ಭುಜದ ಮೇಲಿನ ಕೈ ತೆಗೆಯುವಂತೆ ದಳಪತಿ ವಿಜಯ್‌ಗೆ ಹೇಳಿದ ಬಾಲಕಿ, ಆದರೆ...!
ಸೆಲೆಬ್ರೆಟಿಗಳು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆಂದರೆ ಅಭಿಮಾನಿಗಳು ಅವರನ್ನು ಹಿಂಬಾಲಿಸೋದು.. ಸೆಲ್ಪಿ ಕೇಳೋದು.. ಮಾತನಾಡಲು ಹವಣಿಸೋದು ಕಾಮನ್ನು. ಯಾಕೆಂದರೆ ಅವರೆಲ್ಲ ಈ ಪ್ರಪಂಚದವರಲ್ಲ ಬದಲಿಗೆ ದೇವ ಮಾನವರೆನ್ನುವುದು ಅನೇಕರಲ್ಲಿರುವ ಕಲ್ಪನೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಹುಡುಗಿಯೊಬ್ಬಳು ತನ್ನ ಹೆಗಲ ಮೇಲೆ ಇಳಯ ದಳಪತಿ ಬಿರುದಾಂಕಿದ ವಿಜಯ್ ಕೈ ಹಾಕಿದರೂ ಸೂಪರ್ ಸ್ಟಾರ್‌ಗೆ ಕೈ ತೆಗೆಯುವಂತೆ ಹೇಳಿದ್ದಾಳೆ. ಈ ಮೂಲಕ ಸುದ್ದಿಯಾಗಿದ್ದಾಳೆ.
ಹೌದು, ಸಿನಿಮಾ ಜೊತೆ ಜೊತೆಯಲ್ಲಿಯೇ ರಾಜಕೀಯದ ಮೇಲೂ ಕಣ್ಣೀಟ್ಟಿರುವ ವಿಜಯ್ , ವಿದ್ಯಾರ್ಥಿಗಳಿಗೆ ಆಗಾಗ ಕಿವಿ ಮಾತನ್ನೂ ಹೇಳುತ್ತಾರೆ. ಸಲಹೆಯನ್ನೂ ನೀಡಿ ಬದುಕಿನ ಪಾಠವನ್ನೂ ಮಾಡುತ್ತಾರೆ. ಇಷ್ಟೇ ಅಲ್ಲದೇ 10 ಮತ್ತು 12ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಜಯ್ ನಗದು ಪುರಸ್ಕಾರವನ್ನು ಪರಿಪಾಠವನ್ನೂ ಬೆಳಿಸಿಕೊಂಡಿದ್ದಾರೆ ವಿಜಯ್. ಇಂಥ ವಿಜಯ್ ತಮ್ಮ ರಾಜಕೀಯ ಪಕ್ಷ ವೆಟ್ರಿ ಕಳಗಂ ವತಿಯಿಂದ ಆಯೋಜಿಸಿದ್ದ ಎರಡನೇ ವಾರ್ಷಿಕ ಶಿಕ್ಷಣ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು. 10 ಮತ್ತು 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದವರನ್ನು ಸನ್ಮಾನಿಸಿದರು.

ಇದೇ ಸಮಯದಲ್ಲಿ ಉತ್ತಮ ಅಂಕ ಪಡೆದ ಹುಡುಗಿಯನ್ನೂ ಕರೆದು ಸನ್ಮಾನ ಮಾಡಿದ ವಿಜಯ್, ಆ ಹುಡುಗಿಯ ಭುಜದ ಮೇಲೆ ಕೈ ಹಾಕಿ.. ಫೋಟೋ ತೆಗೆಸಿಕೊಳ್ಳಲು ಮುಂದಾದರು. ಆದರೆ ಇದೇ ಸಮಯದಲ್ಲಿ ಆ ಹುಡುಗಿ ತನ್ನ ಹೆಗಲಿನ ಮೇಲಿನ ಕೈಯನ್ನೂ ತೆಗೆಯುವಂತೆ ವಿಜಯ್‌ಗೆ ಹೇಳಿದ್ದಾಳೆ. ವಿರೋಧಿಗಳಿಗೆ ಇಷ್ಟೇ ಸಾಕಿತ್ತು. ಕೂಡಲೇ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಎದುರಾಳಿ ಪಡೆ ವೈರಲ್ ಮಾಡಿದೆ. ವೈರಲ್ ಆದ ಈ ವಿಡಿಯೋವನ್ನು ನೋಡಿದ ಅನೇಕರು, ಸತ್ಯಾಸತ್ಯತೆ ತಿಳಿಯದೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಜಯ್ ಅವರನ್ನು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಆದರೆ.. ವಾಸ್ತವದಲ್ಲಿ ವೈರಲ್ ವಿಡಿಯೋ ಹಿಂದಿನ ಸತ್ಯಾಂಶವೇ ಬೇರೆ.
