ಸ್ಮೃತಿ ಮಂಧಾನ ನಂತರ ನುಚ್ಚು ನೂರಾಯ್ತು ನಟಿಯ ಕನಸು ; ನಿಶ್ಚಿತಾರ್ಥದ ನಂತರ ಮುರಿದು ಬಿತ್ತು ಮದುವೆ ? ಆ ಸಂಬಂಧ ಕಾರಣ ?
ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು. ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ..
ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಇದಕ್ಕೆ ನಿವೇತಾ ಪೆತುರಾಜ್ ಅವರ ವ್ಯೆಯಕ್ತಿಕ ಬದುಕು ಮತ್ತೊಂದು ಉದಾಹರಣೆ. ಹೌದು, ನಿವೇತಾ ಪೆತುರಾಜ್.. ಕಾಲಿವುಡ್ ಮತ್ತು ಟಾಲಿವುಡ್‌ನ ಚೆಲುವೆ.

''ಒರು ನಾಲ್ ಕೂತು'' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಿವೇತಾ ಆ ನಂತರ ''ಟಿಕ್ ಟಿಕ್ ಟಿಕ್''.. ''ಚಿತ್ರ ಲಹರಿ''.. ''ಸಂಗತ ತಮಿಳನ್''.. ''ಅಲಾ ವೈಕುಂಡಪುರಂಲೊ''.. ''ರೆಡ್ ''.. ''ಪಾಗಲ್''.. ''ದಸ್ ಕಾ ಧಮ್ಕಿ''.. ''ಪಾರ್ಟಿ''..
ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸಿದರು. ತಮ್ಮ ಅಭಿನಯದಲ್ಲಿ ಆಂಧ್ರ ಮತ್ತು ತಮಿಳುನಾಡು ಪ್ರೇಕ್ಷಕರ ಹೃದಯವನ್ನು ಗೆದ್ದರು. ಇನ್ನು ನಿವೇತಾ ಕೇವಲ ನಾಯಕಿ ಮಾತ್ರ ಅಲ್ಲ ಬದಲಿಗೆ ಬಹುಮುಖ ಪ್ರತಿಭೆ. ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಮಟ್ಟದಲ್ಲಿ ಮಿಂಚಿದವರು ಇವರು. ಇಷ್ಟೇ ಅಲ್ಲದೇ ಫಾರ್ಮುಲಾ ಒನ್ ರೇಸಿಂಗ್‌ನಲ್ಲಿ ತರಬೇತಿಯನ್ನು ಕೂಡ ಇವರು ಪಡೆದಿದ್ದಾರೆ.
ಇಂಥಾ ನಿವೇತಾ ಪೆತುರಾಜ್ ಈ ವರ್ಷದ ಆಗಸ್ಟ್‌ನಲ್ಲಿ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ತಮ್ಮ ಕೈ ಹಿಡಿಯುತ್ತಿರುವ ಹುಡುಗನನ್ನು ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಪರಿಚಯಿಸಿದ್ದರು. ದುಬೈನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಮಿಂಚಿರುವ ರಜಿತ್ ಇಬ್ರಾನ್ ಜೊತೆ ಮದುವೆಯಾಗುತ್ತಿರುವುದಾಗಿ ಹೇಳಿದ್ದರು.
ಮದುವೆಯ ಕುರಿತು ಸುದ್ದಿಯನ್ನು ಮಾಡಿದ್ದ ''123 ತೆಲುಗು'' ವೆಬ್ ಸೈಟ್ ನಿವೇತಾ ಮತ್ತು ರಜಿತ್ ಮದುವೆ ಈ ವರ್ಷದ ಕೊನೆಯಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯನ್ನು ಮಾಡಿತ್ತು. ಕೇವಲ ತಮ್ಮ ಕುಟುಂಬಸ್ಥರನ್ನು ಹೊರತು ಪಡಿಸಿದರೆ ಕೇವಲ ಆಪ್ತ ಸ್ನೇಹಿತರನ್ನು ಮಾತ್ರ ಕರೆಯಲು ಇಬ್ಬರು ಉದ್ದೇಶಿಸಿದ್ದಾರೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಆದರೆ.. ಈಗ ಈ ಮದುವೆ ಮುರಿದು ಬಿದ್ದಂತೆ ಇದೆ. ಇದಕ್ಕೆ ಪುರಾವೆ ಎನ್ನುವಂತೆ ನಿವೇತಾ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಶ್ಚಿತಾರ್ಥದ ಫೋಟೊಗಳನ್ನು ಡಿಲೀಟ್ ಮಾಡಿದ್ದಾರೆ. ರಜಿತ್ ಇಬ್ರಾನ್ ಅವರ ನೆನಪುಗಳನ್ನು ಅಳಸಿ ಹಾಕಿದ್ದಾರೆ. ಪರಸ್ಪರ ಇಬ್ಬರು ಅನ್‌ಫಾಲೋ ಕೂಡ ಮಾಡಿದ್ದಾರೆ.
ಇನ್ನೂ ಇದರ ನಡುವೆ ನಿವೇತಾ ಮದುವೆಯಾಗಬೇಕಿದ್ದ ರಜಿತ್ ಇಬ್ರಾನ್ ಅವರಿಗೆ ಈ ಹಿಂದೆ ''ಬಿಗ್ ಬಾಸ್'' ಖ್ಯಾತಿಯ ಜೂಲಿ ಜೊತೆ ಸಂಬಂಧ ಇತ್ತು ಎನ್ನುವ ಸುದ್ದಿ ಕೂಡ ಹಬ್ಬಿದೆ. ಜೂಲಿ ಜೊತೆ ರಜಿತ್ ಇಬ್ರಾನ್ ತೀರಾ ಆಪ್ತವಾಗಿರುವ ಖಾಸಗಿ ಫೋಟೊಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಕಳೆದ ದಿನಗಳಿಂದ ನಿವೇತಾ ಏಕಾಂತ.. ಹೊಸ ಆರಂಭ.. ಎಂದೆಲ್ಲಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ. ಇದೆಲ್ಲದರಿಂದ ನಿವೇತಾ ಪೆತುರಾಜ್ ಮದುವೆ ಮುರಿದು ಬಿದ್ದಿದೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಮದುವೆ ಮುರಿದು ಬೀಳಲು ನಿಜವಾದ ಕಾರಣವೇನು ? ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
ಈ ಪ್ರಶ್ನೆಗಳಿಗೆ ನಿವೇತಾ ಪೆತುರಾಜ್ ಉತ್ತರ ಕೊಡ್ತಾರಾ..? ತಮ್ಮ ಮದುವೆಯ ಸುತ್ತ ಮುತ್ತ ಕೇಳಿ ಬರುತ್ತಿರುವ ಸುದ್ದಿಗಳಿಗೆ ಸ್ಪಷ್ಟೀಕರಣ ಕೊಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆಯಾದರೂ ಸದ್ಯ ನಿವೇತಾ ಪೆತುರಾಜ್ ಅವರಿಗೆ ಹಲವರು ಸಾಂತ್ವಾನ ಹೇಳುತ್ತಿದ್ದಾರೆ. ಈ ನೋವಿಂದ ಶೀಘ್ರ ಚೇತರಿಸಿಕೊಂಡು ಚಿತ್ರರಂಗಕ್ಕೆ ಮರಳಿ ಬನ್ನಿ ಎಂದು ಹೇಳುತ್ತಿದ್ದಾರೆ.


Click it and Unblock the Notifications











