For Quick Alerts
  ALLOW NOTIFICATIONS  
  For Daily Alerts

  ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಡಾ ರಾಜ್ ಕುಮಾರ್ ಮೊಮ್ಮಗಳು

  |

  ಡಾ ರಾಜ್ ಕುಮಾರ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದಾರೆ. ಸೂರಜ್ ಗೌಡ ನಾಯಕನಟನಾಗಿ ಅಭಿನಯಿಸಿರುವ 'ನಿನ್ನ ಸನಿಹಕೆ' ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಬೆಳ್ಳಿ ಪರದೆ ಮೇಲೆ ಬರಲಿದ್ದಾರೆ. 'ನಿನ್ನ ಸನಿಹಕೆ' ಸಿನಿಮಾ ಆಗಸ್ಟ್ 20 ರಂದು ತೆರೆಗೆ ಬರಲು ಸಜ್ಜಾಗಿದೆ ಎಂದು ಹೇಳಲಾಗುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಸಿನಿಮಾ ರಿಲೀಸ್ ಮಾಡುವ ಚಿಂತನೆ ನಡೆದಿದೆ.

  ಚೊಚ್ಚಲ ಸಿನಿಮಾ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ರಾಜ್ ಮೊಮ್ಮಗಳು ತಮಿಳು ಇಂಡಸ್ಟ್ರಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ತಮಿಳಿನ ಕೆಲವು ವೆಬ್‌ಸೈಟ್‌ಗಳು ಹಾಗು ತಮಿಳಿನ ಕೆಲವು ಪತ್ರಕರ್ತರು ವರದಿ ಮಾಡಿರುವಂತೆ ಸದ್ಯದಲ್ಲೇ ಧನ್ಯಾ ರಾಮ್ ಕುಮಾರ್ ತಮಿಳು ಸಿನಿಮಾ ಆರಂಭಿಸಲಿದ್ದಾರೆ. ಅಷ್ಟಕ್ಕೂ, ಯಾವುದು ಆ ಚಿತ್ರ? ಮುಂದೆ ಓದಿ...

  'ಅಂಡರ್ ವರ್ಲ್ಡ್' ಹುಡುಗಿಯ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು'ಅಂಡರ್ ವರ್ಲ್ಡ್' ಹುಡುಗಿಯ ಸೌಂದರ್ಯಕ್ಕೆ ಮನಸೋತ ನೆಟ್ಟಿಗರು

  ತಮಿಳು ಇಂಡಸ್ಟ್ರಿಗೆ ಎಂಟ್ರಿ?

  ತಮಿಳು ಇಂಡಸ್ಟ್ರಿಗೆ ಎಂಟ್ರಿ?

  ನಟ ರಾಮ್ ಕುಮಾರ್ ಅವರ ಪುತ್ರಿ ಧನ್ಯಾ ರಾಮ್ ಕುಮಾರ್ ತಮಿಳು ಇಂಡಸ್ಟ್ರಿಗೆ ಎಂಟ್ರಿಯಾಗುತ್ತಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ. ಅದರೆ, ಯಾವ ಸಿನಿಮಾ, ಯಾರು ನಿರ್ದೇಶಕ ಸೇರಿದಂತೆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕಿಲ್ಲ. ಈ ಕುರಿತು ಶೀಘ್ರದಲ್ಲೇ ವಿವರ ಸಿಗಲಿದೆ ಎಂದಷ್ಟೇ ಸುದ್ದಿ ಚರ್ಚೆಯಲ್ಲಿದೆ. ಈ ಕುರಿತು ತಮಿಳಿನ ಚಿತ್ರ ವಿಶ್ಲೇಷಕ ಕೌಶಿಕ್ ಸಹ ವರದಿ ಮಾಡಿದ್ದಾರೆ.

  ರಜನಿ ಜೊತೆ ಧನ್ಯಾ ರಾಮ್ ಕುಮಾರ್ ಫೋಟೋ

  ರಜನಿ ಜೊತೆ ಧನ್ಯಾ ರಾಮ್ ಕುಮಾರ್ ಫೋಟೋ

  ಡಾ ರಾಜ್ ಕುಮಾರ್ ಕುಟುಂಬ ಮತ್ತು ನಟ ರಜನಿಕಾಂತ್ ನಡುವೆ ಉತ್ತಮ ಬಾಂಧವ್ಯ ಇದೆ. ಒಂದು ವೇಳೆ ಧನ್ಯಾ ಕಾಲಿವುಡ್ ಪ್ರವೇಶಿಸಿದರೆ ರಜನಿಕಾಂತ್ ಬೆಂಬಲವೂ ಸಿಗಲಿದೆ ಎಂಬ ಮಾತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ರಜನಿ, ಬಿ ಸರೋಜದೇವಿ ಅವರ ಜೊತೆಗೆ ಧನ್ಯಾ ಕಾಣಿಸಿಕೊಂಡಿರುವ ಫೋಟೋವೊಂದು ತಮಿಳು ವೆಬ್‌ಸೈಟ್‌ಗಳಲ್ಲಿ ವೈರಲ್ ಆಗಿದೆ.

  ಮೋಡಿ ಮಾಡುತ್ತಿದೆ 'ನಿನ್ನ‌ ಸನಿಹಕೆ' ಚಿತ್ರದ ರಘು ದೀಕ್ಷಿತ್ ಹಾಡುಮೋಡಿ ಮಾಡುತ್ತಿದೆ 'ನಿನ್ನ‌ ಸನಿಹಕೆ' ಚಿತ್ರದ ರಘು ದೀಕ್ಷಿತ್ ಹಾಡು

  ಧೀರೆನ್ ಮೊದಲ ಸಿನಿಮಾ ರೆಡಿ

  ಧೀರೆನ್ ಮೊದಲ ಸಿನಿಮಾ ರೆಡಿ

  ರಾಜ್ ಕುಮಾರ್ ಅವರ ಮೊಮ್ಮಗಳು ಮಾತ್ರವಲ್ಲ, ಮೊಮ್ಮಗ ಸಹ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ರಾಮ್ ಕುಮಾರ್-ಪೂರ್ಣಿಮಾ ದಂಪತಿಯ ಮಗ ಹಾಗೂ ಧನ್ಯಾ ರಾಮ್ ಕುಮಾರ್ ಸಹೋದರ ಧೀರೆನ್ ರಾಮ್ ಕುಮಾರ್ 'ಶಿವ 143' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅನಿಲ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹಾಕಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ 'ದಾರಿ ತಪ್ಪಿದ ಮಗ' ಎಂದು ಹೆಸರಿಡಲಾಗಿತ್ತು.

  ಸೂರಜ್ ಗೌಡ ನಿರ್ದೇಶನ

  ಸೂರಜ್ ಗೌಡ ನಿರ್ದೇಶನ

  ಅಂದ್ಹಾಗೆ, ಧನ್ಯಾ ನಟಿಸಿರುವ 'ನಿನ್ನ ಸನಿಹಕೆ' ಚಿತ್ರದಲ್ಲಿ ಸೂರಜ್ ಗೌಡ ನಟಿಸಿ ನಿರ್ದೇಶಿಸಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ರಘು ದೀಕ್ಷಿತ್ ಸಂಗೀತ ಒದಗಿಸಿದ್ದಾರೆ.

  English summary
  Dr Rajkumar's Granddaughter Dhanya Ramkumar to debut in Kollywood said Report.
  Monday, July 26, 2021, 15:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X