ಹೌದು, ಅಸಲಿಗೆ.. ವೈರಲ್ ಮಾಡಲಾದ ವಿಡಿಯೋದಲ್ಲಿ ಕೇವಲ ಅರ್ಧ ಸತ್ಯ ಮಾತ್ರ ಇದೆ. ನಿಜಾ.. ತಮ್ಮ ಭುಜದ ಮೇಲಿನ ಕೈಯನ್ನು ತೆಗೆಯುವಂತೆ ಆ ಹುಡುಗಿ ವಿಜಯ್ ಹೇಳಿದ್ದಾಳೆ. ಆದರೆ.. ಆ ನಂತರ ಹುಡುಗಿ ಕ್ಯಾಮೆರಾಗಳಿಗೆ ಪೋಸ್ ನೀಡುವಾಗ ಅವರ ತೋಳನ್ನು ಹಿಡಿದಿದ್ದಾಳೆ. ಫೋಟೋವನ್ನೂ ಕ್ಲಿಕಿಸಿಕೊಂಡಿದ್ದಾಳೆ. ವಿಡಿಯೋದಲ್ಲಿನ ಈ ಭಾಗವನ್ನು ಕತ್ತರಿಸಿ ಬಿಸಾಕಿರುವ ಕಿಡಿಗೇಡಿಗಳು ಅರ್ಧ ವಿಡಿಯೋ ಮಾತ್ರ ಹಂಚಿಕೊಂಡು ವೈರಲ್ ಮಾಡಿದ್ದಾರೆ. ವಿಜಯ್ ಅವರ ಇಮೇಜ್ ಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನೂ ಹರಡಿಸಿದ್ದಾರೆ.
hats off to this girl for showing this idli his place pic.twitter.com/PN1YW3lKru
— Moana (@ladynationalist) June 29, 2024
ಉಳಿದಂತೆ ಈ ಸಮಾರಂಭದಲ್ಲಿ ನಟ ವಿಜಯ್ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುವ ಮೂಲಕ ಅವರನ್ನು ಶಿಕ್ಷಣದ ಕಡೆಗೆ ಪ್ರೇರೆಪಿಸಿದ್ದಾರೆ. ಕೆಟ್ಟ ಚಟಗಳಿಂದ ದೂರವಿರಲು ಒತ್ತಾಯಿಸಿದ್ದಾರೆ. ಮತ್ತು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಹಾಗೂ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಅದೇ ಕೊನೆ ಅವಕಾಶವೆಂದು ಅಂದುಕೊಳ್ಳಬಾರದು. ಯಶಸ್ಸು ಎಂದಿಗೂ ಕೊನೆಗೊಳ್ಳುವುದಿಲ್ಲ ಮತ್ತು ವೈಫಲ್ಯವು ಎಂದಿಗೂ ಅಂತಿಮವಲ್ಲ ಎಂದು ವಿದ್ಯಾರ್ಥಿಗಳಿಗೆ ಹೇಳಿದ್ದಾರೆ ವಿಜಯ್.
Oooo CHOLE BHATORE WAALI, "Fan Moment" mein bhi tatti karne ki aadat nahi jayegi tum jaise "Z" Class logo ke....
— NETAJI🙏 (@__NETAJI__) June 29, 2024
(For those who might think wrong)
Here is the rest of the Video that She Cut to be a Cindi Chor..... @actorvijay pic.twitter.com/czoqbg347F


Click it and Unblock the Notifications











