ಕಾಲಿವುಡ್ ಡೈರೆಕ್ಟರ್ ಶಂಕರ್ ವಿರುದ್ದ ಕಥೆ ಕದ್ದ ಆರೋಪ, ಆಸ್ತಿ ವಶಪಡಿಸಿಕೊಂಡ ಇಡಿ..!

ಜೆಂಟಲ್ ಮನ್ .. ಕಾದಲನ್ .. ಇಂಡಿಯನ್ .. ಜೀನ್ಸ್ .. ಬಾಯ್ಸ್ .. ಅನಿಯನ್ .. ಶಿವಾಜಿ .. ಪ್ರಸ್ತುತ ಇಂಡಿಯನ್ 2 ಸೇರಿ ಹತ್ತಾರು ಚಿತ್ರ ನಿರ್ದೇಶಿಸಿರುವ ಹೆಗ್ಗಳಿಕೆ ಶಂಕರ್ ಷಣ್ಮುಗಂ ಅವರದ್ದು. ಸದಭಿರುಚಿ ಚಿತ್ರಗಳ ಮೂಲಕ ಅಪಾರವಾದ ಅಭಿಮಾನಿ ಬಳಗವನ್ನು ಕೂಡ ಹೊಂದಿರುವ ಶಂಕರ್ ರಾಜಕೀಯ, ಭ್ರಷ್ಟಾಚಾರದ ಸುತ್ತ ಚಿತ್ರಕಥೆಯನ್ನು ಹೆಣೆಯುವಲ್ಲಿ ನಿಸ್ಸೀಮರು. ಇಂಥಾ ಶಂಕರ್‌ಗೆ ಈಗ ಇಡಿ ಶಾಕ್ ನೀಡಿದೆ. ಹತ್ತು ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.

ಹೌದು, ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಐಶ್ವರ್ಯ ರೈ ಅಭಿನಯದ 'ಎಂಥಿರನ್' ನಿರ್ದೇಶಕ ಎಸ್. ಶಂಕರ್ ಗೆ ಇಡಿ ಶಾಕ್ ನೀಡಿದೆ. 2010 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಕೃತಿಚೌರ್ಯ ಮತ್ತು ಹಕ್ಕುಸ್ವಾಮ್ಯ ಉಲ್ಲಂಘನೆಯ ಆರೋಪಗಳನ್ನು ಎದುರಿಸಿತ್ತು.

ED attaches 10Cr worth of assets from Shankar in Enthiran plagiarism case

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಶಂಕರಿಗೆ ಅವರಿಗೆ ಸೇರಿದ ರೂ.10 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ತಿಳಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಕೃತಿಚೌರ್ಯ ಅಥವಾ ಹಕ್ಕು ಸ್ವಾಮ್ಯ ಉಲ್ಲಂಘನೆ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಆಸ್ತಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ದೇಶಕ ಎಸ್ ಶಂಕರ್ ಅವರ ಮೂರು ಸ್ಥಿರಾಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ವಶಕ್ಕೆ ಪಡೆದು ಫೆಬ್ರವರಿ 17 ರಂದು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ. ಈ ಆಸ್ತಿಗಳ ಒಟ್ಟು ಮೌಲ್ಯ 10.11 ಕೋಟಿ ರೂಪಾಯಿ ಎಂದು ED ಹೇಳಿಕೆಯಲ್ಲಿ ತಿಳಿಸಿದೆ.

ಮೇ 19, 2011 ರಂದು ಚೆನ್ನೈನ ಎಗ್ಮೋರ್ ನ್ಯಾಯಾಲಯದಲ್ಲಿ ಶಂಕರ್ ವಿರುದ್ಧ ಜಿಗುಬಾ ಎಂಬ ಶೀರ್ಷಿಕೆಯ ಕಥೆಯ ಲೇಖಕ ಆರೂರ್ ತಮಿಳುನಾಡನ್ ಅವರು ಸಲ್ಲಿಸಿದ ದೂರಿನಿಂದ ಹಣ ವರ್ಗಾವಣೆ ಪ್ರಕರಣ ಹೊರಗೆ ಬಂದಿತ್ತು. ಶಂಕರ್ ನಿರ್ದೇಶಿಸಿದ ತಮಿಳು ಚಲನಚಿತ್ರ ಎಂಥಿರನ್ (ರೋಬೋಟ್) ಕಥಾಹಂದರವನ್ನು ಜಿಗುಬಾದಿಂದ ನಕಲು ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

'ರೋಬೊ' ಸಿನಿಮಾದ ಕತೆ ಹಾಗೂ ಚಿತ್ರಕತೆಯನ್ನು ಶಂಕರ್ ಜೊತೆಗೆ ಸುಜಾತ ಸೇರಿ ರಚಿಸಿದ್ದರು. ಸುಜಾತಾ, ಖ್ಯಾತ ಸಿನಿಮಾ ಕತೆಗಾರರಾಗಿದ್ದು, ಶಂಕರ್​ರ ಹಲವಾರು ಸಿನಿಮಾಗಳಿಗೆ ಕತೆ, ಚಿತ್ರಕತೆಯನ್ನು ಒದಗಿಸಿರುವುದು ಅವರೇ. ಇತ್ತೀಚೆಗಷ್ಟೆ ಶಂಕರ್ ಅವರಿಂದ ಸುಜಾತಾ ದೂರಾಗಿದ್ದಾರೆ. ಸುಜಾತಾ ದೂರಾದ ಬಳಿಕ ಶಂಕರ್ ನಿರ್ದೇಶನ ಮಾಡಿದ ಎರಡು ಸಿನಿಮಾಗಳು ಫ್ಲಾಪ್ ಆಗಿವೆ. 'ರೋಬೊ' ಸಿನಿಮಾದ ಕತೆ ರಚನೆಯಲ್ಲಿ ಸುಜಾತಾ ಪಾತ್ರವೂ ಇದೆ. ಆದರೆ ಅವರಿಗೆ ಸ್ಟೋರಿ ಕ್ರೆಡಿಟ್ ನೀಡಿಲ್ಲವಾದ್ದರಿಂದ, ಇದೀಗ ಶಂಕರ್ ಮೇಲೆ ಮಾತ್ರವೇ ಪ್ರಕರಣ ದಾಖಲಾಗಿದೆ.

2010 ರಲ್ಲಿ 'ರೋಬೊ' ಸಿನಿಮಾ ನಿರ್ದೇಶನ ಮಾಡಿದ್ದಕ್ಕೆ ಶಂಕರ್​ಗೆ 11.5 ಕೋಟಿ ಸಂಭಾವನೆ ದೊರೆತಿತ್ತಂತೆ. ಅದೇ ಕಾರಣಕ್ಕೆ ಈಗ ಶಂಕರ್​ಗೆ ಸೇರಿದ ಸುಮಾರು 10 ಕೋಟಿ ಮೌಲ್ಯದ ಸ್ಥಿರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಸ್ತುತ ಸಿನಿಮಾ ವಿಷಯಗಳಿಗೆ ಬರುವುದಾದರೆ ಶಂಕರ್ ನಿರ್ದೇಶನದ 'ಇಂಡಿಯನ್ 2' ಮತ್ತು 'ಗೇಮ್ ಚೇಂಜರ್' ಸಿನಿಮಾಗಳು ಒಂದರ ಹಿಂದೊಂದರಂತೆ ಫ್ಲಾಪ್ ಆಗಿವೆ.

More from Filmibeat

Read more about: shankar kollywood filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X