ಸ್ವಿಮ್‌ಸೂಟ್ ಧರಿಸಿ ಬೀಚ್‌ನಲ್ಲಿ ಸಾಯಿ ಪಲ್ಲವಿ ಮೋಜು ಮಸ್ತಿ; ಫೋಟೊಸ್ ವೈರಲ್
ಬಹುಭಾಷಾ ನಟಿ ಸಾಯಿ ಪಲ್ಲವಿ 'ರಾಮಾಯಣ' ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸುತ್ತಿದ್ದಾರೆ. ಎರಡು ಭಾಗಗಳಾಗಿ ಸಿನಿಮಾ ತೆರೆಮೇಲೆ ಬರಲಿದೆ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಾಯಿ ಪಲ್ಲವಿ ಇತ್ತೀಚೆಗೆ ಸಹೋದರಿ ಜೊತೆ ಮೋಜು ಮಸ್ತಿ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ವೈರಲ್ ಆಗ್ತಿದೆ.
ಬರೀ ಸಿನಿಮಾಗಳಿಂದ ಮಾತ್ರವಲ್ಲ ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆಗಳಿಂದಲೂ ನಟಿ ಸಾಯಿ ಪಲ್ಲವಿ ಸುದ್ದಿ ಆಗಿದ್ದಾರೆ. ಅದೇ ಕಾರಣಕ್ಕೆ ಆಕೆ ಸಾಕಷ್ಟು ಟ್ರೋಲ್ ಎದುರಿಸುವಂತೆ ಆಗಿತ್ತು. ಕಳೆದ ವರ್ಷ ಸಹೋದರಿ ಪೂಜಾ ಕಣ್ಣನ್ ಮದುವೆ ಸಂಭ್ರಮದಲ್ಲಿ ಸಾಯಿ ಪಲ್ಲವಿ ಮಿಂದೆದ್ದಿದ್ದರು. ಇತ್ತೀಚೆಗೆ ಪೂಜಾ ಮೊದಲ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇದೇ ಸಮಯದಲ್ಲಿ ತಂಗಿ ಜೊತೆ ವಿದೇಶಗಳಲ್ಲಿ ಸುತ್ತಾಡಿದ್ದಾರೆ.

ಕಡಲ ಕಿನಾರೆಯಲ್ಲಿ ತಂಗಿ ಪೂಜಾ ಜೊತೆ ಸ್ವಿಮ್ ಸೂಟ್ ಧರಿಸಿ ನೀರಿನಲ್ಲಿ ಚೆಲ್ಲಾಟ ಆಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಪೂಜಾ ಹಂಚಿಕೊಂಡಿದ್ದಾರೆ. ಸದಾ ತೆರೆಮೇಲೆ ಟ್ರೆಡಿಷನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಸಾಯಿ ಪಲ್ಲವಿ ಒಮ್ಮೆಲೆ ಸ್ವಿಮ್ ಸೂಟ್ ಧರಿಸಿ ದರ್ಶನ ಕೊಟ್ಟಿರುವುದು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಎಂದಿನಂತೆ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
ಬರೀ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳುತ್ತಾರೆ ಸಾಯಿ ಪಲ್ಲವಿ, ಈಗ ನೋಡಿದ್ರೆ ಬಿಕಿನಿ ಹಾಕಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಯಿ ಪಲ್ಲವಿ ಸ್ಲಿವ್ ಲೆಸ್ ಕೂಡ ಹಾಕಲ್ಲ ಎನ್ನುತ್ತಿದ್ದವರು ಈಗ ಎಲ್ಲಿದೀರಪ್ಪಾ? ಎಂದು ಮತ್ತೊಬ್ಬರು ವ್ಯಂಗ್ಯವಾಡಿದ್ದಾರೆ. ತೆರೆಮೇಲೆ ಮಾತ್ರ ಟ್ರೆಡಿಷನಲ್ ಆಗಿ ಕಾಣಿಸಿಕೊಳ್ಳೋದಾ? ಎಂದು ಮಗದೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಸಾಯಿ ಪಲ್ಲವಿ ಸ್ವಿಮ್ ಸೂಟ್ ಧರಿಸಿರುವ ಫೋಟೊಗಳನ್ನು ಕೆಲವರು ಮಾರ್ಪ್ ಮಾಡಿ ವೈರಲ್ ಮಾಡುತ್ತಿದ್ದಾರೆ. ಆಕೆ ಮೊನಾಕಿನಿ ಧರಿಸಿರುವಂತೆ ಫೋಟೊಗಳನ್ನು ಮಾರ್ಪ್ ಮಾಡಿರುವುದು ನೋಡಬಹುದು. ಅಭಿಮಾನಿಗಳು ಆಕೆಯ ಬೆಂಬಲಕ್ಕೆ ನಿಂತಿದ್ದಾರೆ. ಫೋಟೊಗಳನ್ನು ಮಾರ್ಪ್ ಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ರಾವಣನಾಗಿ ಯಶ್ ಅಬ್ಬರಿಸಲಿದ್ದಾರೆ. ನಿಮಿತ್ ಮಲ್ಹೋತ್ರಾ ಜೊತೆ ಸೇರಿ ಯಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 4000 ಕೋಟಿ ರೂ. ಬಜೆಟ್ ಸಿನಿಮಾ ಇದು ಎಂದು ನಿರ್ಮಾಪಕರೇ ಹೇಳಿದ್ದಾರೆ. ಹಾಲಿವುಡ್ ತಂತ್ರಜ್ಞರು ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
ನಟಿ ಸಾಯಿ ಪಲ್ಲವಿಗೆ ಸ್ಕಿನ್ ಶೋ ಬಗ್ಗೆ ಬೇಸರವಿಲ್ಲ. ಆದರೆ ಈ ಹಿಂದೆ ಆಗಿದ್ದ ಕಹಿ ಅನುಭವದಿಂದ ಆಕೆ ತೆರೆಮೇಲೆ ಟ್ರೆಡಿಷನಲ್ ಆಗಿ ಮಾತ್ರ ಕಾಣಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದರು. 'ನಾನು ತುಂಡು ಬಟ್ಟೆಯ ವಿರೋಧಿಯಲ್ಲ. ನಾನು ಕ್ರೀಡಾಪಟು ಆಗಿದ್ದವಳು ಆಗೆಲ್ಲ ನಾನು ತುಂಡು ಬಟ್ಟೆ ಹಾಕಿದ್ದೆ, ಅದು ನನಗೆ ಮುಜುಗರ ತರುತ್ತಿರಲಿಲ್ಲ" ಎಂದು ಸ್ವತಃ ಸಾಯಿ ಪಲ್ಲವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
"ಜಾರ್ಜಿಯಾದಲ್ಲಿ ಇದ್ದಾಗ ಟ್ಯಾಂಗೋ ಡ್ಯಾನ್ಸ್ ಮಾಡಲು ಗ್ಲಾಮರಸ್ ಆಗಿ ಸ್ಲಿಟ್ ಡ್ರೆಸ್ ತೊಟ್ಟಿದ್ದೆ. ಡ್ಯಾನ್ಸ್ ಪ್ರಾಕ್ಟಿಸ್ ವೀಡಿಯೋ ವೈರಲ್ ಆಗಿತ್ತು. ಆದರೆ 'ಪ್ರೇಮಂ' ಸಿನಿಮಾ ಬಿಡುಗಡೆ ಬಳಿಕ ಆ ವೀಡಿಯೋವನ್ನು ಎಡಿಟ್ ಮಾಡಿ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಬಿಂಬಿಸಿದ್ರು. ಅದನ್ನು ನೋಡಿ ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡಿದ್ರು, ಅದನ್ನು ನೋಡಿ ನಾಚಿಕೆ, ಬೇಸರ ಆಗಿತ್ತು. ಆ ಘಟನೆ ಬಳಿಕ ನಾನು ತುಂಡು ಉಡುಗೆ, ಗ್ಲಾಮರಸ್ ಉಡುಗೆ ತೊಡುವುದಕ್ಕೆ ಮನಸ್ಸು ಮಾಡಲಿಲ್ಲ" ಎಂದು ಸಾಯಿ ಪಲ್ಲವಿ ಹೇಳಿದ್ದರು.


Click it and Unblock the Notifications











