ಶ್ರುತಿ ಹಾಸನ್‌ಗೆ ತನ್ನ ಬಾಯ್‌ಫ್ರೆಂಡ್ ಹೂಸು ಹಾಗೂ ಕಣ್ಣುಗಳು ಅಂದ್ರೆ ಇಷ್ಟವಂತೆ: ಇದ್ಯಾವ ಸೀಮೆ ಇಷ್ಟ ಸ್ವಾಮಿ?

By ಫಿಲ್ಮಿಬೀಟ್ ಡೆಸ್ಕ್

ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ಸಿನಿಮಾಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಹಾಗೇ ಬಾಯ್‌ಫ್ರೆಂಡ್ ವಿಚಾರದಲ್ಲೂ ಅಷ್ಟೇ ಸುದ್ದಿಯಲ್ಲಿ ಇರುತ್ತಾರೆ. ಬಾಯ್ ಫ್ರೆಂಡ್ ವಿಚಾರದಲ್ಲಿ ದಕ್ಷಿಣ ಭಾರತದಲ್ಲೇ ಬೋಲ್ಡ್ ಈಕೆ ನಟಿ ಅನ್ನೋದರಲ್ಲಿ ಡೌಟೇ ಇಲ್ಲ.

ಶ್ರುತಿ ಹಾಸನ್ ಹಾಗೂ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಇಬ್ಬರೂ ಫುಲ್ ಬಿಂದಾಸ್. ಸೋಶಿಯಲ್ ಮೀಡಿಯಾದಲ್ಲಿ ತಮಗೆ ಅನಿಸಿದ್ದನ್ನು ಹಂಚಿಕೊಳ್ಳುತ್ತಾರೆ. ಇಬ್ಬರ ಸಂಬಂಧವನ್ನು ಮುಚ್ಚಿಡುವ ಸಾಹಸಕ್ಕೆ ಹೋಗೇ ಇಲ್ಲ. ಕೆಲವೊಮ್ಮ ಇಬ್ಬರ ಖಾಸಗಿ ವಿಷಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದೆ.

Do you know what Shruti Haasan likes the most about her boyfriend Santanu Hazarika

ನೆಟ್ಟಿಗರಿಗೂ ಶ್ರುತಿ ಹಾಸನ್ ಹಾಗೂ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಬಗ್ಗೆ ಚೆನ್ನಾಗಿಯೇ ಗೊತ್ತಿದೆ. ಯಾಕಂದ್ರೆ ಸೋಶಿಯಲ್ ಮೀಡಿಯಾ ಹಾಗೂ ಪಬ್ಲಿಕ್ ಪ್ಲೇಸ್‌ನಲ್ಲಿ ತಮ್ಮಿಬ್ಬರ ಪ್ರೀತಿ, ರೊಮ್ಯಾನ್ಸ್ ಬಗ್ಗೆ ನಿರ್ಭೀತಿಯಿಂದ ಹಂಚಿಕೊಳ್ಳುತ್ತಲೇ ಇರುತ್ತಾರೆ. ಈಗಲೂ ಅಷ್ಟೇ ಬಾಯ್‌ಫ್ರೆಂಡ್ ಬಗ್ಗೆ ಏನು ಇಷ್ಟ ಅನ್ನೋದನ್ನು ಶೇರ್ ಮಾಡಿಕೊಂಡಿದ್ದಾರೆ. ಅದೇ ಈಗ ನೆಟ್ಟಿಗರನ್ನು ತಲೆಕೆಡಿಸಿದೆ.

