐಶ್ವರ್ಯ- ಉಮಾಪತಿ ರಾಮಯ್ಯ ಹಸೆಮಣೆ ಏರಿದ್ದರು.

ಎರಡೂ ಕುಟುಂಬಗಳ ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿತ್ತು. ಬಳಿಕ ಚಿತ್ರರಂಗದ ಆಪ್ತರಿಗೆ ಆರತಕ್ಷಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದಿಂದ ಕೆಲವರು ಹೋಗಿ ನವ ವಧು-ವರರನ್ನು ಹರಸಿ ಬಂದಿದ್ದರು. ಅರ್ಜುನ್ ಸರ್ಜಾ ತಾವು ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಂದಿದ್ದ ಉಮಾಪತಿ ಜೊತೆಗೆ ಮಗಳ ಮದುವೆ ಮಾಡಿ ಮುಗಿಸಿದ್ದಾರೆ.

Do you know how much Arjuna sarja gave as dowry to his son in law umapathy

ಕಳೆದೊಂದು ವಾರದಿಂದ ಕಾಲಿವುಡ್‌ನಲ್ಲಿ ಐಶ್ವರ್ಯ ಸರ್ಜಾ ಹಾಗೂ ಉಮಾಪತಿ ರಾಮಯ್ಯ ಮದುವೆ ವಿಚಾರ ಹಾಟ್ ಟಾಪಿಕ್ ಆಗಿದೆ. ಇನ್ನು ಅರ್ಜುನ್ ಸರ್ಜಾ ವರದಕ್ಷಿಣೆಯಾಗಿ ಅಳಿಯನಿಗೆ ಏನೆಲ್ಲಾ ಕೊಟ್ಟರು ಎನ್ನುವ ಬಗ್ಗೆಯೂ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ತಮಿಳು ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ಕೆಲ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆಕ್ಷನ್‌ ಕಿಂಗ್‌ಗೆ ಐಶ್ವರ್ಯ ಹಾಗೂ ಅಂಜನಾ ಎನ್ನುವ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದಾರೆ.

ಮಕ್ಕಳಂದ್ರೆ ಅರ್ಜುನ್‌ ಸರ್ಜಾಗೆ ಬಹಳ ಪ್ರೀತಿ. ಐಶ್ವರ್ಯಗಾಗಿ 'ಪ್ರೇಮಬರಹ' ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದರು. ತಮಿಳಿಗೂ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಮೈಸೂರಿನ ಮಧುಗಿರಿ ಮೂಲದ ಅರ್ಜುನ್ ಸರ್ಜಾ ತಂದೆ ಶಕ್ತಿ ಪ್ರಸಾದ್ ಹಾದಿಯಲ್ಲೇ ಚಿತ್ರರಂಗಕ್ಕೆ ಬಂದವರು. 'ಸಿಂಹದ ಮರಿ ಸೈನ್ಯ' ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

Do you know how much Arjuna sarja gave as dowry to his son in law umapathy

ಕನ್ನಡದಲ್ಲಿ ದೊಡ್ಡ ಸಕ್ಸಸ್ ಸಿಗದೇ ಇದ್ದಾಗ ಕಾಲಿವುಡ್ ಕಡೆ ಮುಖ ಮಾಡಿದ್ದರು. 'ನಂಡ್ರಿ' ಎನ್ನುವ ತಮಿಳು ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಚೆನ್ನೈನಲ್ಲೇ ಸೆಟ್ಲ್ ಆದರು. ಅರ್ಜುನ್ ಸರ್ಜಾ ಬಹಳ ಹಿಂದೆಯೇ ಸಾಕಷ್ಟು ಆಸ್ತಿ ಸಂಪಾಸಿದ್ದರು. ಸಿನಿಮಾಗಳಿಂದ ಬಂಡ ಸಂಭಾವನೆಯನ್ನು ಭೂಮಿಯ ಮೇಲೆ ಹಾಕಿದ್ದರು. ಅಂದರೆ ಸಾಕಷ್ಟು ಜಮೀನು ಕೊಂಡುಕೊಂಡಿದ್ದರು.

ಆಗ ಅರ್ಜುನ್ ಸರ್ಜಾ ಖರೀದಿಸಿದ್ದ ಜಮೀನಿಗೆ ಈ ಭಾರೀ ಡಿಮ್ಯಾಂಡ್ ಬಂದಿದೆ. ಅದೇ ರೀತಿ ಬೇರೆ ಬೇರೆ ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದರು. ನೂರಾರು ಕೋಟಿ ರೂ. ಆಸ್ತಿ ಕೂಡಿಟ್ಟಿದ್ದಾರೆ ಎನ್ನಲಾಗುತ್ತದೆ. ಇಬ್ಬರೇ ಹೆಣ್ಣು ಮಕ್ಕಳು ಇರುವುದರಿಂದ ಮಕ್ಕಳಿಗೆ ಆ ಆಸ್ತಿಯೆಲ್ಲಾ ಸಿಗುತ್ತದೆ. ಹಾಗಾಗಿ ಅಳಿಯನಿಗೂ ದುಬಾರಿ ಉಡುಗೊರೆಗಳನ್ನೇ ಆಕ್ಷನ್ ಕಿಂಗ್ ನೀಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ.

ಅಳಿಯನಿಗೆ ದೊಡ್ಡ ಬಂಗಲೆಯನ್ನು ಅರ್ಜುನ್ ಸರ್ಜಾ ವರದಕ್ಷಿಣೆಯಾಗಿ ನೀಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಗುಲ್ಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. 'ಪಟ್ಟಾತು ಯಾನೆ' ಸಿನಿಮಾದಲ್ಲಿ ಐಶ್ವರ್ಯ ನಟಿಸಿದ್ದರು. ಬಳಿಕ 'ಪ್ರೇಮಬರಹ' ಸಿನಿಮಾದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

'ಅದಾಗಪ್ಪತ್ತು ಮಗಜನಂಗಳೆ', 'ಮಣಿಯಾರ್ ಕುಟುಂಬಮ್', 'ತಿರುಮನಂ', 'ಥನ್ನ ವಂಡಿ' ಎನ್ನುವ ಸಿನಿಮಾಗಳಲ್ಲಿ ಅರ್ಜುನ್ ಸರ್ಜಾ ಅಳಿಯ ಉಮಾಪತಿ ರಾಮಯ್ಯ ನಟಿಸಿದ್ದಾರೆ. ಮುಂದೆ ಐಶ್ವರ್ಯಾ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಅರ್ಜುನ್ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ಮದುವೆಯಾಗುವ ಹುಡುಗನನ್ನು ಆಯ್ಕೆ ಮಾಡಿಕೊಂಡ ಐಶ್ವರ್ಯಾ ಮುಂದೆ ಸಿನಿಮಾಗಳಲ್ಲಿ ನಟಿಸಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುತ್ತಾಳೆ ಎಂದಿದ್ದಾರೆ.

More from Filmibeat

English summary
Aishwaya Sarja- Umapathy ramaiah marriage- arjun sarja gifts and dowry to couple;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X