ಬಾಯ್‌ಫ್ರೆಂಡ್ ಹಾಡಿ ಹೊಗಳಿದ ಶ್ರುತಿ ಹಾಸನ್

ಶ್ರುತಿ ಹಾಸನ್ ಇತ್ತೀಚೆಗೆ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತನ್ನ ಬಾಯ್‌ಫ್ರೆಂಡ್ ಶಾಂತನು ಹಜಾರಿಕಾ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದರು. ಇದೇ ವೇಳೆ ಬಾಯ್‌ಫ್ರೆಂಡ್ ಅನ್ನು ಹಾಡಿ ಹೊಗಳಿದ್ದರು. ಪ್ರಿಯತಮನ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ, ಪ್ರತಿಭೆ, ಪ್ರೀತಿ, ಕಾಳಜಿ ಬಗ್ಗೆ ಮನ ಬಿಚ್ಚಿ ಮಾತಾಡಿದ್ದರು. ಇವೆಲ್ಲವೂ ಇಷ್ಟ ಅಂತ ಹೇಳಿದ್ದರು. ಇಷ್ಟೇ ಹೇಳಿದ್ದರೆ ನೆಟ್ಟಿಗರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ಒಂದೇ ಒಂದು ವಿಷಯ ನೆಟ್ಟಿಗರಿಗೆ ಹಿಡಿಸಿಲ್ಲ.

ಬಾಯ್‌ಫ್ರೆಂಡ್ ಕಣ್ಣು- ಹೂಸು ಇಷ್ಟ

ಇದೇ ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ. ಶ್ರುತಿ ಹಾಸನ್ ತನ್ನ ಬಾಯ್‌ಫ್ರೆಂಡ್ ಬಗ್ಗೆ ಹೇಳುವಾಗ ಶಾಂತನೂ ಹಜಾರಿಕಾ ಕಣ್ಣು ಹಾಗೂ ಹೂಸು ಇಷ್ಟ ಎಂದು ಹೇಳಿ ಗೇಲಿ ಮಾಡಿದ್ದಾರೆ. ಇದು ನೆಟ್ಟಿಗರಿಗೆ ಹಿಡಿಸಿಲ್ಲ. ಎಲ್ಲಾ ಓಕೆ ಇಂತಹ ಇಷ್ಟ ಅಂತ ಕಮೆಂಟ್‌ಗಳನ್ನೂ ಮಾಡಿದ್ದರು. ಆಗಲೇ ಹೇಳಿದ ಶ್ರುತಿ ಹಾಸನ್ ಹಾಗೂ ಶಾಂತನೂ ಹಜಾರಿಕಾ ಇಬ್ಬರೂ ಬೋಲ್ಡ್ ಕಪಲ್. ತಮಗೆ ತೋಚಿದ್ದನ್ನು ನೇರವಾಗಿ ಹೇಳುತ್ತಾರೆ.


ಇಬ್ಬರ ಲವ್ ಸ್ಟೋರಿ ಶುರುವಾಗಿದ್ದೇಗೆ?

ಶ್ರುತಿ ಹಾಸನ್ ಹಾಗೂ ಶಾಂತನೂ ಹಜಾರಿಕಾ ಇಬ್ಬರೂ ಚರ್ಚೆಯಲ್ಲಿರುವ ಜೋಡಿ. ಇಬ್ಬರ ಲವ್ ಸ್ಟೋರಿ ಕೂಡ ಅಷ್ಟೇ ಬೋಲ್ಡ್ ಆಗಿದೆ. 2018ರಲ್ಲಿ ಶ್ರುತಿ ಹಾಸನ್ ತನ್ನ ಪ್ರಿಯತಮನನ್ನು ಭೇಟಿಯಾಗಿದ್ದರು. ಆ ಸ್ನೇಹ ಪ್ರೀತಿಗೆ ತಿರುಗಿದಾಗ ಮೊದಲು ಪ್ರಪೋಸ್ ಮಾಡಿದ್ದು ಕೂಡ ಇವರೇ. ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವ ಶ್ರುತಿ ಹಾಸನ್ ಆಗಾಗ ತನ್ನ ಬಾಯ್‌ಫ್ರೆಂಡ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಳ್ಳುತ್ತಲೇ ಇರುತ್ತಾರೆ.

ಶ್ರುತಿ ಹಾಸನ್ ಫುಲ್ ಬ್ಯುಸಿ

ಶ್ರುತಿ ಹಾಸನ್ ಕೈಯಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿವೆ. ಪ್ರಶಾಂತ್ ನೀಲ್ ನಿರ್ದೇಶಿಸಿರುವ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ಸೆಪ್ಟೆಂಬರ್ 28ರಂದು ಬಿಡುಗಡೆಯಾಗಲಿದೆ. ಇದೊಂದಿಗೆ ನಾನಿ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

More from Filmibeat

English summary
Shruti Haasan likes the most about her boyfriend Santanu Hazarika.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X